ವ್ಯಕ್ತಿಯೊಬ್ಬರು ಖರೀದಿಸಿದ ಕಿಂಗ್‌ಫಿಶರ್ ಬಿಯರ್ ಬಾಟಲಿಯೊಳಗೆ ಜೀವಂತ ಮೀನಿನ ಮರಿ ಪತ್ತೆಯಾಗಿದೆ. ಸೀಲ್ ತೆಗೆಯದ ಬಾಟಲಿಯೊಳಗೆ ಮೀನು ಕಂಡು ಗ್ರಾಹಕ ದಂಗಾಗಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾಲ್ಲಿ ವೈರಲ್ ಆಗುತ್ತಿದೆ.

ಹೈದರಾಬಾದ್: ಬಿಸಿಲಿನ ಬೇಗೆಯಿಂದ ಪಾರಾಗಲು ವ್ಯಕ್ತಿಯೊಬ್ಬರು ಬಿಯರ್ ಖರೀದಿಸಿದ್ದಾರೆ. ಆದರೆ ಸೀಲ್ ತೆಗೆಯದ ಬಾಟಲಿಯೊಳಗೆ ಜೀವಂತ ಮೀನು ಕಂಡು ಅವರಿಗೆ ಶಾಕ್ ಆಗಿದೆ. ಹೈದರಾಬಾದ್‌ನ ಮಲ್ಲಾಪುರ ಪ್ರದೇಶದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾಲ್ಲಿ ವೈರಲ್ ಆಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಜಾಡುತ್ತಿತ್ತು ಪುಟ್ಟ ಮೀನು

ನಾಚಾರಾಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ವೈನ್ ಶಾಪ್ ಒಂದರಲ್ಲಿ ಈ ವ್ಯಕ್ತಿ ತಣ್ಣಗಿನ ಬಿಯರ್ ಖರೀದಿಸಿದ್ದರು. ಬೇಸಿಗೆಯ ಬಿಸಿಲಿಗೆ ಬಿಯರ್ ಕುಡಿದು ರಿಲ್ಯಾಕ್ಸ್ ಆಗೋಣ ಎಂದುಕೊಂಡಿದ್ದರು. ಆದರೆ, ಬಾಟಲಿ ಓಪನ್ ಮಾಡುವ ಮುನ್ನವೇ ಅದರೊಳಗೆ ಏನೋ ಅಲುಗಾಡುತ್ತಿರುವುದನ್ನು ಗಮನಿಸಿದ್ದಾರೆ. ಹತ್ತಿರದಿಂದ ನೋಡಿದಾಗ, ಸೀಲ್ ಆಗಿದ್ದ ಬಿಯರ್ ಬಾಟಲಿಯೊಳಗೆ ಪುಟ್ಟ ಮೀನೊಂದು ಈಜುತ್ತಿರುವುದು ಕಂಡುಬಂದಿದೆ.

ತಕ್ಷಣವೇ ಆತ ಬಿಯರ್ ಬಾಟಲಿ ಸಮೇತ ಅಂಗಡಿಗೆ ವಾಪಸ್ ಹೋಗಿ, ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಆದರೆ, 'ನಾವು ಬಿಯರ್ ತಯಾರಿಸುವುದಿಲ್ಲ, ಕಂಪನಿಯಿಂದ ಬಂದಿದ್ದನ್ನು ಮಾರಾಟ ಮಾಡುತ್ತೇವೆ ಅಷ್ಟೇ' ಎಂದು ಸಿಬ್ಬಂದಿ ಪ್ರತಿಕ್ರಿಯಿಸಿದ್ದಾರೆ. ಇದರಿಂದಾಗಿ ಗ್ರಾಹಕ ಮತ್ತು ಅಂಗಡಿ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ. 

ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

ಈ ಘಟನೆಯ ದೃಶ್ಯಗಳು ವೈರಲ್ ಆದ ನಂತರ, ಸೀಲ್ ಮಾಡಿದ ಬಾಟಲಿಯೊಳಗೆ ಮೀನು ಹೇಗೆ ಬಂತು ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯೇ ಶುರುವಾಗಿದೆ. ಫ್ಯಾಕ್ಟರಿಯಲ್ಲಿ ಬಾಟಲಿಗಳನ್ನು ಸ್ವಚ್ಛಗೊಳಿಸುವಾಗ ಅಥವಾ ಬಿಯರ್ ತುಂಬುವಾಗ ಈ ತಪ್ಪಾಗಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

Scroll to load tweet…

ಇನ್ನು ಕೆಲವರು, ಬಿಯರ್ ತಯಾರಿಕೆಗೆ ಬಳಸಿದ ನೀರು ಯಾವುದಾದರೂ ಕೆರೆಯಿಂದ ತಂದಿರಬಹುದು ಎಂದು ಊಹಿಸಿದ್ದಾರೆ. ಆದರೆ, ನಿಜವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. "ಕುಡಿಯುವ ಮುನ್ನ ಯಾವಾಗಲೂ ಬಾಟಲಿಯನ್ನು ಪರೀಕ್ಷಿಸುವುದು ಒಳ್ಳೆಯದು" ಎಂದು ಈ ವಿಡಿಯೋಗೆ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಈ ಘಟನೆಯು ಮದ್ಯ ತಯಾರಿಕಾ ಕಂಪನಿಗಳ ಗುಣಮಟ್ಟ ಪರಿಶೀಲನೆಯ ಬಗ್ಗೆಯೂ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ಇದನ್ನೂ ಓದಿ: Tamilnadu Election : ಸ್ತ್ರೀಯರಿಗೆ ₹2500, ಮದ್ವೆಗೆ ಚಿನ್ನ, ಫ್ರೀ ಎಲ್‌ಪಿಜಿ: ವಿಜಯ್‌ ಘೋಷಣೆ

ಇದನ್ನೂ ಓದಿ: ವರ್ಷದ 365 ದಿನದಲ್ಲಿ 8 ದಿನ ಬಿಟ್ಟು ಉಳಿದೆಲ್ಲಾ ದಿನ ಸಾಲ ಮಾಡಿದ ಆಂಧ್ರ ಪ್ರದೇಶ ಸರ್ಕಾರ: CAG ವರದಿಯಲ್ಲಿ ಬಹಿರಂಗ