ವೈರಲ್ ಆಗುತ್ತಿದೆ ವೈವಾಹಿಜಕ ಜಾಹೀರಾತು| ಪಶ್ಚಿಮ ಬಂಗಾಳದ ಲಾಯರ್ ಸಾಹೇಬರಿಗೆ ಆ ಅಭ್ಯಾಸ ಇಲ್ಲದ ವಧು ಬೇಕಂತೆ| ಸಿಗೋದು ಬಹಳ ಕಷ್ಟ ಅಂತಿದ್ದಾರೆ ನೆಟ್ಟಿಗರು

ಕೋಲ್ಕತ್ತಾ(ಅ.05): ಸೋಶಿಯಲ್ ಮೀಡಿಯಾದಲ್ಲಿ ವೈವಾಹಿಕ ಜಾಹೀರಾತೊಂದು ಭಾರೀ ವೈರಲ್ ಆಗಿದ್ದು, ಇದು ಭಾರಿ ಸೌಂಡ್ ಮಾಡಲಾರಂಭಿಸಿದೆ. ಹೌದು ವಕೀಲರೊಬ್ಬರು ಸೋಶಿಯಲ್ ಮೀಡಿಯಾ ಹುಚ್ಚಿಲ್ಲದ ವಧುವಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಹಿಂದೆಯೂ ಇಂತಹ ಅನೇಕ ಜಾಹೀರಾತುಗಳು ಸದ್ದು ಮಾಡಿವೆ. ಆದರೆ ಈ ಜಾಹೀರಾತು ಸೋಶಿಯತಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪಶ್ಚಿಮ ಬಂಗಾಳದ 37 ವರ್ಷದ ವಕೀಲರೊಬ್ಬರು ಈ ಜಾಹೀರಾತು ನೀಡಿದ್ದಾರೆ.

ಐಎಎಸ್ ಅಧಿಕಾರಿ ನಿತಿನ್ ಸಾಂಗ್ವಾನ್ ಜಾಹೀರಾತಿನ ಫೋಟೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಬದಲಾಗುತ್ತಿರುವ ಸಮಯದಲ್ಲಿ ಬದಲಾಗುತ್ತಿರುವ ಮಾನದಂಡಗಳ ಬಗ್ಗೆಯೂ ಉಲ್ಲೇಖಿಸಿದ್ದಾರೆ.

ಫೋಟೋ ಟ್ವಿಟ್ ಮಾಡಿರುವ ಸಾಂಗ್ವಾನ್ 'ಭಾವಿ ವಧು/ವರರು ದಯವಿಟ್ಟು ಗಮನಿಸಿ. ಮ್ಯಾಚ್‌ ಮೇಕಿಂಗ್ ಮಾನದ<ಡಗಳು ಬದಲಾಗುತ್ತಿವೆ' ಎಂದೂ ಬರೆದಿದ್ದಾರೆ.

Scroll to load tweet…

ಈ ಜಾಹೀರಾತನ್ನು ಓದಿದ ಅನೇಕ ಮಂದಿ ಅಚ್ಚರಿಗೀಡಾಗಿದ್ದಾರೆ. ಅನೇಕ ಮಂದಿ ಇಂದಿನ ದಿನಗಳಲ್ಲಿ ಇಂತಹ ವಧು ಸಿಗಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಇಂದು ಬಹುತೇಕ ಎಲ್ಲರೂ ಫೇಸ್‌ಬುಕ್, ಇನ್ಸ್ಟಾಗ್ರಾಂ ಹಾಗೂ ಟ್ವಿಟರ್‌ನಂತಹ ