ತಮಿಳುನಾಡು ಸರ್ಕಾರ ಕಾನ್ಫರೆನ್ಸ್ ಹಾಲ್, ಕನ್ವೆನ್ಷನ್ ಸೆಂಟರ್, ಮದುವೆ ಹಾಲ್, ಬ್ಯಾಂಕ್ವೆಟ್ ಹಾಲ್‌ಗಳು, ಸ್ಪೋರ್ಟ್ಸ್ ಸ್ಟೇಡಿಯಂ ಮತ್ತು ಮನೆಯ ಕಾರ್ಯಕ್ರಮಗಳಲ್ಲಿ ಮದ್ಯವನ್ನು ಸರ್ವ್ ಮಾಡಲು ವಿಶೇಷ ಪರವಾನಗಿ ನೀಡಿದೆ.
ಚೆನ್ನೈ (ಏಪ್ರಿಲ್ 24, 2023): ಐಪಿಎಲ್ ಆರಂಭವಾಗಿ ಅನೇಕ ದಿನಗಳು ಕಳೆದಿದ್ದು, ಅನೇಕ ಅಚ್ಚರಿಯ ಫಲಿತಾಂಶಗಳೂ ನೋಡಲು ಸಿಗುತ್ತಿವೆ. ಅಲ್ಲದೆ, ಅನೇಕ ಹೊಸ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ಇನ್ನು, ನೀವು ಕ್ರಿಕೆಟ್ ಪ್ರಿಯರಾಗಿದ್ದರೆ ಹಾಗೂ ಸ್ಟೇಡಿಯಂಗೆ ಹೋಗಿ ಐಪಿಎಲ್ ಪಂದ್ಯಗಳಿಗೆ ಹೋಗ್ತಿದ್ರೆ ನಿಮಗಿಲ್ಲಿದೆ ಗುಡ್ ನ್ಯೂಸ್. ಇನ್ಮೇಲೆ ಮ್ಯಾಚ್ ನೋಡುತ್ತಾ ಆರಾಮಾಗಿ ಎಣ್ಣೆ ಹೊಡೆಯಬಹುದು! ಮದುವೆ ಮಂಟಪಗಳು ಮತ್ತು ಕ್ರೀಡಾ ಮೈದಾನಗಳಲ್ಲಿ ಮದ್ಯ ಪೂರೈಸಲು ಅನುಮತಿ ನೀಡಲು ತಮಿಳುನಾಡಿನ ಸರ್ಕಾರ ನಿರ್ಧರಿಸಿದೆ.
ಹೌದು, ತಮಿಳುನಾಡು ಸರ್ಕಾರವು ಕಾನ್ಫರೆನ್ಸ್ ಹಾಲ್, ಕನ್ವೆನ್ಷನ್ ಸೆಂಟರ್, ಮದುವೆ ಹಾಲ್, ಬ್ಯಾಂಕ್ವೆಟ್ ಹಾಲ್‌ಗಳು, ಸ್ಪೋರ್ಟ್ಸ್ ಸ್ಟೇಡಿಯಂ ಮತ್ತು ಮನೆಯ ಕಾರ್ಯಕ್ರಮಗಳಲ್ಲಿ ಮದ್ಯವನ್ನು ಸರ್ವ್ ಮಾಡಲು ವಿಶೇಷ ಪರವಾನಗಿಯನ್ನು ನೀಡಿದೆ. ಸರ್ಕಾರಿ ಅಧಿಕಾರಿಗಳಿಂದ ವಿಶೇಷ ಅನುಮತಿ ಪಡೆದು ಮದ್ಯ ನೀಡಬಹುದು ಎಂದು ತಿಳಿಸಲಾಗಿದೆ.
ಇದನ್ನು ಓದಿ: Beer Bus: ಬಿಯರ್ ಪ್ರಿಯರಿಗೆ ಭರ್ಜರಿ ಆಫರ್: ಪಾಂಡಿಚೆರಿಗೆ ಹೋಗಿ ಕುಡಿದು, ತಿಂದು ಎಂಜಾಯ್ ಮಾಡಿ!
ಒಂದು ದಿನಕ್ಕೆ ಜಿಲ್ಲಾಧಿಕಾರಿಗಳ ಅನುಮತಿ ಪಡೆದ ಬಳಿಕ ಮದ್ಯಪಾನ ನಿಷೇಧದ ಉಪ ಆಯುಕ್ತರ ವಿಶೇಷ ಅನುಮತಿ ಪಡೆಯಬಹುದು ಎಂದು ತಮಿಳುನಾಡು ಸರ್ಕಾರದ ಗೆಜೆಟ್‌ನಲ್ಲಿ ವಿವರ ಪ್ರಕಟಿಸಲಾಗಿದೆ. ಇದುವರೆಗೆ ಪಬ್‌ನಲ್ಲಿ ಮಾತ್ರ ಮದ್ಯ ನೀಡಲಾಗುತ್ತಿದ್ದ ಸಮಯದಲ್ಲಿ ತಮಿಳುನಾಡು ಸರ್ಕಾರ ಈ ನಿರ್ಧಾರ ಪ್ರಕಟಿಸಿದ್ದು, ಮದ್ಯ ಪ್ರಿಯರಿಗೆ ಖುಷಿಯ ವಿಚಾರವಾಗಿದೆ.
