ಲಿಥುವೇನಿಯನ್ ರಾಯಭಾರಿಯೊಬ್ಬರು ಬಹಳ ಸ್ಪಷ್ಟವಾಗಿ ಹಿಂದಿ ಭಾಷೆಯನ್ನು ಮಾತನಾಡುತ್ತಿದ್ದು, ಇದಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರು ಸ್ಟಷ್ಟವಾಗಿ ಹಿಂದಿ ಮಾತನಾಡುತ್ತಿರುವ ವೀಡಿಯೋವನ್ನು ಸುದ್ದಿಸಂಸ್ಥೆ ಎಎನ್‌ಐ, ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋವನ್ನು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
ನವದೆಹಲಿ: ಭಾರತ ವೈವಿಧ್ಯತೆಯ ದೇಶ, ಹೆಸರಿಗೆ ತಕ್ಕಂತೆ ದೇಶದಲ್ಲಿ ಭಾರತದಲ್ಲಿ ಒಂದು ಪ್ರದೇಶದಿಂದ ಒಂದು ಪ್ರದೇಶಕ್ಕೆ ಭಾಷೆ ಸಂಸ್ಕೃತಿ ಆಚಾರ ವಿಚಾರ ಎಲ್ಲವೂ ವಿಭಿನ್ನ. ದಕ್ಷಿಣ ಭಾರತೀಯರಿಗೆ ಉತ್ತರ ಭಾರತದ ಭಾಷೆಗಳೆಂದರೆ ಕಷ್ಟ ಹಾಗೆಯೇ ಉತ್ತರ ಭಾರತೀಯರಿಗೆ ದಕ್ಷಿಣದ ಭಾಷೆಗಳೆಂದರೆ ತೀವ್ರ ಆಸಡ್ಡೆ. ನಮ್ಮದು ಅವರದು ಎಂಬ ಬೇದವನ್ನು ಬಿಟ್ಟು ಹೊಸ ಭಾಷೆಯನ್ನು ಕಲಿಯುವುದರಿಂದ ಆಗುವ ಉಪಯೋಗಗಳು ಅನಿಯಮಿತವಾದುದು. ಇದು ನಿಮಗೆ ಸಂವಹನ ಹೆಚ್ಚಿಸಲು ಸಹಾಯ ಮಾಡುವುದಲ್ಲದೇ ಮತ್ತೊಬ್ಬರನ್ನು ಚೆನ್ನಾಗಿ ಅರಿತುಕೊಳ್ಳುವುದಕ್ಕೂ ಸಹಾಯ ಮಾಡುವುದು. ಹಾಗೆಯೇ ಈಗ ಲಿಥುವೇನಿಯನ್ ರಾಯಭಾರಿಯೊಬ್ಬರು ಬಹಳ ಸ್ಪಷ್ಟವಾಗಿ ಹಿಂದಿ ಭಾಷೆಯನ್ನು ಮಾತನಾಡುತ್ತಿದ್ದು, ಇದಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರು ಸ್ಟಷ್ಟವಾಗಿ ಹಿಂದಿ ಮಾತನಾಡುತ್ತಿರುವ ವೀಡಿಯೋವನ್ನು ಸುದ್ದಿಸಂಸ್ಥೆ ಎಎನ್‌ಐ, ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋವನ್ನು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
ಲಿಥುವೇನಿಯನದ ಭಾರತೀಯ ರಾಯಭಾರಿ ಡಯಾನಾ ಮಿಕೆವಿಸಿನೆ, ಅವರು ಬಹಳ ಸ್ಪಷ್ಟವಾಗಿ ಹಿಂದಿ ಭಾಷೆಯನ್ನು ಮಾತನಾಡುತ್ತಿದ್ದು, ಅವರ ಮಾತಿನ ಶೈಲಿಗೆ ಅವರು ಇಲ್ಲೇ ಹುಟ್ಟಿ ಬೆಳೆದವರೆನೋ ಎಂಬ ಭಾವ ಮೂಡುತ್ತಿದೆ. ಇದೇ ವೇಳೆ ಅವರು ತಾನು ಹೇಗೆ ಹಿಂದಿ ಭಾಷೆ ಕಲಿತೆ ಎಂಬುದನ್ನು ಕೂಡ ಅವರು ಸುದ್ದಿಸಂಸ್ಥೆ ಎಎನ್‌ಐ ಜೊತೆ ಹೇಳಿಕೊಂಡಿದ್ದಾರೆ.
