ನಮ್ ಮಕ್ಳು ಹಿಜಾಬ್ ಹಾಕ್ತಾರೆ ನೀವು ಬಿಕಿನಿ ಹಾಕ್ಕೊಳ್ಳಿ, ಬಿಜೆಪಿ ವಿರುದ್ಧ ಓವೈಸಿ ವಾಗ್ದಾಳಿ!

ಹಿಜಾಬ್ ಪ್ರಕರಣ ಕುರಿತು AIMIM ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಮತ್ತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮುಸ್ಲಿಮ್ ಹೆಣ್ಣು ಮಕ್ಕಳು ಅವರಿಷ್ಟದಂತೆ ಹಿಜಾಬ್ ಧರಿಸುತ್ತಿದ್ದಾರೆ. ಇದನ್ನು ತಡೆಯುವ ಪ್ರಯತ್ನ ಯಾಕೆ, ನಮ್ಮ ಮಕ್ಕಳು ಹಿಜಾಬ್ ಧರಿಸಲಿ, ನೀವು ಬೇಕಾದರೆ ಬಿಕಿನಿ ಹಾಕಿಕೊಳ್ಳಿ ಎಂದು ಓವೈಸಿ ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

Let Our daughters wear hijab wear bikini if you like says AIMIM chief Asaduddin Owaisi on Hijab Row ckm

ಹೈದರಾಬಾದ್(ಅ.14):  ಹಿಜಾಬ್ ಪ್ರಕರಣ ಕುರಿತು ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಭಿನ್ನ ತೀರ್ಪು ನೀಡಿದೆ. ಇದೀಗ ಪ್ರಕರಣ ವಿಸ್ತೃತ ಪೀಠಕ್ಕೆ ವರ್ಗಾವಣೆಯಾಗಿದೆ. ಇದರ ಬೆನ್ನಲ್ಲೇ  AIMIM ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಮತ್ತೆ ಹಿಜಾಬ್ ಪರ ಬ್ಯಾಟ್ ಬೀಸಿದ್ದಾರೆ. ಇದೇ ವೇಳೆ ಮುಸ್ಲಿಮ್ ಹೆಣ್ಣುಮಕ್ಕಳ ಹಿಜಾಬ್ ತೆಗೆಯಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.  ಮುಸ್ಲಿಮ್ ಹೆಣ್ಣುಮುಕ್ಕಳು ಹಿಜಾಬ್ ಧರಿಸಲು ಇಚ್ಚಿಸುತ್ತಿದ್ದಾರೆ. ಹಿಜಾಬ್ ಧರಿಸಿದ್ದಾರೆ ಎಂದರೆ ಅವರ ಬುದ್ಧಿಶಕ್ತಿಯನ್ನು ಮುಚ್ಚುತ್ತಿದ್ದಾರೆ ಎಂದರ್ಥವಲ್ಲ. ಮುಸ್ಲಿಮ್ ಹೆಣ್ಣುಮಕ್ಕಳಿಗೆ ಹಿಜಾಬ್ ಧರಿಸಲು ಯಾರೂ ಒತ್ತಾಯ ಮಾಡುತ್ತಿಲ್ಲ. ಅವರ ಇಚ್ಚೆ ಅದು. ನೀವು ಬಿಕಿನಿ ಬೇಕಾದರೆ ಹಾಕಿಕೊಳ್ಳಿ, ಆದರೆ ನಮ್ಮ ಮುಸ್ಲಿಮ್ ಹೆಣ್ಣುಮಕ್ಕಳು ಹಿಜಾಬ್ ಧರಿಸುತ್ತಾರೆ ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. 

ಹಿಜಾಬ್(Hijab) ಧರಿಸುವಿಕೆಯಿಂದ ಮುಸ್ಲಿಮ್ ಮಹಿಳೆಯರು(Muslim Women) ಹಿಂದುಳಿಯುತ್ತಿದ್ದಾರೆ ಅನ್ನೋ  ವಾದವನ್ನು ಒವೈಸಿ ತಳ್ಳಿ ಹಾಕಿದ್ದಾರೆ. ದೇಶ ಅಭಿವೃದ್ಧಿಯಲ್ಲಿ ಮುಸ್ಲಿಮ್ ಹೆಣ್ಣುಮಕ್ಕಳ ಕೊಡುಗೆಯೂ ಅಪಾರವಾಗಿದೆ. ಹೈದರಾಬಾದ್‌ನಲ್ಲಿ(Hyderabad) ಹಲವು ಮಹಿಳೆಯರು ಡ್ರೈವರ್ ಆಗಿ ವಾಹನ ಚಲಾಯಿಸುತ್ತಿದ್ದಾರೆ. ಅವರಿಗೆ ಯಾರೂ ಹಿಜಾಬ್ ಒತ್ತಾಯಪೂರ್ವಕವಾಗಿ ಹಾಕುತ್ತಿಲ್ಲ. ಅವರ ಆಯ್ಕೆಯಾಗಿದೆ ಎಂದು ಓವೈಸಿ ಹೇಳಿದ್ದಾರೆ. 

