40 ಅಂತಸ್ತಿನ ಕಟ್ಟಡದ ಲಿಫ್ಟ್ ಕುಸಿದು 6 ಜನ ಸಾವು
ನಿರ್ಮಾಣ ಹಂತದಲ್ಲಿದ್ದ 40 ಅಂತಸ್ತಿನ ಕಟ್ಟಡವೊಂದರ ಲಿಫ್ಟ್ ಕುಸಿದ ಪರಿಣಾಮ 6 ಮಂದಿ ಮೃತಪಟ್ಟ ಘಟನೆ ಮಹಾರಾಷ್ಟ್ರದ ಥಾಣೆಯ ಘೋದ್‌ಬಂದರ್ ರಸ್ತೆಯಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ ಸಾವಿಗೀಡಾದವರು ಕಟ್ಟಡ ಕಾರ್ಮಿಕರಾಗಿದ್ದಾರೆ

ಥಾಣೆ: ನಿರ್ಮಾಣ ಹಂತದಲ್ಲಿದ್ದ 40 ಅಂತಸ್ತಿನ ಕಟ್ಟಡವೊಂದರ ಲಿಫ್ಟ್ ಕುಸಿದ ಪರಿಣಾಮ 6 ಮಂದಿ ಮೃತಪಟ್ಟ ಘಟನೆ ಮಹಾರಾಷ್ಟ್ರದ ಥಾಣೆಯ ಘೋದ್‌ಬಂದರ್ ರಸ್ತೆಯಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ ಸಾವಿಗೀಡಾದವರು ಕಟ್ಟಡ ಕಾರ್ಮಿಕರಾಗಿದ್ದಾರೆ. ನಿರ್ಮಾಣ ಹಂತದಲ್ಲಿದ್ದ ಕಟ್ಟಡಕ್ಕೆ ಪ್ರೂಫಿಂಗ್ ಮಾಡುತ್ತಿದ್ದ ಸಮಯದಲ್ಲಿ ಲಿಫ್ಟ್ ಕುಸಿದಿದೆ. ಸುಮಾರು 40 ಮಹಡಿ ಎತ್ತರದಿಂದ ಲಿಫ್ಟ್ ಕುಸಿದ ಪರಿಣಾಮ 5 ಮಂದಿ ಅಸುನೀಗಿದ್ದಾರೆ. ಪೊಲೀಸ್ ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ಈ ದುರ್ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಕಟ್ಟಡದ ವಾಟರ್‌ಪ್ರೂಫಿಂಗ್ ಕೆಲಸ ಮುಗಿಸಿ 40ನೇ ಅಂತಸ್ತಿಂದ ಕಾರ್ಮಿಕರು ಕೆಳಗೆ ಇಳಿಯುವಾಗ ಲಿಫ್ಟ್ ಕುಸಿದು ಈ ದುರಂತ ಸಂಭವಿಸಿದೆ.
ಲಿಫ್ಟ್ ಬಾಗಿಲಿಗೆ ಸಿಲುಕಿದ ಬೆಲ್ಟ್: ಪುಟ್ಟ ಬಾಲಕನ ಚಾಣಾಕ್ಷತೆಯಿಂದ ಬದುಕುಳಿದ ನಾಯಿಮರಿ: ವೀಡಿಯೋ
ಮಂಡಿಯೂರಿ ಶೇಖ್ ಹಸೀನಾ ಜೊತೆ ರಿಷಿ ಮಾತುಕತೆ!
