1 ಲೀಟರ್‌ಗಿಂತ ಕಡಿಮೆ ಪ್ರಮಾಣ ಪ್ಯಾಕ್‌ ಮಾಡಿದ ನೀರಿನ ಬಾಟಲ್‌ಗಳ ಬಳಕೆಯನ್ನು ಇದೇ ವರ್ಷದ ಆ.2ರಿಂದ ನಿಷೇಧಿಸಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಗುವಾಹಟಿ: 1 ಲೀಟರ್‌ಗಿಂತ ಕಡಿಮೆ ಪ್ರಮಾಣ ಪ್ಯಾಕ್‌ ಮಾಡಿದ ನೀರಿನ ಬಾಟಲ್‌ಗಳ ಬಳಕೆಯನ್ನು ಇದೇ ವರ್ಷದ ಆ.2ರಿಂದ ನಿಷೇಧಿಸಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಜೊತೆಗೆ 2024ರ ಅಕ್ಟೋಬರ್‌ನಿಂದ 2 ಲೀ.ಗಿಂತ ಕಡಿಮೆ ಪ್ರಮಾಣದ ಪ್ಯಾಕ್‌ ಮಾಡಿದ ನೀರಿನ ಬಾಟಲ್‌ಗಳ ಮಾರಾಟವನ್ನೂ ನಿಷೇಧಿಸಲು ನಿರ್ಧರಿಸಲಾಗಿದೆ. ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣೆ (ತಿದ್ದುಪಡಿ) ಕಾಯ್ದೆ, 2021ರ ಅನ್ವಯ ಈ ನಿಯಮ ಜಾರಿಗೊಳಿಸಲಾಗುತ್ತಿದೆ. ಪ್ಲಾಸ್ಟಿಕ್‌ ತ್ಯಾಜ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸರ್ಕಾರ ಹೇಳಿದೆ. ಜೊತೆಗೆ, ರಾಜ್ಯದಲ್ಲಿ ಏಕಬಳಕೆಯ ಪ್ಲಾಸ್ಟಿಕ್‌ ಬಳಕೆಯನ್ನೂ ಪೂರ್ಣ ಪ್ರಮಾಣದಲ್ಲಿ ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಶರ್ಮಾ ಪ್ರಕಟಿಸಿದ್ದಾರೆ.

ಶಾಲಾ ಬಾಲಕಿಯರ ಕುಡಿಯುವ ನೀರಿನ ಬಾಟಲ್‌ನಲ್ಲಿ ಮೂತ್ರ ಮಿಕ್ಸ್, ಮಧ್ಯಪ್ರದೇಶದಲ್ಲಿ ಮತ್ತೊಂದು ಘಟನೆ!

ವಿಶ್ವದ ದುಬಾರಿ ನೀರಿನ ಬಾಟಲ್‌ನ ಬೆಲೆ 45 ಲಕ್ಷ, ಅಂಥದ್ದೇನಿರುತ್ತೆ ಈ ನೀರಿನಲ್ಲಿ?