ಮಶ್ರೂಮ್ ಬೀಜದ ಚೀಲಗಳ ಮಧ್ಯೆ ಗೋವಾ ಮದ್ಯ! ಖದೀಮರ ಪ್ಲಾನ್ ನೋಡಿ ಬೆಚ್ಚಿಬಿದ್ದ ಅಬಕಾರಿ ಪೊಲೀಸರು!
ಸಿನಿಮಾ ಶೈಲಿಯಲ್ಲಿ ಗೋವಾದಿಂದ ರಾಜ್ಯಕ್ಕೆ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ಹೈಟೆಕ್ ಲಿಕ್ಕರ್ ಸ್ಮಗ್ಲಿಂಗ್ ಗ್ಯಾಂಗ್ ಮೇಲೆ ಭರ್ಜರಿ ಕಾರ್ಯಾಚರಣೆ ನಡೆಸಿ ಅಪಾರ ಪ್ರಮಾಣದ ಮದ್ಯ ಜಪ್ತಿ, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು.
ಬೆಳಗಾವಿ (ಡಿ.22): ಸಿನಿಮಾ ಶೈಲಿಯಲ್ಲಿ ಗೋವಾದಿಂದ ರಾಜ್ಯಕ್ಕೆ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ಹೈಟೆಕ್ ಲಿಕ್ಕರ್ ಸ್ಮಗ್ಲಿಂಗ್ ಗ್ಯಾಂಗ್ ಮೇಲೆ ಭರ್ಜರಿ ಕಾರ್ಯಾಚರಣೆ ನಡೆಸಿ ಅಪಾರ ಪ್ರಮಾಣದ ಮದ್ಯ ಜಪ್ತಿ, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು.
ಮೆಹಬೂಬ್ ಮತ್ತು ಆಸೀಫ್ ಬಂಧಿತ ಆರೋಪಿಗಳು. ಯರಗಟ್ಟಿ ನಿವಾಸಿ ಮೆಹಬೂಬ್ ಹಾಗೂ ಬಾಗಲಕೋಟೆ ಮೂಲದ ಆಸೀಪ್ ಬಂಧನ. ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಅಬಕಾರಿ ಪೊಲೀಸರು.
ಕೋಲಾರ ಘಟನೆ ಮಾಸುವ ಮುನ್ನವೇ ಮತ್ತೊಂದು ಅಮಾನವೀಯ ಕೃತ್ಯ; ಶಾಲಾ ಮಕ್ಕಳಿಂದಲೇ ಟಾಯ್ಲೆಟ್ ಕ್ಲೀನ್ ಮಾಡಿಸಿದ ಶಿಕ್ಷಕರು!
ಮಶ್ರೂಮ್ ಚೀಲಗಳ ಮಧ್ಯೆ ಮದ್ಯ!
ಖದೀಮರ ಪ್ಲಾನ್ ಯಾವ ಸಿನಿಮಾಗಳಿಗೂ ಕಡಿಮೆ ಇಲ್ಲದಂತ ಪ್ಲಾನ್. 16 ಚಕ್ರಗಳ ಲಾರಿಯಲ್ಲಿ ತುಂಬಿರುವ ಮಶ್ರೂಮ್ ಬೀಜದ ಚೀಲಗಳು. ಚೀಲಗಳ ಮಧ್ಯೆ ಗೋವಾ ಮದ್ಯದ ಬಾಕ್ಸ್ ಇಟ್ಟು ಸಾಗಾಟ ಮಾಡುತ್ತಿದ್ದ ಖದೀಮರು. ಗೋವಾದಿಂದ ಕರ್ನಾಟಕ ಮಾರ್ಗವಾಗಿ ಮಧ್ಯಪ್ರದೇಶಕ್ಕೆ ಸಾಗಾಟ ಮಾಡಲು ಖತರ್ನಾಕ್ ಪ್ಲಾನ್ ಮಾಡಿದ್ದ ಖದೀಮರು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿರುವ ಅಬಕಾರಿ ಪೊಲೀಸರು.
ಬೆಳಗಾವಿಯ ಕಾಕತಿ ಬಳಿ ಲಾರಿ ವಶಕ್ಕೆ ಪಡೆದು ಪೊಲೀಸರು ಪರಿಶೀಲಿಸಿದಾಗ ಶಾಕ್. ಮಶ್ರೂಮ್ ಮೂಟೆಗಳ ಮಧ್ಯೆ ಅಪಾರ ಪ್ರಮಾಣದ ಮದ್ಯದ ಬಾಕ್ಸ್‌ಗಳು. ಈ ರೀತಿ ಅಕ್ರಮ ಮದ್ಯಸಾಗಾಟ ಜಾಲ ಕಂಡು ಹೌಹಾರಿದ ಬೆಳಗಾವಿ ಜನರು. ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತ ನಿಂತ ಕಾಲೇಜು ಯುವಕರು.
ಗೋವಾದಿಂದ 'ಪುಷ್ಪ' ಸಿನಿಮಾ ಸ್ಟೈಲ್‌ನಲ್ಲಿ ಮದ್ಯ ಸಾಗಾಟ; ಗೂಡ್ಸ್ ವಾಹನ ಜಪ್ತಿ
ಕಳೆದ ಮೂರು ತಿಂಗಳಲ್ಲೇ ಇದು ಐದನೇ ಯಶಸ್ವಿ ಕಾರ್ಯಾಚರಣೆಯಾಗಿದೆ. ಕಳೆದ ತಿಂಗಳು ಸಹ ಇದೇ ರೀತಿ ಬೃಹತ್ ಕಾರ್ಯಾಚರಣೆ ನಡೆಸಿ ಅಪಾರ ಪ್ರಮಾಣದ ಮದ್ಯ ವಶಪಡಿಸಿಕೊಂಡಿದ್ದ ಪೊಲೀಸರು. ಇದೀಗ ಅಪಾರ ಪ್ರಮಾಣದ ಮದ್ಯ ಸೇರಿದಂತೆ ಸುಮಾರು ಎರಡು ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ ಪೊಲೀಸರು.
ಹೊಸವರ್ಷಾಚರಣೆ ಹಿನ್ನೆಲೆ ಗೋವಾದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಮದ್ಯ ಸಾಗಾಟ ಮಾಡಲಾಗುತ್ತಿದೆ ಈ ಹಿನ್ನೆಲೆ ಬೆಳಗಾವಿ ಅಬಕಾರಿ ಇಲಾಖೆ ಹೈಅಲರ್ಟ್ ಆಗಿದೆ. ಗೋವಾದಿಂದ ಬರುವ ಪ್ರತಿಯೊಂದು ವಾಹನಗಳನ್ನು ಪರಿಶೀಲನೆ ನಡೆಸುತ್ತಿರುವ ಪೊಲೀಸರು.