ಈ ಸಂಬಂಧ ಈಗಾಗಲೇ ತಿದ್ದುಪಡಿ ತಂದಿರುವಾಗಲೇ ತಮಿಳುನಾಡು ಸರ್ಕಾರದ ಗೃಹ ಕಾರ್ಯದರ್ಶಿ ಈ ಅಧಿಸೂಚನೆ ಹೊರಡಿಸಿದ್ದಾರೆ. ಸದ್ಯ ತಮಿಳುನಾಡಿನ ಚೆನ್ನೈನಲ್ಲಿರೋ ಚೆಪಾಕ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳು ನಡೆಯುತ್ತಿರುವುದು ಗಮನಾರ್ಹವಾಗಿದೆ. ಈ ಬಗ್ಗೆ ತಮಿಳುನಾಡು ಕ್ರಿಕೆಟ್ ಸಂಸ್ಥೆ ನಿರ್ಧಾರ ಕೈಗೊಳ್ಳಬೇಕಿದೆ. ಈವರೆಗೆ ಕ್ರಿಕೆಟ್ ಮೈದಾನದಲ್ಲಿ ಮದ್ಯಪಾನಕ್ಕೆ ಅವಕಾಶವಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
ಇದನ್ನೂ ಓದಿ: Kodagu: ಚುನಾವಣಾ ನೀತಿ ಸಂಹಿತೆಗೆ ಮದುವೆ ಮನೆಯಲ್ಲಿ ಇಳಿದ ಎಣ್ಣೆ ಕಿಕ್!
ಇನ್ನೊಂದೆಡೆ, ಮದುವೆ ಮಂಟಪಗಳಲ್ಲಿ ಸೂಕ್ತ ಅನುಮತಿ ಇಲ್ಲದೇ ಮದ್ಯ ಸೇವನೆ ಮಾಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿಯೂ ಅಲ್ಲಿನ ಸರ್ಕಾರ ಈ ಘೋಷಣೆ ಮಾಡಿದೆ. ಇದಕ್ಕಾಗಿ ಪರವಾನಗಿ ಶುಲ್ಕಗಳು ಪುರಸಭೆ, ಪಂಚಾಯತ್ ಮತ್ತು ಕಾರ್ಪೊರೇಶನ್‌ಗೆ ಅನುಗುಣವಾಗಿ ಬದಲಾಗುತ್ತವೆ. ಇದಕ್ಕಾಗಿ ಸರ್ಕಾರ ನಿಯಮಾವಳಿಗಳನ್ನೂ ರೂಪಿಸಿದೆ.
ಇದರ ಪ್ರಕಾರ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ನಿಷೇಧಾಜ್ಞೆ ಉಪ ಆಯುಕ್ತರು ವಿಶೇಷ ಅನುಮತಿ ನೀಡಬಹುದು. ಪಿಎಲ್ 2ಎನ್ ಕಾಯ್ದೆಯಡಿ ವಿಶೇಷ ಅನುಮತಿ ಪಡೆದು ಮದುವೆ ಮಂಟಪಗಳು ಹಾಗೂ ಕ್ರೀಡಾ ಮೈದಾನಗಳಲ್ಲಿ ಮದ್ಯಪಾನ ನೀಡಬಹುದು ಎಂದು ತಿಳಿಸಲಾಗಿದೆ.
ಈ ಹೊಸ ಪರವಾನಗಿ ಪ್ರವೇಶವು ಟಾಸ್ಮಾಕ್, ಬಾರ್ ಮತ್ತು ಸ್ಟಾರ್ ಹೋಟೆಲ್‌ಗಳನ್ನು ಹೊರತುಪಡಿಸಿ ಮದುವೆಗಳು ಮತ್ತು ಕ್ರೀಡಾ ಸಭಾಂಗಣಗಳಂತಹ ವಾಣಿಜ್ಯ ಸ್ಥಳಗಳಿಗೆ ಮದ್ಯದ ಸೇವೆಯನ್ನು ನಿರ್ಣಯಿಸಲು ಸುಲಭಗೊಳಿಸುತ್ತದೆ.
ಇದನ್ನೂ ಓದಿ: ತಮಿಳ್ನಾಡಲ್ಲಿ ಮತ್ತೆ ಆನ್‌ಲೈನ್ ಜೂಜು ನಿಷೇಧ ಕಾಯ್ದೆ ಜಾರಿ: ರಾಜ್ಯಪಾಲರಿಂದ ಸಹಿ
ಈ ಅಧಿಸೂಚನೆಗೆ ಸಂಬಂಧಿಸಿದ ನಿರ್ಬಂಧಗಳಲ್ಲಿ, ಅಗತ್ಯವಿದ್ದಲ್ಲಿ ಆಯಾ ಪ್ರದೇಶದ ಪೊಲೀಸರು ಮೇಲ್ವಿಚಾರಣೆ ಮಾಡಬಹುದು ಎಂದು ಹೇಳಲಾಗಿದೆ. ಮತ್ತು ಈ ವಿಶೇಷ ಪರವಾನಗಿಗೆ ನೋಂದಣಿ ಶುಲ್ಕವನ್ನು ಸಹ ತಮಿಳುನಾಡು ಸರ್ಕಾರ ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ಅದೃಷ್ಟ ಅಂದ್ರೆ ಇದು: ಆನ್‌ಲೈನ್ ಗೇಮಿಂಗ್ ಆ್ಯಪ್‌ನಿಂದ ರಾತ್ರೋರಾತ್ರಿ 1.5 ಕೋಟಿ ಗೆದ್ದ ಚಾಲಕ..!
