Asianet Suvarna News Asianet Suvarna News

ನರೇಂದ್ರ ಮೋದಿ ಜೊತೆ ಪ್ರಮಾಣವಚನ ಸ್ವೀಕರಿಸುವ ಸಂಭಾವ್ಯರ ಪಟ್ಟಿ ಇಲ್ಲಿದೆ

Narendra Modi Cabinet: ಬಿಜೆಪಿ ಕೇಂದ್ರ ಗೃಹ ಖಾತೆ, ರಕ್ಷಣಾ ವಲಯ, ಹಣಕಾಸು, ಲೋಕೋಪಯೋಗಿ, ಕೃಷಿ, ರೈಲ್ವೆ ಸೇರಿದಂತೆ ಪ್ರಮುಖ ಖಾತೆಗಳನ್ನು ತನ್ನ ಬಳಿಯಲ್ಲಿಯೇ ಇರಿಸಿಕೊಳ್ಳಲು ನಿರ್ಧರಿಸಿದಂತೆ. ಸಚಿವರ ಪ್ರಮಾಣವಚನ ಎರಡು ಹಂತಗಳಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ.

List Of Probable MPs To Be Inducted As modi new Cabinet mrq
Author
First Published Jun 8, 2024, 12:10 PM IST | Last Updated Jun 8, 2024, 12:10 PM IST

ನವದೆಹಲಿ: ಜೂನ್ 9ರಂದು ನರೇಂದ್ರ ಮೋದಿ (Narendra Modi) ಪ್ರಧಾನ ಮಂತ್ರಿಗಳಾಗಿ (Prime Minister) ಮೂರನೇ ಬಾರಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನರೇಂದ್ರ ಮೋದಿಯವರ ಜೊತೆಯಲ್ಲಿ ಸಂಪುಟ ಸಚಿವರಾಗಿ (Cabinet Ministers) ಕೆಲವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಹಿಂದಿನ ಎರಡು ಅವಧಿಯಲ್ಲಿ ಬಿಜೆಪಿ  ಸಂಪುಟ ಖಾತೆ ಹಂಚಿಕೆ ವೇಳೆ ಸಾರ್ವಭೌಮತ್ವವನ್ನು ಹೊಂದಿತ್ತು. ಹಾಗಾಗಿ ಕ್ಯಾಬಿನೆಟ್ ದರ್ಜೆಯ ಸ್ಥಾನಗಳನ್ನು ತನ್ನ ಸಂಸದರಿಗೆ ನೀಡಿ, ರಾಜ್ಯ ಖಾತೆಗಳನ್ನು ಮಿತ್ರ ಪಕ್ಷಗಳಿಗೆ ನೀಡಿತ್ತು. ಆದರೆ ಈ ಬಾರಿ ಮಿತ್ರಪಕ್ಷಗಳ ಬೆಂಬಲ ಇಲ್ಲದೇ ಬಿಜೆಪಿಗೆ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ. ಈ ಹಿನ್ನೆಲೆ ಮಿತ್ರಪಕ್ಷದ ಸಂಸದರಿಗೂ ಕ್ಯಾಬಿನೆಟ್ ದರ್ಜೆಯ ಸ್ಥಾನ ನೀಡುವ ಸಾಧ್ಯತೆಗಳಿವೆ.  ಮಿತ್ರಪಕ್ಷಗಳು ತಮ್ಮ ಸದಸ್ಯರ ಬಲಾಬಲದ ಪ್ರಕಾರ ಕೆಲವು ಸ್ಥಾನಗಳಿಗೆ ಬೇಡಿಕೆ ಇಟ್ಟಿವೆ ಎನ್ನಲಾಗಿದೆ. ಜೂನ್ 9 ರಂದು ನರೇಂದ್ರ ಮೋದಿ ಜೊತೆ ಯಾರೆಲ್ಲಾ ಪ್ರಮಾಣವಚನ ಸ್ವೀಕರಿಸಬಹುದು ಎಂಬುದರ ಮಾಹಿತಿ ಇಲ್ಲಿದೆ.

ಬಿಜೆಪಿ ಕೇಂದ್ರ ಗೃಹ ಖಾತೆ, ರಕ್ಷಣಾ ವಲಯ, ಹಣಕಾಸು, ಲೋಕೋಪಯೋಗಿ, ಕೃಷಿ, ರೈಲ್ವೆ ಸೇರಿದಂತೆ ಪ್ರಮುಖ ಖಾತೆಗಳನ್ನು ತನ್ನ ಬಳಿಯಲ್ಲಿಯೇ ಇರಿಸಿಕೊಳ್ಳಲು ನಿರ್ಧರಿಸಿದಂತೆ. ಸಚಿವರ ಪ್ರಮಾಣವಚನ ಎರಡು ಹಂತಗಳಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ. ಜೂನ್ 9ರಂದು ಮೊದಲ ಹಂತದ ಪದಗ್ರಹಣ ನಡೆಯಲಿದೆ. ತದನಂತರ ಖಾತೆ ಹಂಚಿಕೆ ನಡೆಯಲಿದೆ. ಇದೆಲ್ಲಾ ಪ್ರಕ್ರಿಯೆ ಮುಗಿದ ಬಳಿಕ ಎರಡನೇ ಹಂತದ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದು ಬಂದಿದೆ. 