ನವದೆಹಲಿ: ಜಿ20 ಶೃಂಗಕ್ಕಾಗಿ ದೆಹಲಿಗೆ ಆಗಮಿಸಿದ್ದ ಬ್ರಿಟನ್ ಪ್ರಧಾನಿ ರಿಷಿ ಸುನಕ್, ಭಾನುವಾರ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಮಾತುಕತೆ ನಡೆಸಿದರು. ಭಾನುವಾರ ಬೆಳಗ್ಗೆ ಎಲ್ಲಾ ಜಾಗತಿಕ ನಾಯಕರು ರಾಜ್‌ಘಾಟ್‌ನಲ್ಲಿರುವ ಮಹಾತ್ಮಾ ಗಾಂಧೀಜಿ ಅವರ ಸಮಾಧಿ ಸ್ಥಳಕ್ಕೆ ಪುಷ್ಪ ನಮನ ಸಲ್ಲಿಸಲು ತೆರಳಿದ್ದರು. ಈ ವೇಳೆ ರಾಜ್‌ಘಾಟ್ ಆವರಣದಲ್ಲಿ ಹಸೀನಾ ಅವರು ಕುರ್ಚಿಯಲ್ಲಿ ಕುಳಿತಿದ್ದನ್ನು ಗಮನಿಸಿದ ರಿಷಿ, ಅವರು ಇದ್ದ ಸ್ಥಳಕ್ಕೆ ತೆರಳಿ ಮಂಡಿಯೂರಿ ಕುಳಿತು ಬಾಂಗ್ಲಾ ಪ್ರಧಾನಿಯೊಂದಿಗೆ ಮಾತುಕತೆ ನಡೆಸಿದರು. ಹಿರಿಯ ನಾಯಕಿಯೊಂದಿಗೆ ರಿಷಿ ನಡೆದುಕೊಂಡ ರೀತಿಯ ಬಗ್ಗೆ ಜಾಲತಾಣದಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗಿದೆ.
ಮೋದಿ ವಿದೇಶ ಯಾತ್ರೆಯಿಂದ ಶ್ರೀಮಂತರಿಗೆ ಲಾಭ: ಪ್ರಿಯಾಂಕಾ
ಜೈಪುರ: ರಾಜಸ್ಥಾನದ ಚುನಾವಣೆ ಪ್ರಚಾರದಲ್ಲಿರುವ ಪ್ರಿಯಾಂಕಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಟೋಂಕ್‌ನಲ್ಲಿ ಭಾನುವಾರ ಸಮಾವೇಶದಲ್ಲಿ ಮಾತನಾಡಿದ ಅವರು,ಪ್ರಧಾನಿ ವಿದೇಶಕ್ಕೆ ತೆರಳುವುದು ಅಲ್ಲಿನ ಉದ್ಯಮಿ ಸ್ನೇಹಿತದೊಂದಿಗೆ ಒಪ್ಪಂದ ಮಾಡಿಕೊಳ್ಳುವುದಕ್ಕೆ ಹೊರತು ಬಡವರಿಗೆ ಸಹಾಯವಾಗಲೆಂದಲ್ಲ. ಇವರ ವ್ಯವಹಾರಗಳೆಲ್ಲವೂ ಶ್ರೀಮಂತರ ಆಶೋತ್ತರಗಳಲಿಗೆ ಪೂರೈಕೆಗೆ ಹೊರತು ಬಡವರ ಕಲ್ಯಾಣಕ್ಕಲ್ಲ. ಬಿಜೆಪಿಗೆ ಬಡವರು ಹಾಗೂ ಮಧ್ಯಮ ವರ್ಗವನ್ನು ಮೇಲೆತ್ತುವ ಬದಲು ಅಧಿಕಾರ ದಾಹವೇ ಹೆಚ್ಚು ಎಂದು ವಾಗ್ದಾಳಿ ನಡೆಸಿದರು. ಹೀಗಾಗಿಯೇ ಜಿ20 ಸಭೆ ನಡೆಯುವ ಸ್ಥಳದಲ್ಲಿ ನೀರು ತುಂಬಿಕೊಂಡಿರುವುದು. ಏಕೆಂದರೆ ಅಹಂ ಕಡಿಮೆ ಮಾಡಿ ಜನರ ಅಭಿವೃದ್ಧಿ ಮಾಡಿ ಎಂದು ದೇವರೇ ಮಳೆಗರೆದಿದ್ದಾನೆ ಎಂದು ಕಿಡಿಕಾರಿದರು.