ಆಟವಾಡುತ್ತಿದ್ದ 8 ವರ್ಷದ ಬಾಲಕಿಯನ್ನು ಎಳೆದೊಯ್ದು ತಿಂದು ಹಾಕಿದ ಚಿರತೆ!

ಆಟವಾಡುತ್ತಿದ್ದ 8 ವರ್ಷದ ಬಾಲಕಿಯ ಮೇಲೆ  ಚಿರತೆ ದಾಳಿ ಮಾಡಿ ಆಕೆಯನ್ನು ಬಲಿ ಪಡೆದಿದೆ. ಬಾಲಕಿ ತನ್ನ ಪೋಷಕರೊಂದಿಗೆ ಹೊಲದಲ್ಲಿ ಇರುವಾಗ ಈ ಘಟನೆ ನಡೆದಿದೆ.

Leopard attacks 8 year old girl in cultivation farm near forest area sat

ಅಪ್ಪ ಅಮ್ಮನ ಜೊತೆಗೆ ಎಂದಿನಂತೆ ಹೊಲಕ್ಕೆ ಹೋಗಿ ಅಲ್ಲಿ, ಮರದ ಕೆಳಗೆ ಆಟವಾಡುತ್ತಿದ್ದ ಬಾಲಕಿಯ ಮೇಲೆ ದಾಳಿ ಮಾಡಿದ ಚಿರತೆ, ಕಾಡಿನೊಳೆಗೆ ಎಳೆದೊಯ್ದು ರಕ್ತವನ್ನು ಹೀರಿ ಸಾಯಿಸಿರುವ ದಾರುಣ ಘಟನೆ ನೆರದಿದೆ. ಮಗಳನ್ನು ಎಳೆದೊಯ್ಯುತ್ತಿದ್ದ ಚಿರತೆಯನ್ನು ನೋಡಿ ಪೋಷಕರೆಲ್ಲರೂ ಕಲ್ಲೆಸೆದು ಕೂಗಾಡುತ್ತಾ ಅದರ ಹಿಂದೆ ಓಡುವಷ್ಟರಲ್ಲಿ ಮಗುವಿನ ಜೀವ ಹಾರಿ ಹೋಗಿತ್ತು.

ಈ ಘಟನೆ ಉತ್ತರ ಪ್ರದೇಶದ ಬಹರೈಚ್‌ನ ಕತರ್ನಿಯಾ ವನ್ಯಜೀವಿ ಅಭಯಾರಣ್ಯದ ಕಕ್ರಹಾ ವಲಯಕ್ಕೆ ಒಳಪಡುವ ತಮೋಲಿ ಪುರ್ವಾ ಗ್ರಾಮದಲ್ಲಿ ನಡೆದಿದೆ. ಕಾಡಿನಿಂದ ಹೊರಬಂದು ಹೊಲದಲ್ಲಿ ಆಟವಾಡುತ್ತಿದ್ದ ಬಾಲಕಿಯ ಮೇಲೆ ಚಿರತೆ ದಾಳಿ ಮಾಡಿದೆ. ಬಾಲಕಿ ತನ್ನ ಪೋಷಕರೊಂದಿಗೆ ಹೊಲಕ್ಕೆ ಹೋಗಿದ್ದಳು. ಹೊಲದ ಬಳಿ ಒಬ್ಬಂಟಿಯಾಗಿ ಹೊಂದು ಹಾಕಿ ಕುಳಿತಿದ್ದ ಚಿರತೆ, ಆಕೆಯ ಪೋಷಕರು ಹೊಲದಲ್ಲಿ ತಮ್ಮ ಪಾಡಿಗೆ ಕೆಲಸ ಮಾಡುತ್ತಿರುವಾಗ ದಾಳಿ ಮಾಡುವುದಕ್ಕೆ ಹೊಂಚು ಹಾಕಿ ಕುಳಿತಿತ್ತು. ಇನ್ನು ಬಾಲಕಿ ಒಬ್ಬಳೇ ಇರುವುದನ್ನು ಕಂಡ ಚಿರತೆ ಬಾಲಕಿಯ ಮೇಲೆ ದಾಳಿ ಮಾಡಿದೆ. ಚಿರತೆ ನೋಡಿ ಬಾಲಕಿ ಚೀರಾಡುತ್ತಿದ್ದಂತೆ, ಅದಾಗಲೇ ಚಿರತೆ ಬಾಲಕಿ ಕುತ್ತಿಗೆಗೆ ಬಾಯಿ ಹಾಕಿ ಗಟ್ಟಿಯಾಗಿ ಹಿಡಿದುಕೊಂಡಿದೆ.

