Asianet Suvarna News Asianet Suvarna News

ರಸ್ತೆ ಸಮಸ್ಯೆಗಳ ಬಗ್ಗೆ ಕಾಶ್ಮೀರದ ಪುಟ್ಟ ಬಾಲೆಯ ಖಡಕ್‌ ರಿಪೋರ್ಟಿಂಗ್‌... ವಿಡಿಯೋ ವೈರಲ್‌

 

  • ರಸ್ತೆಗಳ ದುರಾವಸ್ಥೆ ಬಗ್ಗೆ ಪುಟ್ಟ ಬಾಲಕಿಯ ರಿಪೋರ್ಟಿಂಗ್‌
  • ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌
  • ಕೆಸರು ತುಂಬಿದ ರಸ್ತೆಯಲ್ಲಿ ನಿಂತು ವರದಿಗಾರಿಕೆ
Little Kashmiri girl turns as reporter to show bad roads video goes viral akb
Author
Bangalore, First Published Jan 11, 2022, 2:42 PM IST

ಕಾಶ್ಮೀರ(ಜ.11): ರಸ್ತೆಗಳ ಸಮಸ್ಯೆ ಭಾರತಾದಾದ್ಯಂತ ಒಂದು ಸಾರ್ವತ್ರಿಕ ಸಮಸ್ಯೆಯಾಗಿ ಕಾಡುತ್ತಿದೆ. ಬಹುತೇಕ ಹಳ್ಳಿಗಳಲ್ಲಿ ಈ ರಸ್ತೆಗಳ ಸಮಸ್ಯೆ ಇದೆ. ಆದರೆ ಕಾಶ್ಮೀರದ ಪುಟ್ಟ ಬಾಲಕಿಯೊಬ್ಬಳು ಈ ರಸ್ತೆ ಸಮಸ್ಯೆಗಳ ಬಗ್ಗೆ ಜನರ ಗಮನ ಸೆಳೆಯುವ ಸಲುವಾಗಿ ವರದಿಗಾರ್ತಿಯಂತೆ ವರದಿಗಾರಿಕೆ ಮಾಡಿದ್ದು ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಉತ್ಸಾಹಭರಿತ ಈ ವರದಿಗಾರ್ತಿ ಕೈಯಲ್ಲಿ ಸಣ್ಣ ಲ್ಯಾಪಲ್ ಮೈಕ್‌ನೊಂದಿಗೆ ರಸ್ತೆಗಳ ದುರಾವಸ್ಥೆಯನ್ನು ಎತ್ತಿ ತೋರಿಸಲು ಕೆಸರು ರಸ್ತೆಯ ಮೇಲೆ ನಿಂತಿರುವ ದೃಶ್ಯ ಈ ವಿಡಿಯೋದಲ್ಲಿದೆ.

ಈ ರಸ್ತೆಗಳ ಮೇಲಿರುವ ಹಳ್ಳಕೊಳ್ಳದ ತೊಂದರೆಗಳು ಸಾಮಾನ್ಯವಲ್ಲ ಮತ್ತು ಪ್ರಪಂಚ ದಾದ್ಯಂತದ ಜನ  ತಮ್ಮ ಈ ರಸ್ತೆಗಳ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳ ಗಮನವನ್ನು ಸೆಳೆಯಲು ಅನನ್ಯ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಕಾಶ್ಮೀರದಲ್ಲಿಯೂ, ಪುಟ್ಟ ಪತ್ರಕರ್ತೆಯೊಬ್ಬಳು ತನ್ನ ನೆರೆಹೊರೆಯಲ್ಲಿನ ಕೆಟ್ಟ ರಸ್ತೆಗಳ ಬಗ್ಗೆ ವರದಿ ಮಾಡಿದ್ದಾಳೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದೆ. 

ದಿನಾಂಕವಿಲ್ಲದ  ಈ ವೀಡಿಯೊದಲ್ಲಿ ಸಣ್ಣ ಲ್ಯಾಪಲ್ ಮೈಕ್‌ನೊಂದಿಗೆ ಕೆಸರುಮಯವಾದ ರಸ್ತೆಯಲ್ಲಿ ನಿಂತುಕೊಂಡಿರುವ ಬಾಲಕಿ ತನ್ನ ರಿಪೋರ್ಟಿಂಗ್‌ಗೆ ತನ್ನ ತಾಯಿಯನ್ನೇ ಕ್ಯಾಮರಾ ಪರ್ಸನ್‌ ಆಗಿ ಬಳಸಿಕೊಂಡಿದ್ದು,  ರಸ್ತೆ ದುರಾವಸ್ಥೆಯನ್ನು ಎತ್ತಿ ತೋರಿಸಲು ತನ್ನ ತಾಯಿಗೆ ರಸ್ತೆ ಗುಂಡಿಗಳನ್ನು ತೋರಿಸಲು ನಿರ್ದೇಶಿಸುತ್ತಿರುವುದನ್ನು ಕಾಣಬಹುದು.

