ತಕ್ಷಣ ಹಿಂದೂಗಳು ಕೆನಡ ತೊರೆಯಬೇಕು, ಉಗ್ರ ಖಲಿಸ್ತಾನದ ಸಹ ಸಂಘಟನೆ ಬೆದರಿಕೆ!

ಖಲಿಸ್ತಾನ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಸಾವಿನ ಹಿಂದೆ ಭಾರತದ ಕೈವಾಡವಿದೆ ಅನ್ನೋ ಕೆನಡಾ ಪ್ರಧಾನಿ ಟ್ರುಡೋ ಹೇಳಿಕೆ ಭಾರಿ ಕೋಲಾಹಲ ಸೃಷ್ಟಿಸಿದೆ. ಇದರ ನಡುವೆ ಕೆನಾಡದಲ್ಲಿ ಖಲಿಸ್ತಾನ ಹೋರಾಟ ತೀವ್ರಗೊಂಡಿದೆ. ಕೆನಡಾದಲ್ಲಿರುವ ಹಿಂದೂಗಳು ತಕ್ಷಣ ದೇಶ ತೊರೆಯಲು ಬೆದರಿಕೆ ಹಾಕಿದೆ. 

leave Canada immediately Pro Khalistan Outfit SFJ warns Indian Hindus ckm

ಕೆನಡಾ(ಸೆ.20)  ಕೆನಡಾದಲ್ಲಿ ಉಗ್ರ ಖಲಿಸ್ತಾನ ಸಂಘಟನೆ ಹೋರಾಟ ಬಿಗಿಗೊಳಿಸುತ್ತಿದೆ. ಮತಬ್ಯಾಂಕ್‌ ಆಸೆಗೆ ಬಿದ್ದಿರುವ ಕೆನಡದ ಜಸ್ಟಿನ್ ಟ್ರುಡು ಸರ್ಕಾರ ಖಲಿಸ್ತಾನಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಖಲಿಸ್ತಾನ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಸಾವಿನ ಹಿಂದೆ ಭಾರತ ಸರ್ಕಾರದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಭಾರತದಲ್ಲಿ ಕೆನಡಾ ಪ್ರಧಾನಿ ಹಾಗೂ ಖಲಿಸ್ತಾನಿಗಳ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೆ ಕೆನಡಾದಲ್ಲಿ ಇದೀಗ ಖಲಿಸ್ತಾನಿಗಳು ಹೋರಾಟ ತೀವ್ರಗೊಳಿಸಿದ್ದಾರೆ. ಕೆನಡಾದಲ್ಲಿರುವ ಹಿಂದೂಗಳು ತಕ್ಷಣ ದೇಶ ಬಿಟ್ಟು ಹೋಗುವಂತೆ ಸೂಚನೆ ನೀಡಲಾಗಿದೆ. ಭಾರತ ಅಥವಾ ಇನ್ಯಾವುದೇ ದೇಶಕ್ಕೆ ತೆರಳಿ, ಆದರೆ ಕೆನಡಾದಲ್ಲಿ ಹಿಂದೂಗಳು ಇರಬಾರದು ಎಂದು ಖಲಿಸ್ತಾನ ಬೆಂಬಲಿತ ಸಿಖ್ ಫಾರ್ ಜಸ್ಟೀಸ್ ಸಂಘಟನೆ ಬೆದರಿಕೆ ಹಾಕಿದೆ.

