ಖಲಿಸ್ತಾನ ಬೆಂಬಲಿಸಿದ ಗಾಯಕ ಶುಭ್‌ಗೆ ಮತ್ತೊಂದು ಶಾಕ್, ಪ್ರಾಯೋಜಕತ್ವ ಹಿಂಪಡೆದ ಬೋಟ್!
ಕೆನಡಾದ ಸಿಖ್ ಗಾಯಕ ಶುಭ್ ಉಗ್ರ ಖಲಿಸ್ತಾನ ಸಂಘಟನೆ ಹೋರಾಟ ಬೆಂಬಲಿಸಿ ಭಾರಿ ವಿವಾದ ಸೃಷ್ಟಿಸಿದ್ದಾರೆ. ಶುಭ್ ನಡೆಯಿಂದ ಭಾರತ ಆಕ್ರೋಶಗೊಂಡಿದೆ. ವಿರಾಟ್ ಕೊಹ್ಲಿ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಶುಭ್ ಅನ್‌ಫಾಲೋ ಮಾಡಿದ್ದಾರೆ. ಇದೀಗ ಭಾರತದಲ್ಲಿನ ಶುಭ್ ಸಂಗೀತ ಕಾರ್ಯಕ್ರಮಕ್ಕೆ ನೀಡಿದ್ದ ಪ್ರಾಯೋಜಕತ್ವದಿಂದ ಬೋಟ್ ಬ್ರ್ಯಾಂಡ್ ಹಿಂದೆ ಸರಿದಿದೆ.
ಭಾರತ ಹಾಗೂ ಕೆನಡಾ ಸಂಬಂಧ ಉಗ್ರ ಖಲಿಸ್ತಾನ ಸಂಘಟನೆಯಿಂದ ಹದಗೆಟ್ಟಿದೆ. ಇದರ ನಡುವೆ ಕೆನಡಾ ಮೂಲದ ಪಂಜಾಬಿ ಸಿಂಗರ್ ಶುಭ್ ಭಾರಿ ವಿವಾದ ಮೈಮೇಲೆ ಎಳೆದಿದ್ದಾರೆ. ಖಲಿಸ್ತಾನ ಹೋರಾಟ ಬೆಂಬಲಿಸಿದ ಕಾರಣಕ್ಕೆ ಶುಭ್ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ.
ಸೆಪ್ಟೆಂಬರ್ 23 ರಿಂದ ಭಾರತದಲ್ಲಿ ಹಲವು ಸಂಗೀತ ಕಾರ್ಯಕ್ರಮಕ್ಕಾಗಿ ಶುಭ್ ಆಗಮಿಸತ್ತಿದ್ದಾರೆ. ಆದರೆ ಖಲಿಸ್ತಾನ ಬೆಂಬಲಿಸಿದ ಕಾರಣ ಈ ಕಾರ್ಯಕ್ರಮಗಳಿಗೆ ಬಹಿಷ್ಕಾರದ ಬಿಸಿ ತಟ್ಟಿದೆ. ಈಗಾಗಲೇ ಮಹಾರಾಷ್ಟ್ರ ಕಾರ್ಯಕ್ರಮ ರದ್ದುಗೊಳಿಸಲಾಗಿದೆ.
ಶುಭ್ ಭಾರತ ವಿರೋಧಿ ನಡೆ ಹಲವರನ್ನು ಕೆರಳಿಸಿದೆ. ಶುಭ್ ಭಾರತ ಪ್ರವಾಸದ ಸಂಪೂರ್ಣ ಪ್ರಯೋಜಕತ್ವ ವಹಿಸಿದ್ದ ಕನ್ಯೂಮರ್ ಎಲೆಕ್ಟ್ರಾನಿಕ್ ಕಂಪನಿ ಬೋಟ್, ಮಹತ್ವದ ನಿರ್ಧಾರ ಘೋಷಿಸಿದೆ. ದೇಶ ವಿರೋಧಿ ನಡೆಗೆ ಬೋಟ್ ಬೆಂಬಲಿಸುವುದಿಲ್ಲ ಎಂದಿದೆ.
ಶುಭ್ ಭಾರತ ಪ್ರವಾಸದ ಸಂಪೂರ್ಣ ಪ್ರಾಯೋಜಕತ್ವದಿಂದ ಬೋಟ್ ಕಂಪನಿ ಹಿಂದೆ ಸರಿದಿದೆ. ನಾವು ಭಾರತ ಮ್ಯೂಸಿಕ್ ಬ್ರಾಂಡ್ ಕಂಪನಿ. ಹೀಗಾಗಿ ಭಾರತ ವಿರೋಧಿ ನಡೆಯನ್ನು ಬೆಂಬಲಿಸುವುದಿಲ್ಲ ಎಂದಿದೆ.
ಭಾರತದಲ್ಲಿನ ಶುಭ್ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶುಭ್ ಭಾರತ ಪ್ರವಾಸದ ಸಂಪೂರ್ಣ ಪ್ರಾಯೋಜಕತ್ವವನ್ನು ಬೋಟ್ ವಹಿಸಿಕೊಂಡಿತ್ತು. ಇದೀಗ ಈ ನಿರ್ಧಾರದಿಂದ ಹಿಂದೆ ಸರಿದಿದೆ.
ಶುಭನೀತ್ ಸಿಂಗ್ ಸೆಪ್ಟೆಂಬರ್ 23 ರಿಂದ 25ರ ವರೆಗೆ ಭಾರತ ಪ್ರವಾಸ ಮಾಡಲಿದ್ದಾರೆ. ಮುಂಬೈ, ದೆಹಲಿ, ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ಶುಭ್ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ಗಾಯಕ ಶುಭ್ ಭಾರತದ ವಿವಾದಾತ್ಮಕ ಭೂಪಟ ಹಂಚಿಕೊಂಡಿದ್ದರು. ಇದರಲ್ಲಿ ರಕ್ತ ಚೆಲ್ಲಿದ ಪಂಜಾಬ್ ಚಿತ್ರಿಸಲಾಗಿದೆ. ಪಂಜಾಬ್‌ಗಾಗಿ ನನ್ನ ಪ್ರಾರ್ಥನೆ ಎಂದು ಬರೆದಿದ್ದಾರೆ. ಇಷ್ಟೇ ಅಲ್ಲ ಈ ಭೂಪಟಜಲ್ಲಿ ಜಮ್ಮ ಮುತ್ತು ಕಾಶ್ಮೀರವನ್ನೇ ಚಿತ್ರಿಸಿಲ್ಲ. ಒಟ್ಟಾರೆ ಖಲಿಸ್ತಾನ ಹೋರಾಟ ಬೆಂಬಲಿಸಿ ಈ ಪೋಸ್ಟ್ ಹಾಕಲಾಗಿದೆ.
ಕ್ರಿಕೆಟಿಗ ವಿರಾಟ್ ಕೊಹ್ಲಿಯ ನೆಚ್ಚಿನ ಗಾಯಕ ಶುಭನೀತ್ ಸಿಂಗ್. ಆದರೆ ಶುಭ್ ಖಲಿಸ್ತಾನ ಬೆಂಬಲಿಸಿದ ಬೆನ್ನಲ್ಲೇ ವಿರಾಟ್ ಕೊಹ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಶುಭ್‌ನನ್ನು ಅನ್‌ಫಾಲೋ ಮಾಡಿದ್ದಾರೆ.