 

ಈ ರಸ್ತೆಯಿಂದಾಗಿ ಯಾವುದೇ ಅತಿಥಿಗಳು ಗ್ರಾಮಕ್ಕೆ ಬರಲು ಬಯಸುವುದಿಲ್ಲ ಎಂದು ಅವಳು ಹೇಳುತ್ತಿದ್ದಾಳೆ. "ಇತ್ನಾ ಗಂಧ ರೋಡ್ ಹೈ ಕಿ ಮೆಹಮಾನ್ ಭಿ ಇಧರ್ ಸೆ ನಹಿ ಆ ಸಕ್ತೆ (ರಸ್ತೆ ತುಂಬಾ ಕೆಟ್ಟದಾಗಿದೆ, ಅತಿಥಿಗಳು ಇಲ್ಲಿಗೆ ಬರಲು ಸಾಧ್ಯವಿಲ್ಲ) ಎಂದು ಆಕೆ ಹಿಂದಿಯಲ್ಲಿ ಹೇಳುತ್ತಿದ್ದಾಳೆ. ಗುಲಾಬಿ ಬಣ್ಣದ ಜಾಕೆಟ್‌ ಧರಿಸಿದ್ದ ಈ ಪುಟ್ಟ ಬಾಲಕಿ, ಕಣಿವೆಯಲ್ಲಿನ ಇತ್ತೀಚಿನ ಮಳೆ ಮತ್ತು ಹಿಮದಿಂದಾಗಿ ರಸ್ತೆಗಳು ಶೋಚನೀಯ ಸ್ಥಿತಿ ತಲುಪಿವೆ.  ಜನರು ಕಸವನ್ನು ರಸ್ತೆಗಳಲ್ಲಿ ಎಸೆಯುತ್ತಿದ್ದಾರೆ ಮತ್ತು ಎಲ್ಲೆಡೆ ಕೊಳಕು ಅವರಿಸಿದೆ ಎಂದು ಆಕೆ ಹೇಳುತ್ತಾಳೆ. 

ಕಾಶ್ಮೀರಿ ಭೂಮಿ, ವಧು ಹುಡುಕಾಟದಲ್ಲಿ ಕನ್ನಡಿಗರು ಮುಂಚೂಣಿಯಲ್ಲಿ!

ಈ ಪುಟ್ಟ ವರದಿಗಾರ್ತಿಯ ಹೆಸರು ಮಾತ್ರ ಗೊತ್ತಾಗಿಲ್ಲ. ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಲಾದ ಈ ಎರಡು ನಿಮಿಷಗಳಿಗೂ ಕಡಿಮೆ ಇರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್‌ ವೈರಲ್ ಆಗಿದೆ. ಅನೇಕರು ಈ ಚಿಕ್ಕ ಬಾಲೆಯ ಕೆಲಸವನ್ನು ಶ್ಲಾಘಿಸಿದ್ದಾರೆ ಮತ್ತು ಅನುಭವಿ ವರದಿಗಾರ್ತಿಯಂತೆ  ಮಾತನಾಡುವ ಈಕೆ ಹುಡುಗಿ ವಿಡಿಯೋದ ಕೊನೆಗೆ  ಲೈಕ್ ಮಾಡಿ ಶೇರ್ ಮಾಡಿ ಮತ್ತು ಸಬ್‌ಸ್ಕ್ರೈಬ್ ಮಾಡಿ ಎಂದು ಹೇಳುತ್ತಾಳೆ.  

ಅನೇಕ ಟ್ವಿಟ್ಟರ್‌ ಬಳಕೆದಾರರು ಈ ವಿಡಿಯೋವನ್ನು ಜಮ್ಮು ಮತ್ತು ಕಾಶ್ಮೀರದ (Jammu and Kashmir) ಲೆಫ್ಟಿನೆಂಟ್ ಗವರ್ನರ್ (Lieutenant Governor) ಮನೋಜ್ ಸಿನ್ಹಾ (Manoj Sinha) ಸೇರಿದಂತೆ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದಾರೆ. ನಾಗರಿಕರ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದಕ್ಕಾಗಿ ಹುಡುಗಿಯನ್ನು ಪ್ರಶಂಸಿಸಲಾಗಿದೆ. ಮತ್ತು ಆಕೆಯ ದೂರಿನ ಬಗ್ಗೆ ಶೀಘ್ರದಲ್ಲೇ  ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. 

ಧೂಳೆಬ್ಬಿಸಿದೆ 'ಕಾಶ್ಮೀರಿ ಹುಡುಗಿ'ಯ ವಿಡಿಯೋ!, ಏನಿದರ ಅಸಲಿಯತ್ತು?

ಕಾಶ್ಮೀರದ ಮಗುವೊಂದು ಸಹಾಯ ಕೋರಿದ ವಿಡಿಯೋ ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ಆರು ವರ್ಷದ ಬಾಲಕಿಯೊಬ್ಬಳು ಶಾಲಾ ಹೋಮ್‌ವರ್ಕ್‌ನ ಹೊರೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರು ನೀಡಿದ ನಂತರ ವೀಡಿಯೊ ವೈರಲ್ ಆಗಿತ್ತು. ಈ ಮುದ್ದಾದ ವೀಡಿಯೋ ಲೆಫ್ಟಿನೆಂಟ್ ಗವರ್ನರ್ ಸಿನ್ಹಾ ಅವರ ಗಮನವನ್ನು ಸೆಳೆಯಿತು, ನಂತರ ಶಾಲಾ ವಿದ್ಯಾರ್ಥಿಗಳ ಮೇಲಿನ ಹೋಮ್‌ವರ್ಕ್ ಹೊರೆಯನ್ನು ಕಡಿಮೆ ಮಾಡಲು 48 ಗಂಟೆಗಳ ಒಳಗೆ ನೀತಿಯನ್ನು ಹೊರಡಿಸುವಂತೆ ಶಾಲಾ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದರು.
 

Follow Us:
Download App:
  • android
  • ios