ಲಿಕ್ಕರ್ ಹಗರಣದಲ್ಲಿ ಇದೀಗ ಇಡಿ ಅಧಿಕಾರಿಗಳು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಿಎಂ ಪುತ್ರನ ಬಂಧಿಸಿದ್ದಾರೆ. ಹುಟ್ಟು ಹಬ್ಬದ ಸಂಭ್ರಮದ ದಿನವೇ ಅರೆಸ್ಟ್ ಮಾಡಲಾಗಿದ್ದು, ಇದೀಗ ತೀವ್ರ ಕೋಲಾಹಲ ಸೃಷ್ಟಿಯಾಗಿದೆ.
ನವದೆಹಲಿ (ಜು.18) ದೇಶದ ಹಲವೆಡೆ ಇಡಿ ಅಧಿಕಾರಿಗಳು ಸತತ ದಾಳಿ ನಡೆಸುತ್ತಲೇ ಇದ್ದಾರೆ. ಈ ಬಾರಿ ನಡೆಸಿದ ದಾಳಿ ಇದೀಗ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಅಬಕಾರಿ ಹಗರಣ ಸಂಬಂಧ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಷ್ಟೇ ಅಲ್ಲ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿಯ ಪುತ್ರನನ್ನು ಅಬಕಾರಿ ಹಗರಣ ಸಂಬಂಧ ಬಂಧಿಸಿದ್ದಾರೆ. ಹುಟ್ಟ ಹಬ್ಬದ ಸಂಭ್ರಮದಲ್ಲಿದ್ದ ಇಡೀ ಕುಟುಂಬಕ್ಕೆ ಆಘಾತ ಎದುರಾಗಿದೆ. ಹುಟ್ಟು ಹಬ್ಬದ ದಿನವೇ ಬಂಧನವಾಗಿದೆ. ಹೌದು, ಚತ್ತೀಸಘಡದ ಸಾವಿರಾರು ಕೋಟಿ ರೂಪಾಯಿ ಅಬಕಾರಿ ಹಗರಣದಲ್ಲಿ ಇದೀಗ ಮಾಜಿ ಸಿಎಂ ಭೂಪೇಶ್ ಬಘೇಲ್ ಪುತ್ರ ಚೈತನ್ಯ ಬಘೇಲ್ ಅರೆಸ್ಟ್ ಆಗಿದ್ದಾರೆ.
ಮಾಜಿ ಸಿಎಂ ನಿವಾಸದ ಮೇಲೆ ಇಡಿ ದಾಳಿ
ಚತ್ತೀಸಘಡದ ಬಿಲಾಯಿ ನಿವಾಸದ ಮೇಲೆ ಇಂದು ಇಡಿ ಅದಿಕಾರಿಗಳು ದಾಳಿ ನಡೆಸಿದ್ದರು. ಚತ್ತೀಸಘಡದಲ್ಲಿ ಕೇಳಿ ಬಂದ ಅಬಕಾರಿ ನೀತಿ ಹಗರಣ ಕುರಿತು ತನಿಖೆ ನಡೆಸುತ್ತಿರುವ ಇಡಿ, ನೇರವಾಗಿ ಮನೆ ಮೇಲೆ ದಾಳಿ ನಡೆಸಿದ್ದರು. ದಾಖಲೆಗಳ ಪರಿಶೋಧನೆ ನಡೆಸಿದ ಇಡಿ ಅಧಿಕಾರಿಗಳು ಬಳಿಕ ಪುತ್ರ ಚೈತನ್ಯ ಬಘೇಲ್ ಬಂಧಿಸಿದ್ದಾರೆ.
ಮಗನಿಗೆ ಹುಟ್ಟುಹಬ್ಬದ ಗಿಫ್ಟ್ ನೀಡಿದ ಮೋದಿಗೆ ಧನ್ಯವಾದ
ಮಗನ ಬಂಧನವನ್ನು ಭೂಪೇಸ್ ಬಘೇಲ್ ಖಚಿತಪಡಿಸಿದ್ದರು. ಕೇಂದ್ರ ಬಿಜೆಪಿ ಸರ್ಕಾರ ಇಡಿಯನ್ನು ದಾಳವಾಗಿ ಬಳಸಿಕೊಂಡು ದ್ವೇಷ ಸಾಧಿಸುತ್ತಿದೆ. ಮಗನ ಹುಟ್ಟು ಹಬ್ಬದ ದಿನ ಗಿಫ್ಟ್ ನೀಡಿರುವ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಎಂದು ಭೂಪೇಶ್ ಬಘೇಲ್ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದರು.ಮೋದಿ ಹಾಗೂ ಅಮಿತ್ ಶಾ ನನ್ನ ಮಗನಿಗೆ ನೀಡಿದ ಬರ್ತ್ ಡೇ ಗಿಫ್ಟ್, ಪ್ರಜಾಪ್ರಭುತ್ವದ ದೇಶದಲ್ಲಿ ಯಾರಿಗೂ ನೀಡಬಾರದು ಎಂದಿದ್ದಾರೆ. ಮೋದಿ ಹಾಗೂ ಶಾ ಇಡಿ ಕಳುಹಿಸಿ ದಾಳಿ ನಡೆಸಿದ್ದಾರೆ ಎಂದು ಭೂಪೇಶ್ ಬಘೇಲ್ ಹೇಳಿದ್ದಾರೆ. ಇಂದು ನನ್ನ ಮಗನ ಹುಟ್ಟುಹಬ್ಬದ ಸಂಭ್ರಮ. ಆದರೆ ಇಡಿ ಅಧಿಕಾರಿಗಳು ನನ್ನ ಮನೆ ಮೇಲೆ ದಾಳಿ ನಡೆಸಿದ್ದಾರೆ ಎಂದು ಬಘೇಲ್ ಆಕ್ರೋಶ ಹೊರಹಾಕಿದ್ದಾರೆ.
ಚತ್ತೀಸಘಡ ವಿಧಾನಸಭೆ ಅಧಿವೇಶನದ ಕೊನೆಯ ದಿನವಾದ ಇಂದು ಹಲವು ಮಹತ್ವದ ವಿಷಗಳನ್ನು ಉಲ್ಲೇಖಿಸಿ ಚರ್ಚಿಸಬೇಕಿತ್ತು. ಈ ಪೈಕಿ ತಮ್ನಾರ್ ಬಳಿ ಅದಾನಿ ಕಂಪನಿ ಮರಗಳನ್ನು ಕತ್ತರಿಸಿದೆ. ಈ ಕುರಿತು ಸದನದಲ್ಲಿ ಪ್ರಸ್ತಾಪಿಸಲು ನಿರ್ಧರಿಸಿದ್ದೆ. ಇದರ ಜೊತೆಗೆ ಹಲವು ವಿಷಗಳ ಚರ್ಚೆ ನಡೆಸಬೇಕಿತ್ತು. ಆದರೆ ಕೇಂದ್ರ ಬಿಜೆಪಿ ಸರ್ಕಾರ ಹೇಗಾದರು ಮಾಡಿ ಧನಿ ಅಡಗಿಸುವ ಕೆಲಸ ಮಾಡುತ್ತಿದೆ ಎಂದು ಭೂಪೇಶ್ ಬಘೇಲ್ ಹೇಳಿದ್ದಾರೆ.