ನನಗೆ ಕೆಲವು ಗಂಭೀರ ವಿಚಾರಗಳ ಬಗ್ಗೆ ಹಿಂದಿಯಲ್ಲಿ ಮಾತನಾಡಲು ಕಷ್ಟವಾಗುತ್ತದೆ. ಆದರೆ ಸಾಮಾನ್ಯವಾಗಿ ಹಿಂದಿಯಲ್ಲಿ ನಾನು ಮಾತನಾಡಬಲ್ಲೆ. ಎರಡು ವರ್ಷ ಸಂಸ್ಕೃತ (Sanskrit) ಭಾಷೆಯನ್ನು ಕಲಿತೆ ಆದರೆ ಅದು ನಮ್ಮ ವಿಶ್ವವಿದ್ಯಾಲಯದಲ್ಲಿ ಧರ್ಮಗ್ರಂಥಗಳ (scriptures) ಭಾಷೆಯಾಗಿದೆ. ಆ ಭಾಷೆಯಲ್ಲಿ ನಾನು ಓದಲು, ಬರೆಯಲು ಮತ್ತು ಅನುವಾದಿಸಲು ಕಲಿತಿದ್ದೇನೆ ಆದರೆ ಮಾತನಾಡಲು ಅಲ್ಲ ಎಂದು ಡಯಾನಾ ಮಿಕೆವಿಸಿನೆ ಹೇಳಿಕೊಂಡಿದ್ದಾರೆ.
ಇಂಡಿಯಾವನ್ನು ಹಿಂದಿಯಾ ಮಾಡುವ ಪ್ರಯತ್ನ ಮಾಡ್ಬೇಡಿ, ಅಮಿತ್ ಶಾಗೆ ತಮಿಳುನಾಡು ಸಿಎಂ ತಿರುಗೇಟು!
ನಾನು ಸ್ವಲ್ಪ ಸ್ವಲ್ಪ ಹಿಂದಿ ಮಾತನಾಡುತ್ತೇನೆ. ನಾನು ಮೂರು ಹಾಗೂ ನಾಲ್ಕು ಬಾರಿ ಹಿಂದಿ ಕಲಿತಿದ್ದೇನೆ ಆದರೆ ಮರೆತು ಬಿಟ್ಟಿದ್ದೇನೆ. ಆದರೆ ಈ ಬಾರಿ ನಾನು ಭಾರತಕ್ಕೆ ಬರಬೇಕಾಯಿತು. ಹೀಗಾಗಿ ಹಿಂದಿ ಕಲಿಕೆಯತ್ತ ಗಮನ ಹರಿಸುವುದು ನನ್ನ ಉದ್ದೇಶವಾಗಿದೆ. ಬಹುಶಃ ಆರು ತಿಂಗಳ ನಂತರ, ನಾನು ಹಿಂದಿಯಲ್ಲಿ ಪೂರ್ಣ ಸಂದರ್ಶನವನ್ನು ನೀಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ.
