ನವದೆಹಲಿ (ಮಾ. 13): ಜಾಗತಿಕ ತೈಲ ಮಾರುಕಟ್ಟೆಯಲ್ಲಾದ ವಿವಿಧ ಬೆಳವಣಿಗೆಗಳು ಹಾಗೂ ಇತ್ತೀಚೆಗಷ್ಟೇ ವಿಶ್ವಾದ್ಯಂತ ಭಾರೀ ಭೀತಿ ಸೃಜಿಸಿರುವ ಕೊರೋನಾ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಪ್ರಮಾಣದಲ್ಲಿ ಕುಸಿತದ ಹಾದಿ ಹಿಡಿದಿದೆ.

ಅಲ್ಲದೆ, ಕಳೆದ ವರ್ಷದ ಏಪ್ರಿಲ್‌ನಿಂದ ಇದುವರೆಗೂ ಕಚ್ಚಾತೈಲದ ದರ ಶೇ.48 ರಷ್ಟುಕುಸಿದಿದೆ. ಹೀಗಾಗಿ, ಮಂದಿನ ಕೆಲವೇ ದಿನಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು 5 ರು.ನಿಂದ 6 ರು.ವರೆಗೂ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

3000 ಅಂಕ ಕುಸಿದ ಸೆನ್ಸೆಕ್ಸ್‌! ಇತಿಹಾಸದ ಗರಿಷ್ಠ ಕುಸಿತ

ರಷ್ಯಾದ ಜೊತೆಗಿನ ಮಾತುಕತೆ ಮುರಿದುಬಿದ್ದ ಬಳಿಕ ಸೇಡಿಗೆ ಬಿದ್ದ ಸೌದಿ ಅರೇಬಿಯಾ, ಕಚ್ಚಾತೈಲ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಇಳಿಕೆ ಮಾಡಿದೆ. ಇದರ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಶೇ.30ರಷ್ಟುಕುಸಿದು, 1 ಬ್ಯಾರೆಲ್‌ ಕಚ್ಚಾತೈಲ 35 ಡಾಲರ್‌(2600 ರು.)ಗೆ ಮಾರಾಟವಾಗುತ್ತಿದೆ. ಆದಾಗ್ಯೂ, ಇದರ ಲಾಭವು ಇದುವರೆಗೂ ಭಾರತೀಯ ಚಿಲ್ಲರೆ ಮಾರುಕಟ್ಟೆಗೆ ವರ್ಗಾವಣೆ ಆಗಿಲ್ಲ. ಹೀಗಾಗಿ, ಮುಂದಿನ 7-10 ದಿನಗಳಲ್ಲಿ ಪೆಟ್ರೋಲ್‌-ಡೀಸೆಲ್‌ ದರ ಇಳಿಕೆಯಾಗುವ ಸಾಧ್ಯತೆಯಿದೆ.

ಆದರೆ, ಒಂದು ವೇಳೆ ಕರ್ನಾಟಕ ಸರ್ಕಾರದ ರೀತಿ ಕೇಂದ್ರ ಸರ್ಕಾರವೂ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕ ಹೆಚ್ಚಿಸಿದ್ದೇ ಆದಲ್ಲಿ, ಪೆಟ್ರೋಲ್‌-ಡೀಸೆಲ್‌ ದರದಲ್ಲಿ ಯಾವುದೇ ಇಳಿಕೆಯಾಗುವುದಿಲ್ಲ.

ಮಾರ್ಚ್ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