ನವದೆಹಲಿ (ಮಾ. 13): ಮತದಾರರ ಪಟ್ಟಿಯನ್ನು ದೋಷಮುಕ್ತಗೊಳಿಸಲು ಹಾಗೂ ಒಬ್ಬನೆ ವ್ಯಕ್ತಿ ಹಲವೆಡೆ ಹೆಸರು ನೋಂದಾಯಿಸಿರುವುದನ್ನು ಪತ್ತೆ ಹಚ್ಚಲು ಮತದಾರರ ವಿವರವನ್ನು ಆಧಾರ್‌ ವ್ಯವಸ್ಥೆ ಜತೆ ಜೋಡಿಸುವ ಪ್ರಸ್ತಾವ ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್‌ ತಿಳಿಸಿದ್ದಾರೆ.

ಎಸ್‌ಬಿಐ ಗ್ರಾಹಕರಿಗೆ ಗುಡ್‌ ನ್ಯೂಸ್: ಕನಿಷ್ಠ ಬ್ಯಾಲೆನ್ಸ್‌ ನಿಯಮ ರದ್ದು!

ರಾಜ್ಯಸಭೆಗೆ ಲಿಖಿತ ಉತ್ತರ ನೀಡಿರುವ ಅವರು, ಆಧಾರ್‌ ಜತೆಗೆ ಮತದಾರರ ಮಾಹಿತಿಯನ್ನು ಜೋಡಿಸುವ ಸಂಬಂಧ ಪ್ರಜಾಪ್ರತಿನಿಧಿ ಕಾಯ್ದೆ 1951ಕ್ಕೆ ತಿದ್ದುಪಡಿ ತರುವ ಪ್ರಸ್ತಾವವನ್ನು ಶಾಶನ ಇಲಾಖೆಯಿಂದ ಸ್ವೀಕರಿಸಲಾಗಿದೆ.

ಪೆಟ್ರೋಲ್‌ ಡೀಸೆಲ್‌ ಬೆಲೆ ಶೀಘ್ರದಲ್ಲೇ 6 ರೂ ಇಳಿಕೆ?

ಅದು ಸರ್ಕಾರದ ಪರಿಶೀಲನೆಯಲ್ಲಿದೆ. ಇದರಿಂದ ದೋಷಮುಕ್ತ ಮತದಾರರ ಪಟ್ಟಿತಯಾರಿಸಲು ಸಾಧ್ಯವಿದೆ. ಅಲ್ಲದೆ ಒಬ್ಬನೇ ವ್ಯಕ್ತಿ ಹೆಸರು ಹಲವೆಡೆ ನಮೂದಾಗುವುದನ್ನು ತಪ್ಪಿಸಬಹುದಾಗಿದೆ ಎಂದರು.

ಇದೇ ವೇಳೆ, ‘ಒಂದು ದೇಶ ಒಂದೇ ಗುರುತಿನ ಚೀಟಿ’ ಜಾರಿಗೆ ತರುವ ಪ್ರಸ್ತಾಪವಿದೆಯೇ ಎಂಬ ಪ್ರಶ್ನೆಗೆ, ಸದ್ಯಕ್ಕೆ ಅಂತಹ ಯಾವುದೇ ಪ್ರಸ್ತಾವ ಪರಿಶೀಲನೆಯಲ್ಲಿ ಇಲ್ಲ ಎಂದು ಪ್ರಸಾದ್‌ ಹೇಳಿದ್ದಾರೆ.