ಭಾರತಕ್ಕೆ ಲಿಥುವೆನಿಯಾದ ರಾಯಬಾರಿ (Ambassador of Lithuania) ಡಯಾನಾ ಮಿಕೆವಿಸಿನೆ (Diana Mickeviciene) ಹಿಂದಿ ಭಾಷೆಯಲ್ಲಿ ತಾನು ಹೇಗೆ ಹಿಂದಿ ಕಲಿತೆ ಎಂಬುದರ ಬಗ್ಗೆ ಮಾತನಾಡಿದ್ದಾರೆ ಎಂದು ಬರೆದು ಎಎನ್‌ಐ ಈ ವಿಡಿಯೋ ಪೋಸ್ಟ್ ಮಾಡಿದೆ. ಈ ವೀಡಿಯೋ ಪೋಸ್ಟ್ ಆದಾಗಿನಿಂದ 2 ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಆಕೆಯ ಬಾಯಲ್ಲಿ ಹಿಂದಿ ಭಾಷೆಯ ಕೇಳಿದ ಭಾರತೀಯರು ಆಕೆಗೆ ಫುಲ್ ಫಿದಾ ಆಗಿದ್ದು, ಅನೇಕರು ಕಾಮೆಂಟ್ ಮಾಡಿದ್ದಾರೆ. ಆಕೆಯ ಹಿಂದಿ ಭಾಷೆಯ ಉಚ್ಚಾರಣೆ ಬಹಳ ಸ್ಪಷ್ಟ ಹಾಗೂ ಸುಂದರವಾಗಿದೆ ಎಂದು ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಈಕೆ ಹಿಂದಿ ಮಾತೃಭಾಷೆಯನ್ನು ಹೊಂದಿದ್ದು ವಿದೇಶದಲ್ಲಿ ನೆಲೆಸಿರುವ ಪೋಷಕರ ಮಕ್ಕಳಿಗಿಂತ ಸ್ಪಷ್ಟವಾಗಿ ಹಿಂದಿ ಮಾತನಾಡುತ್ತಾಳೆ. ಆಕೆಯ ಪ್ರಯತ್ನ ಬಹಳ ಉತ್ತಮವಾಗಿದೆ. ಹಿಂದಿ ಕಲಿಕೆಯೂ ಕರ್ತವ್ಯದ ಮೇಲೆ ನಿಮ್ಮ ಆಸಕ್ತಿ ಹಾಗೂ ಕಠಿಣ ಶ್ರಮವನ್ನು ತೋರಿಸುತ್ತಿದೆ. ಓರ್ವ ಭಾರತೀಯನಾಗಿ ನಾನು ನಿಮ್ಮ ಪ್ರಾಮಾಣಿಕತೆಯನ್ನು ಮೆಚ್ಚುತ್ತೇನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಲಿಥುವೆನಿಯಾ ಭಾಷೆಯೂ ಸಂಸ್ಕೃತದ ಜೊತೆ ಸಾಮ್ಯತೆಯನ್ನು ಹೊಂದಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
Hindi Diwas: ದೇಶದ ಏಕತೆಗೆ ಹಿಂದಿ ಅತ್ಯಂತ ನಿರ್ಣಾಯಕ; ಕೇಂದ್ರ ಶಿಕ್ಷಣ ಸಚಿವರ ವಾದ
ಹಿಂದಿ ರಾಷ್ಟಭಾಷೆ ಎಂದು ಉತ್ತರ ಭಾರತೀಯರು, ಅಲ್ಲ ಎಂದು ದಕ್ಷಿಣ ಭಾರತದ ಕೆಲವರು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಜಟಾಪಟಿ ಮಾಡುತ್ತಿರುತ್ತಾರೆ. ಇದು ರಾಜಕೀಯ ಕಾರಣಕ್ಕೆ ಮತ್ತಷ್ಟು ದೊಡ್ಡದಾಗುತ್ತಿರುತ್ತದೆ. ಆದರೆ ವಿದೇಶಿಯೊಬ್ಬರು ನಮ್ಮ ನೆಲದ ಭಾಷೆಯನ್ನು ಪಂಟರ್ ತರ ಮಾತಾಡ್ತಿದ್ರೆ ನಮಗೆಷ್ಟು ಖುಷಿ ಆಗುತ್ತೆ ಅಲ್ಲವೇ? ಹಿಂದಿ ರಾಷ್ಟ್ರ ಭಾಷೆ ಅಲ್ಲವೋ ಹೌದು ಆ ಚರ್ಚೆಯನ್ನು ಪಕ್ಕಕ್ಕಿಟ್ಟು ಅದು ನಮ್ಮ ದೇಶದ ಒಂದು ಪ್ರಮುಖ ಸಂವಹನ ಭಾಷೆ ಎಂಬುದನ್ನು ಮಾತ್ರ ಅಲ್ಲಗಳೆಯುವಂತಿಲ್ಲ. ನಮ್ಮದು ನಮ್ಮದಲ್ಲ ಎಂಬ ವಿವಾದಗಳ ಮಧ್ಯೆ ಹಿಂದಿ ಭಾಷೆಯನ್ನು ವಿದೇಶಿಯೊಬ್ಬರು ನಮಗಿಂತ ಸ್ಪಷ್ಟವಾಗಿ ಮಾತನಾಡುತ್ತಿದ್ದರೆ ನಿಜಕ್ಕೂ ಮೆಚ್ಚಿಕೊಳ್ಳದಿರಲು ಸಾಧ್ಯವೇ ಇಲ್ಲ ಅಲ್ಲವೇ.