ಇನ್ನು ಮಗಳು ಕೂಗುತ್ತಿದ್ದಂತೆ ಆಕೆಯ ಕಡೆ ನೋಡಿದ ಮನೆಯವರು ಚಿರತೆ ದಾಳಿಯನ್ನು ತಪ್ಪಿಸಿ ಬಾಲಕಿಯನ್ನು ರಕ್ಷಿಸಲು ಮುಂದಾದರೂ. ಅಷ್ಟರಲ್ಲಾಗಲೇ ಚಿರತೆ ಬಾಲಕಿಯನ್ನು ಕಾಡಿನೊಳಗೆ ಎಳೆದೊಯ್ಯುತ್ತಿತ್ತು. ಆದರೂ, ಚಿರತೆಯನ್ನು ಹಿಂಬಾಲಿಸಿಕೊಂಡು ಹೋದ ಬಾಲಕಿಯ ಮನೆಯವರು ಜೋರಾಗಿ ಕೂಗಾಡುತ್ತಾ ಕಲ್ಲು ಮತ್ತು ದೊಣ್ಣೆಯನ್ನು ಹಿಡಿದು ಚಿರತೆಯನ್ನು ಹಲ್ಲೆ ಮಾಡಲು ಹೋಗಿದ್ದಾರೆ. ಆದರೆ, ಚಿರತೆ ತನ್ನ ಜೀವಕ್ಕೆ ಆಪತ್ತು ಬಂತೆಂದು ತಿಳಿದು ಬಾಲಕಿಯನ್ನು ಬಿಟ್ಟು ಓಡಿಹೋಯಿತು. ಈ ಘಟನೆಯಿಂದ ಜನರು ಭಯಭೀತರಾಗಿದ್ದಾರೆ.

ಇದನ್ನೂ ಓದಿ: ವೈರಲ್ ಸಾಧ್ವಿ ತೆಗೆದುಕೊಂಡಿದ್ದು ಮಂತ್ರ ದೀಕ್ಷೆ ! ತಪ್ಪು ಮಾಡಿಲ್ವ ಸುಂದರಿ ಹರ್ಷ ರಿಚಾರಿಯಾ?

8 ವರ್ಷದ ಬಾಲಕಿ ಮೇಲೆ ದಾಳಿ: ಬುಧವಾರ ಮಧ್ಯಾಹ್ನ ಗ್ರಾಮದ ನಿವಾಸಿ ಬೈಜನಾಥ್ ತಮ್ಮ 8 ವರ್ಷದ ಮಗಳೊಂದಿಗೆ ಕಬ್ಬಿನ ಗದ್ದೆಗೆ ತೆರಳಿದ್ದರು. ಪೋಷಕರು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಚಿರತೆ ಬಾಲಕಿ ಮೇಲೆ ದಾಳಿ ಮಾಡಿದೆ. ದಾಳಿಯಲ್ಲಿ ಚಿರತೆ ಬಾಲಕಿ ಕುತ್ತಿಗೆ ಹಿಡಿದು ಕಬ್ಬಿನ ಗದ್ದೆಗೆ ಎಳೆದುಕೊಂಡು ಹೋಯಿತು. ಬಾಲಕಿಯ ಕಿರುಚಾಟ ಕೇಳಿ ಪೋಷಕರು ಕೋಲು ಹಿಡಿದು ಚಿರತೆಯ ಹಿಂದೆ ಓಡಿದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕಿಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು: ಮೃತ ಬಾಲಕಿ ಶಾಲಿನಿ (8 ವರ್ಷ) 2ನೇ ತರಗತಿ ಓದುತ್ತಿದ್ದಳು. ಅರಣ್ಯಾಧಿಕಾರಿಗಳು ಈ ಘಟನೆಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಕತರ್ನಿಯಾ ವನ್ಯಜೀವಿ ವಿಭಾಗದ ಡಿಎಫ್‌ಒ ಬಿ. ಶಿವಶಂಕರ್ ಚಿರತೆ ದಾಳಿಯಲ್ಲಿ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಶಿವಲಿಂಗವನ್ನು ತಬ್ಬಿಕೊಂಡ ಕರಡಿ: ವೀಡಿಯೋ ವೈರಲ್

Latest Videos
Follow Us:
Download App:
  • android
  • ios