ಕೊಚ್ಚಿ(ಫೆ.06): ತಮ್ಮ ಸುಮಧುರ ಕಂಠದ ಮೂಲಕ ಭಾರತೀಯರ ಮನೆ ಮಾತಾಗಿರುವ ಖ್ಯಾತ ಗಾಯಕ ಯೇಸುದಾಸ್ ಅವರ ಸಹೋದರ ಕೆಜೆ ಜಸ್ಟಿನ್ ಅವರ ಶವ ಕೆರೆಯಲ್ಲಿ ಪತ್ತೆಯಾಗಿದ್ದು, ಜಸ್ಟಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.  

ಕೇರಳದ ಕೊಚ್ಚಿಯ ಕರೆಯಲ್ಲಿ ಯೇಸುದಾಸ್ ಅವರ ಸಹೋದರ ಕೆಜೆ ಜಸ್ಟಿನ್ ಅವರ ಶವ ಪತ್ತೆಯಾಗಿದ್ದು, ಜಸ್ಟಿನ್ ಕೆರೆಯಲ್ಲಿ ಮುಳುಗಿ ಅಸುನೀಗಿದ್ದಾರೆ ಎಂದು ಕೊಚ್ಚಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. 

ನಿನ್ನೆ ರಾತ್ರಿಯಿಂದ ಜಸ್ಟಿನ್ ಮನಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಪೊಲೀಸರು ಕೊಚ್ಚಿಯ ಕೆರೆಯಲ್ಲಿ ಜಸ್ಟಿನ್ ಶವವನ್ನು ಪತ್ತೆ ಹಚ್ಚಿದ್ದಾರೆ.

ಕುಟುಂಬದ ಮೂಲಗಳ ಪ್ರಕಾರ ಜಸ್ಟಿನ್ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಇತ್ತೀಚಿಗೆ ಬಹಳ  ವ್ಯಾಕುಲತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ.

ಜಸ್ಟಿನ್ ಆತ್ಮಹತ್ಯೆ ಮಾಡಿಕೊಂಡರಬಹುದು ಎಂದು ಶಂಕಿಸಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

"

ಈ ಕುರಿತು ಏಶಿಯಾನೆಟ್ ನ್ಯೂಸ್.ಕಾಂನ ಮಲಯಾಳಂ ಆವೃತ್ತಿಯಲ್ಲಿ ಪ್ರಸಾರವಾಗಿರುವ  ವಿಡಿಯೋ ಸುದ್ದಿ  ಮಾಹಿತಿ ಇಲ್ಲಿದೆ.