ವಿಶ್ವದ ದುಬಾರಿ ನೀರಿನ ಬಾಟಲ್‌ನ ಬೆಲೆ 45 ಲಕ್ಷ, ಅಂಥದ್ದೇನಿರುತ್ತೆ ಈ ನೀರಿನಲ್ಲಿ?
ಬಹುಶಃ ನಿಮಗಿದು ಗೊತ್ತಿರದ ವಿಚಾರ. ಏನೆಂದರೆ, ವಿಶ್ವದಲ್ಲಿ ಚಿನ್ನ ಮಾತ್ರವಲ್ಲ ಒಂದು ಬಾಟಲ್ ನೀರಿಗೂ ಕೂಡ ದುಬಾರಿ ಬೆಲೆಯಿದೆ. ವಿಶ್ವದ ಅತ್ಯಂತ ದುಬಾರಿ ನೀರಿನ ಬಾಟಲ್‌ನ ಬೆಲೆ ಎಷ್ಟು ಗೊತ್ತಾ?
ಬೆಂಗಳೂರು (ಏ.26): ಜಗತ್ತಿನಲ್ಲಿ ಐಷಾರಾಮಿಯಾಗಿ ಬದುಕಬೇಕು ಎಂದು ಕನಸು ಕಂಡು ಅದನ್ನು ಈಡೇರಿಸಿಕೊಂಡವರು ಇದ್ದಾರೆ. ಅಂಥವರು ತಾವು ಬಳಸುವ ಪ್ರತಿ ವಸ್ತು ಕೂಡ ಐಷಾರಾಮಿಯಾಗಿರಬೇಕು ಎಂದು ಬಯಸುತ್ತಾರೆ. ದುಬಾರಿ ಕಾರುಗಳು, ವಿಮಾನಗಳು ಮಾತ್ರವಲ್ಲ ಕುಡಿಯೋ ನೀರೂ ಕೂಡ ದುಬಾರಿಯಾಗಿರಬೇಕು ಎಂದು ಬಯಸುತ್ತಾರೆ. ಅಂಥವರು ಬಳಸುವಂಥ ನೀಡು ಇದು. ವಿಶ್ವದ ಅತ್ಯಂತ ದುಬಾರಿ ನೀರು ಅಕ್ವಾ ಡಿ ಕ್ರಿಸ್ಟಾಲೊ ಟ್ರಿಬುಟೊ ಎ ಮೊಡಿಗ್ಲಿಯಾನಿ. ಇದರ ಒಂದು ಬಾಟಲ್ ನೀರಿನ ಬೆಲೆ ಎಷ್ಟು ಗೊತ್ತಾ? ಬರೋಬ್ಬರಿ 45 ಲಕ್ಷ ರೂಪಾಯಿ..! ಹಾಗಿದ್ದರೆ ಈ ನೀರಿನಲ್ಲಿ ಅಂಥದ್ದೇನಿದೆ ಅನ್ನೋ ಕುತೂಹಲ ನಿಮಗೆ ಕಾಡಬಹುದು. ಅದನ್ನೇ ಇಲ್ಲಿ ತಿಳಿಸಲಾಗಿದೆ. ಈಗಲ್ಲ, 2010ರಲ್ಲಿಯೇ ಇದನ್ನು ವಿಶ್ವದ ಅತ್ಯಂತ ದುಬಾರಿ ನೀರಿನ ಬಾಟಲಿ ಎಂದು ಗಿನ್ನೆಸ್ ವಿಶ್ವದಾಖಲೆ ಸಂಸ್ಥೆ ಕೂಡ ಘೋಷಣೆ ಮಾಡಿದೆ. ಈ ನೀರು ತುಂಬಾ ದುಬಾರಿಯಾಗಲು ಕಾರಣ ಅದರ ಪ್ಯಾಕೇಜಿಂಗ್. ಕೇವಲ 750 ಮಿಲಿಲೀಟರ್ ನೀರಿನ ಬಾಟಲಿಯು 24 ಕ್ಯಾರಟ್‌ನ ಚಿನ್ನದಿಂದ ಮಾಡಲ್ಪಟ್ಟಿದೆ. ಜಗತ್ತಿನ ಅನೇಕ ಕೋಟ್ಯಧಿಪತಿಗಳು ಈ ನೀರನ್ನು ಕುಡಿಯುತ್ತಿದ್ದಾರೆ ಎಂದು ಹೇಳಲಾಗಿದೆ.