ಹಿಂದೂಗಳ ತಕ್ಷಣ ನೀವು ಕೆನಡ ತೊರೆದು ಭಾರತಕ್ಕೆ ಮರಳಿ. ನೀವು ಭಾರತವನ್ನು ಬೆಂಬಲಿಸುವುದರ ಜೊತೆ ಪ್ರೋ ಖಲಿಸ್ತಾನ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದೀರಿ ಎಂದು ಸಿಖ್ ಫಾರ್ ಜಸ್ಟೀಸ್ ಸಂಘಟನೆ ನಾಯಕ ಗುರುಪತ್ವಂತ್ ಪನ್ನು ಎಚ್ಚರಿಕೆ ನೀಡಿದ್ದಾರೆ. 2019ರಲ್ಲಿ ಖಲಿಸ್ತಾನ ಬೆಂಬಲಿತ ಸಿಖ್ ಫಾರ್ ಜಸ್ಚೀಸ್ ಸಂಘಟನೆ ಭಾರತದಲ್ಲಿ ನಿಷೇಧಿಸಲಾಗಿದೆ. ಗುರುಪತ್ವಂತ್ ಸಿಂಗ್ ಪನ್ನು ಉಗ್ರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದೀಗ ಹರ್ದೀಪ್ ಸಿಂಗ್ ನಿಜ್ಜರ್ ಸಾವಿಗೆ ಪ್ರತೀಕಾರ ತೀರಿಸಲು ಈ ಉಗ್ರ ಸಂಘಟನೆ ಸಜ್ಜಾಗಿದೆ. 

ಖಲಿಸ್ತಾನ ಬೆಂಬಲಿಸಿದ ಗಾಯಕ ಶುಭ್‌ಗೆ ಮತ್ತೊಂದು ಶಾಕ್, ಪ್ರಾಯೋಜಕತ್ವ ಹಿಂಪಡೆದ ಬೋಟ್!

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮಂಗಳವಾರ ಕೆನಡಾ ಸಂಸತ್ತಿನಲ್ಲಿ ಮಾತನಾಡಿ, ‘ಕೆನಡಾದ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಸರ್ಕಾರದ ಏಜೆಂಟರ ಕೈವಾಡವಿದೆ ಎಂಬ ವಿಶ್ವಾಸಾರ್ಹ ಆರೋಪವಿದೆ. ಈ ಬಗ್ಗೆ ಕೆನಡಾ ಭದ್ರತಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ’ ಎಂದು ಗಂಭೀರ ಆರೋಪ ಮಾಡಿದರು. ‘ಕೆನಡಾದ ನೆಲದಲ್ಲಿ ಕೆನಡಾದ ಪ್ರಜೆಯ ಹತ್ಯೆಯಲ್ಲಿ ವಿದೇಶಿ ಸರ್ಕಾರ ಭಾಗಿ ಆಗುವುದು ನಮ್ಮ ಸಾರ್ವಭೌಮತ್ವದ ಉಲ್ಲಂಘನೆಯಾಗಿದೆ. ಇದು ಮುಕ್ತ ಹಾಗೂ ಪ್ರಜಾಸತ್ತಾತ್ಮಕ ದೇಶದ ಮೂಲಭೂತ ನಿಯಮಗಳಿಗೆ ವಿರುದ್ಧವಾಗಿದೆ’ ಎಂದೂ ಅವರು ಹೇಳಿದರು.

ಇದರ ಬೆನ್ನಲ್ಲೇ ಕೆನಡಾ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಅವರು ‘ಕೆನಡಾವು ಹಿರಿಯ ಭಾರತೀಯ ರಾಜತಾಂತ್ರಿಕರನ್ನು ಹೊರಹಾಕಿದೆ’ ಎಂದು ಅಧಿಕೃತ ಘೋಷಣೆ ಮಾಡಿದರು. ಉಚ್ಚಾಟಿತ ಭಾರತೀಯ ರಾಜತಾಂತ್ರಿಕ ಪವನ್ ಕುಮಾರ್ ರಾಯ್‌ ಎಂಬುವರಾಗಿದ್ದಾರೆ.

 

ಬಿಂದ್ರನ್‌ವಾಲೆಗೆ ಹಣ ನೀಡಿ ಖಲಿಸ್ತಾನ ಹೋರಾಟ ಸೃಷ್ಟಿ, ಕಾಂಗ್ರೆಸ್ ಮುಖವಾಡ ಬಯಲು ಮಾಡಿದ ನಿವೃತ್ತ R&W ಅಧಿಕಾರಿ

Latest Videos
Follow Us:
Download App:
  • android
  • ios