Asianet Suvarna News Asianet Suvarna News

ಆಂಧ್ರದ ನಿಗೂಢ ರೋಗಕ್ಕೆ ಕಾರಣ ಬಹಿರಂಗ: ಶಾಕ್ ಕೊಟ್ಟ ರಿಪೋರ್ಟ್!

ಆಂಧ್ರದ ನಿಗೂಢ ರೋಗಕ್ಕೆ ಹಾಲು, ನೀರಿನಲ್ಲಿದ್ದ ಸೀಸ, ನಿಕ್ಕಲ್‌ ಕಾರಣ: ವರದಿ| ಏಮ್ಸ್‌ನ ವೈದ್ಯರಿಂದ ಸರ್ಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಕೆ

Lead Nickel Found In Blood Of People With Mystery Illness In Andhra pod
Author
Bangalore, First Published Dec 9, 2020, 7:59 AM IST

ಏಲೂರು(ಡಿ.09): ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ಏಲೂರು ಪಟ್ಟಣದಲ್ಲಿ 500ಕ್ಕೂ ಹೆಚ್ಚು ಜನರಲ್ಲಿ ಕಾಣಿಸಿಕೊಂಡಿರುವ ನಿಗೂಢ ರೀತಿಯ ರೋಗಕ್ಕೆ ನರ ಮಂಡಲ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುವ ವಿಷಕಾರಿ ರಾಸಾಯನಿಕ (ನ್ಯೂರೋಟಾಕ್ಸಿನ್‌)ಗಳು ಕಾರಣ ಎಂಬ ಸಂಗತಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಆಂಧ್ರ ನಿಗೂಢ ರೋಗಕ್ಕೆ ಸೊಳ್ಳೆ ನಿಯಂತ್ರಣ ಔಷಧ ಕಾರಣ?

ನೀರು ಮತ್ತು ಹಾಲಿನ ಮೂಲಕ ಸೀಸ ಮತ್ತು ನಿಕ್ಕಲ್‌ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿ ದೇಹವನ್ನು ಸೇರಿದ್ದರಿಂದ ರೋಗಿಗಳಲ್ಲಿ ಮೂರ್ಛೆ ರೋಗ, ಪಿಡ್ಸ್‌, ಬಾಯಲ್ಲಿ ನೊರೆಬರುವಿಕೆಯಂತಹ ಸಮಸ್ಯೆಗಳು ಕಂಡುಬಂದಿವೆ ಎಂದು ಏಮ್ಸ್‌ ನಡೆಸಿದ ಅಧ್ಯಯನ ವರದಿ ತಿಳಿಸಿದೆ. ತನಿಖೆಯ ಪ್ರಾಥಮಿಕ ವರದಿಯನ್ನು ಏಮ್ಸ್‌ ಅಧಿಕಾರಿಗಳು ಆಂಧ್ರ ಪ್ರದೇಶ ಆರೋಗ್ಯ ಹಾಗೂ ವೈದ್ಯಕೀಯ ಇಲಾಖೆಗೆ ಸೋಮವಾರ ಸಲ್ಲಿಕೆ ಮಾಡಿದ್ದಾರೆ.

ಕೊರೋನಾ ಶಾಕ್ ಬೆನ್ನಲ್ಲೇ ಇದೀಗ ಫ್ರಾನ್ಸ್‌ನಲ್ಲಿ ಹರಡುತ್ತಿದೆ ಬಾತುಕೋಳಿ ಜ್ವರ!

ಇದೇ ವೇಳೆ ಬ್ಯಾಕ್ಟೀರಿಯಾ ಅಥವಾ ವೈರಲ್‌ ಸೋಂಕು ರೋಗಕ್ಕೆ ಕಾರಣ ಎಲ್ಲ ಎಂದು ರಾಜ್ಯ ಆರೋಗ್ಯ ಇಲಾಖೆ ಆಯುಕ್ತ ಕಟಾಮಾನೇನಿ ಭಾಸ್ಕರ್‌ ಸ್ಪಷ್ಟನೆ ನೀಡಿದ್ದಾರೆ.

Follow Us:
Download App:
  • android
  • ios