ವರದಿಯ ಪ್ರಕಾರ, ವಿಶ್ವದ ಅತ್ಯಂತ ದುಬಾರಿ ನೀರಿನಲ್ಲಿ 5 ಗ್ರಾಂ 24-ಕ್ಯಾರೆಟ್ ಚಿನ್ನವನ್ನು ಬೆರೆಸಲಾಗಿದೆ, ಇದು ನೀರಿಗೆ ಕ್ಷಾರೀಯತೆಯನ್ನು ಸೇರಿಸಲು ಸಹಾಯ ಮಾಡುತ್ತದೆ. ಅಕ್ವಾ ಡಿ ಕ್ರಿಸ್ಟಾಲೊದ ಪ್ರತಿಯೊಂದು ಬಾಟಲಿಯು ಭೂಮಿಯ ಮೇಲಿನ ಮೂರು ವಿಭಿನ್ನ ಪ್ರದೇಶಗಳ ನೀರನ್ನು ಹೊಂದಿದೆ ಎಂದೂ ಹೇಳಲಾಗುತ್ತದೆ.
ನೀರಿನ ಒಂದು ಭಾಗವನ್ನು ಫ್ರಾನ್ಸ್‌ನ ಚಿಲುಮೆಯಿಂದ ಪಡೆಯಲಾಗುತ್ತದೆ, ಇನ್ನೊಂದು ಭಾಗವು ಫಿಜಿಯ ಚಿಲುಮೆಯಿಂದ ಮತ್ತು ಮೂರನೇ ಭಾಗವನ್ನು ಐಸ್‌ಲ್ಯಾಂಡ್‌ನ ಶೀತ ಹಿಮನದಿಗಳಿಂದ ಪಡೆಯಲಾಗಿದೆ ಎಂದು ಹೇಳಲಾಗಿದೆ. ಅಕ್ವಾ ಡಿ ಕ್ರಿಸ್ಟಾಲೊ ಟ್ರಿಬುಟೊದ ನೀರು ಸರಾಸರಿ ಕುಡಿಯುವ ನೀರಿಗಿಂತ ಹೆಚ್ಚಿನ ಶಕ್ತಿಯನ್ನು ಹೊಂದಿದೆ. ಒಂದು ದಶಕದ ಹಿಂದೆ, 2010ರ ಮಾರ್ಚ್ 4ರಂದು, ಅಕ್ವಾ ಡಿ ಕ್ರಿಸ್ಟಾಲೊ ಟ್ರಿಬುಟೊ ಇ ಮೊಡಿಗ್ಲಿಯನಿಯ ಬಾಟಲಿಯು 60,000 ಅಮೆರಿಕನ್ ಡಾಲರ್‌ಗೂ ಹೆಚ್ಚಿನ ಮೊತ್ತಕ್ಕೆ ಹರಾಜಿನಲ್ಲಿ ಮಾರಾಟವಾಯಿತು. ಅಂದರೆ, ರೂಪಾಯಿಯಲ್ಲಿ ಸುಮಾರು 49 ಲಕ್ಷ ರೂಪಾಯಿ.
ಅಕ್ವಾ ಡಿ ಕ್ರಿಸ್ಟಾಲೊ ಟ್ರಿಬುಟೊ ಎ ಮೊಡಿಗ್ಲಿಯಾನಿಯ ಬಾಟಲಿಯನ್ನು ಫರ್ನಾಂಡೊ ಅಲ್ಟಮಿರಾನೊ ವಿನ್ಯಾಸಗೊಳಿಸಿದ್ದಾರೆ. ಅವರು ಹೆನ್ರಿ 4 ಡುಡೋಗ್ನಾನ್ ಹೆರಿಟೇಜ್ ಕಾಗ್ನ್ಯಾಕ್‌ನಿಂದ ತುಂಬಿದ ವಿಶ್ವದ ಅತ್ಯಂತ ದುಬಾರಿ ನೀರಿನ ಬಾಟಲಿಯನ್ನು ವಿನ್ಯಾಸಗೊಳಿಸಿದ ವ್ಯಕ್ತಿಯಾಗಿದ್ದಾರೆ.