ಸಚಿವ ಸಂಪುಟ ಬಗ್ಗೆ ಟೀವಿ ಸುದ್ದಿಗಳು ಸುಳ್ಳು: ಯಾರೂ ನಂಬಬೇಡಿ ಎಂದ ಪ್ರಧಾನಿ ಮೋದಿ

ಮೊದಲ ಹಂತದಲ್ಲಿ ಪ್ರಮಾಣಚನ ಸ್ವೀಕರಿಸುವ ಸಂಭಾವ್ಯರ ಪಟ್ಟಿ 

ಜೆಡಿಎಸ್‌ನಿಂದ ಹೆಚ್‌ಡಿ ಕುಮಾರಸ್ವಾಮಿ, ಅನುಪ್ರಿಯಾ ಪಟೇಲ್-ಅಪ್ನಾದಳ, ಜೆಡಿ(ಯು)ನಿಂದ ರಾಮನಾಥ್ ಠಾಕೂರ್, ಲಲನ್ ಸಿಂಗ್, ಎನ್‌ಸಿಪಿಯಿಂದ ಪ್ರಫುಲ್ ಪಟೇಲ್, ಸುನೀಲ್ ದತ್ತಾತ್ರೇಯ ತತ್ಕರೆ, ಟಿಡಿಪಿಯಿಂದ ರಾಮ್‌ಮೋಹನ್ ನಾಯ್ಡು, ಪೆಮ್ಮಸಾನಿ ಚಂದ್ರಶೇಖರ್, ವೆಮಿರ್‌ರೆಡ್ಡಿ ಪ್ರಭಾಕರ್ ರೆಡ್ಡಿ, ಆರ್‌ಎಲ್‌ಡಿಯಿಂದ ಜಯಂತ್ ರೆಡ್ಡಿ ಮತ್ತು ಲೋಕ ಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್

ಪಕ್ಷಗಳ ಬಲಾಬಲ ಎಷ್ಟಿದೆ?

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಗೆದ್ದಿದ್ದು, ಸರ್ಕಾರ ರಚನೆಗೆ 32 ಸ್ಥಾನಗಳ ಕೊರತೆಯನ್ನು ಅನುಭವಿಸಿದೆ. ಈ ಹಿನ್ನೆಲೆ ಮಿತ್ರಪಕ್ಷಗಳ ಬೆಂಬಲವನ್ನು ಪಡೆದಕೊಂಡಿದೆ. ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀಡಿರುವ ನಿತೀಶ್ ಕುಮಾರ್ ನೇತೃತ್ವದ ಜೆಡಿ(ಯು) 12, ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ 16, ಏಕನಾಥ್ ಶಿಂಧೆ ಬಣದ ಶಿವಸೇನೆ 7, ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ-ರಾಮ್ ವಿಲಾಸ್ 5ರಲ್ಲಿ ಗೆಲುವು ಸಾಧಿಸಿದೆ. ಇದರ ಜೊತೆಯಲ್ಲಿ ಸಣ್ಣ ಪಕ್ಷಗಳು ಮತ್ತು ಪಕ್ಷೇತರರು ಎನ್‌ಡಿಎ ಬೆಂಬಲ ನೀಡಿದ್ದು, ಒಟ್ಟು ಸಂಖ್ಯೆ 300ರ ಗಡಿ ದಾಟಿದೆ.

ಭಾರತಕ್ಕೆ ಸರಿಯಾದ ನಾಯಕನೆಂದರೆ ಮೋದಿ: ಚಂದ್ರಬಾಬು ನಾಯ್ಡು

ಜೂನ್ 12ರಂದು ಚಂದ್ರಬಾಬು ನಾಯ್ಡು ಪ್ರಮಾಣವಚನ

ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಜೂನ್ 12 ರಂದು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬೆಳಗ್ಗೆ 11:27 ಕ್ಕೆ ಗನ್ನವರಂ ವಿಮಾನ ನಿಲ್ದಾಣದ ಬಳಿಯ ಕೆಸರಪಲ್ಲಿ ಐಟಿ ಪಾರ್ಕ್‌ನಲ್ಲಿ ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ

Latest Videos
Follow Us:
Download App:
  • android
  • ios