ಪತ್ರಕರ್ತರಿಗೆ ಸಂಬಂಧಿಸಿದಂತೆ ಭಾರತ ಹಾಗೂ ಚೀನಾ ನಡುವಿನ ಸಂಘರ್ಷ ಮುಂದುವರಿದಿದ್ದು, ಚೀನಾದಲ್ಲಿ ಬಾಕಿ ಉಳಿದಿದ್ದ ಕೊನೆಯ ಭಾರತೀಯ ಪತ್ರಕರ್ತನಿಗೂ ಸ್ವದೇಶಕ್ಕೆ ತೆರಳುವಂತೆ ಕ್ಸಿ ಜಿನ್ಪಿಂಗ್ ಸರ್ಕಾರ ಸೂಚಿಸಿದೆ.
ಬೀಜಿಂಗ್: ಪತ್ರಕರ್ತರಿಗೆ ಸಂಬಂಧಿಸಿದಂತೆ ಭಾರತ ಹಾಗೂ ಚೀನಾ ನಡುವಿನ ಸಂಘರ್ಷ ಮುಂದುವರಿದಿದ್ದು, ಚೀನಾದಲ್ಲಿ ಬಾಕಿ ಉಳಿದಿದ್ದ ಕೊನೆಯ ಭಾರತೀಯ ಪತ್ರಕರ್ತನಿಗೂ ಸ್ವದೇಶಕ್ಕೆ ತೆರಳುವಂತೆ ಕ್ಸಿ ಜಿನ್ಪಿಂಗ್ ಸರ್ಕಾರ ಸೂಚಿಸಿದೆ. ಭಾರತದ ದೊಡ್ಡ ಸುದ್ದಿಸಂಸ್ಥೆಯಾದ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ವರದಿಗಾರ ಕೆಜೆಎಂ ವರ್ಮಾ ಅವರಿಗೆ ಇದೇ ತಿಂಗಳು ದೇಶ ತೊರೆಯುವಂತೆ ಚೀನಾ ಸರ್ಕಾರ ಆದೇಶಿಸಿದೆ. ಇದರೊಂದಿಗೆ ಚೀನಾದಲ್ಲಿ ಇನ್ನು ಯಾವುದೇ ಭಾರತದ ಮಾಧ್ಯಮ ಪ್ರತಿನಿಧಿಯ ಉಪಸ್ಥಿತಿ ಇರುವುದಿಲ್ಲ.
ಈ ಮುನ್ನ ಪಿಟಿಐ (PTI), ಹಿಂದುಸ್ತಾನ ಟೈಮ್ಸ್ (Hindustan Times), ದ ಹಿಂದೂ (The Hindu) ಹಾಗೂ ಪ್ರಸಾರ ಭಾರತಿ ಪತ್ರಕರ್ತರು (ನಾಲ್ವರು) ಚೀನಾದಲ್ಲಿ ಇರುತ್ತಿದ್ದರು. ಕಳೆದ 2 ತಿಂಗಳಲ್ಲಿ 3 ಪತ್ರಕರ್ತರಿಗೆ ಗೇಟ್ಪಾಸ್ ನೀಡಿದ್ದ ಚೀನಾ, ಈಗ ಕೊನೆಯ ಪತ್ರಕರ್ತನನ್ನೂ ಹೊರಹಾಕಲು ತೀರ್ಮಾನಿಸಿದೆ.
ಪ್ರಧಾನಿ ಮೋದಿ ಭೇಟಿಗೂ ಮುನ್ನ 'ನ್ಯಾಟೋ' ಆಫರ್ ನೀಡಿದ ಅಮೆರಿಕ, ತಿರಸ್ಕರಿಸಿದ ಭಾರತ!
ಕಾರಣ ಏನು?:
ಭಾರತದಲ್ಲಿನ ಇಬ್ಬರು ಚೀನಾ ಪತ್ರಕರ್ತರ ವೀಸಾ ನವೀಕರಣಕ್ಕೆ (Visa Renovation) ಭಾರತ ನಿರಾಕರಿಸಿತ್ತು. ಇದರ ಬೆನ್ನಲ್ಲೇ ಚೀನಾ ಮಾಧ್ಯಮ ಪ್ರತಿನಿಧಿಗಳನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಕ್ಸಿ ಜಿನ್ಪಿಂಗ್ ಸರ್ಕಾರ ದೂರಿತ್ತು. ಇದರ ಬೆನ್ನಲ್ಲೇ ಪ್ರತೀಕಾರ ಕ್ರಮ ಆರಂಭಿಸಿತ್ತು. ಆದರೆ ಚೀನಾ ಪತ್ರಕರ್ತರನ್ನು ಸೌಜನ್ಯದಿಂದ ನೋಡಿಕೊಂಡಿದ್ದೇವೆ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿತ್ತು. ಇದೇ ವೇಳೆ, ಚೀನಾದಲ್ಲಿನ ಭಾರತೀಯ ಪತ್ರಕರ್ತರು ಚೀನಾ ಮೂಲದ ಪತ್ರಕರ್ತರನ್ನು ತಮ್ಮ ಸಹಾಯಕ ವರದಿಗಾರರನ್ನಾಗಿ ನೇಮಿಸಿಕೊಂಡಿದ್ದರು ಎನ್ನಲಾಗಿದೆ. ಇದು ಕ್ಸಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿತ್ತು.
ಭಾರತ ಯಾವುದೇ ದೇಶದ ಮಿಲಿಟರಿ ಮೈತ್ರಿಯ ಭಾಗವಾಗಿಲ್ಲ: ಅಮೆರಿಕ ಜತೆಗಿನ ಸಂಬಂಧದ ಬಗ್ಗೆ ಚೀನಾಗೆ ಸ್ಪಷ್ಟನೆ