 

 

ಟಿಪ್ಪು ಎಕ್ಸ್‌ಪ್ರೆಸ್‌ ಹೆಸರು ಬದಲಾವಣೆಗೆ ಒವೈಸಿ ಕಿಡಿ

ಹಿಂದೂ ಸಿಖ್, ಕ್ರಿಶ್ಚಿಯನ್ ಮಕ್ಕಳು ತಮ್ಮ ಧರ್ಮದ ಉಡುಪು ಧರಿಸಿ ಶಾಲೆಗೆ ತೆರಳಲು ಅನುಮತಿ ಇದೆ. ಆದರೆ ಮುಸ್ಲಿಮ್ ಹೆಣ್ಣುಮಕ್ಕಳಿಗೆ ನಿರಾಕರಿಸಲಾಗುತ್ತಿದೆ. ಈ ತಾರತಮ್ಯ ಯಾಕೆ? ಒಂದು ದಿನ ಹಿಜಾಬ್ ಧರಿಸಿದ ಮುಸ್ಲಿಮ್ ಮಹಿಳೆ ಭಾರತದ ಪ್ರಧಾನಿಯಾಗುತ್ತಾರೆ. ಇದು ನನ್ನ ಕನಸು ಎಂದು ಓವೈಸಿ(Asaduddin Owaisi) ಹೇಳಿದ್ದಾರೆ. 

 

ಮುಸ್ಲಿಮರ ಜನಸಂಖ್ಯೆ ಕಡಿಮೆಯಾಗ್ತಿದೆ; ನಮ್ಮಿಂದಲೇ ಹೆಚ್ಚು ಕಾಂಡೋಮ್‌ ಬಳಕೆ: Asaduddin Owaisi

ಸುಪ್ರೀಂ ತೀರ್ಪಿನವರೆಗೂ ಹೈಕೋರ್ಟ್ ಹಿಜಾಬ್‌ ಆದೇಶ ಪಾಲನೆ
ಹಿಜಾಬ್‌ ಪ್ರಕರಣ ಸುಪ್ರೀಂಕೋರ್ಚ್‌ನ ವಿಸ್ತೃತ ಪೀಠಕ್ಕೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ಈ ಹಿಂದೆ ಕರ್ನಾಟಕ ಹೈಕೋರ್ಚ್‌ ನೀಡಿರುವ ತೀರ್ಪು ಪ್ರಸ್ತುತ ಮಾನ್ಯವಾಗಿರುತ್ತದೆ. ಹಾಗಾಗಿ ರಾಜ್ಯದ ಯಾವುದೇ ಶಾಲೆ, ಕಾಲೇಜುಗಳಲ್ಲಿ ಧರ್ಮಾಧಾರಿತ ಚಟುವಟಿಕೆಗಳಿಗೆ ಅವಕಾಶವಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದ್ದಾರೆ. ನಗರದಲ್ಲಿ ಗುರುವಾರ ಹಿಜಾಬ್‌ ತೀರ್ಪಿನ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸುಪ್ರೀಂ ಕೋರ್ಚ್‌ ದ್ವಿಸದಸ್ಯ ಪೀಠದಲ್ಲಿ ಹಿಜಾಬ್‌ ವಿಚಾರವಾಗಿ ಪ್ರತ್ಯೇಕ ನಿಲುವು ಬಂದಿರುವುದರಿಂದ ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ. ಇದರಿಂದ ಯಾವುದೇ ಬೇಸರ ಇಲ್ಲ. ಪೂರ್ಣ ಪೀಠದಲ್ಲಿ ವಿಸ್ತೃತ ಚರ್ಚೆ ನಡೆದು ತೀರ್ಪು ಬರುವವರೆಗೆ ಕಾಯುತ್ತೇವೆ. ಅಲ್ಲಿಯವರೆಗೆ ಹಿಜಾಬ್‌ ವಿಚಾರದಲ್ಲಿ ಹೈಕೋರ್ಚ್‌ ಆದೇಶವೇ ಮಾನ್ಯವಾಗಿರುತ್ತದೆ. ಹಾಗಾಗಿ ಈ ವಿಚಾರವಾಗಿ ಇಲಾಖೆ ಇದುವರೆಗೆ ಹೊರಡಿಸಿರುವ ಯಾವುದೇ ಆದೇಶ, ಸೂಚನೆ, ಸುತ್ತೋಲೆಗಳನ್ನು ಹಿಂಪಡೆಯುವ, ಪರಿಷ್ಕರಿಸುವ ಅಥವಾ ಹೊಸ ಆದೇಶ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಅವು ಯಥಾಸ್ಥಿತಿ ಜಾರಿಯಲ್ಲಿರುತ್ತವೆ ಎಂದರು.

ಕರ್ನಾಟಕ ಶಿಕ್ಷಣ ಕಾಯ್ದೆ ಪ್ರಕಾರ, ಯಾವುದೇ ಧರ್ಮವನ್ನು ಪ್ರತಿನಿಧಿಸುವ ಉಡುಪು ಧರಿಸಿ ಶಾಲಾ-ಕಾಲೇಜು ಪ್ರವೇಶಕ್ಕೆ ಅವಕಾಶ ಇಲ್ಲ. ಇದರ ಆಧಾರದಲ್ಲಿ ನೀಡಿದ್ದ ಹೈಕೋರ್ಚ್‌ ತೀರ್ಪನ್ನು ಪಾಲಿಸಿದ್ದೆವು. ಮುಂದೆ ಸುಪ್ರೀಂ ಕೋರ್ಚ್‌ ತೀರ್ಪಿಗಾಗಿ ಕಾಯುತ್ತೇವೆ ಎಂದರು.
 

Latest Videos
Follow Us:
Download App:
  • android
  • ios