Nita Ambani: 40 ಲಕ್ಷದ ಬಾಟಲಿ ನೀರು ಕುಡಿದರಾ ಅಂಬಾನಿ ಪತ್ನಿ ?
ಅಕ್ವಾ ಡಿ ಕ್ರಿಸ್ಟಾಲೊ ಟ್ರಿಬುಟೊ ಎ ಮೊಡಿಗ್ಲಿಯಾನಿ ಮತ್ತು ಹೆನ್ರಿ IV ಡುಡೋಗ್ನಾನ್ ಹೆರಿಟೇಜ್ ಕಾಗ್ನ್ಯಾಕ್ ಹೊರತುಪಡಿಸಿ, ಮತ್ತೊಂದು ದುಬಾರಿ ನೀರಿನ ಬಾಟಲ್ ಕೂಡ ವಿಶ್ವದಲ್ಲಿ ಲಭ್ಯವಿದೆ. ಇದನ್ನು ಕೋನಾ ನಿಗರಿ ಎಂದು ಕರೆಯಲಾಗುತ್ತದೆ. ಇದು ಜಪಾನ್ ದೇಶದ ನೀರಿನ ಬಾಟಲಿ. ಇದರ ನೀರನ್ನು ಸಮುದ್ರ ಮಟ್ಟದಿಂದ ಸಾವಿರಾರು ಅಡಿ ಆಳದಿಂದ ಹೊರತೆಗೆಯಲಾಗುತ್ತದೆ. ಭೂಮಿಯ ಆಳದಲ್ಲಿರುವ ಪರಿಶುದ್ಧ ನೀರನ್ನು ತೆಗೆಯುವುದರಿಂದ ಕೆಲವು ಖನಿಜಗಳು ಇದರಲ್ಲಿ ಇರುತ್ತದೆ. ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ರಿಲಯನ್ಸ್ ಉದ್ಯೋಗಿಗೆ 1500 ಕೋಟಿ ಮೌಲ್ಯದ ಬಂಗಲೆ ಗಿಫ್ಟ್; ಮುಖೇಶ್ ಅಂಬಾನಿ ಈ ದುಬಾರಿ ಉಡುಗೊರೆ ನೀಡಿದ್ದು ಯಾರಿಗೆ?
ವರದಿಯ ಪ್ರಕಾರ, ಈ ನೀರನ್ನು ಸೇವಿಸುವುದರಿಂದ ಜನರು ಹೆಚ್ಚು ಚೈತನ್ಯವನ್ನು ಪಡೆಯುತ್ತಾರೆ ಹಾಗೂ ಹೊಳೆಯುವ ಚರ್ಮವನ್ನು ಹೊಂದಲು ನೆರವಾಗುತ್ತದೆ. ಈ ನೀರಿನ 750 ಮಿಲಿ ಬಾಟಲಿಯ ಬೆಲೆ 402 ಯುಎಸ್ ಡಾಲರ್ ಅಂದರೆ ಸುಮಾರು 33 ಸಾವಿರ ರೂಪಾಯಿ. ಇಡೀ ನೀರಿನ ಬಾಟಲಿಯ ಬೆಲೆ ಲೀಟರ್‌ಗೆ ಸುಮಾರು 44,000 ರೂ. ಇದು ಆಳವಾದ ಸಮುದ್ರದಲ್ಲಿ ನೈಸರ್ಗಿಕವಾಗಿ ಕಂಡುಬರುವ ಎಲೆಕ್ಟ್ರೋಲೈಟ್ಸ್‌ಗಳನ್ನು ಹೊಂದಿರುತ್ತದೆ.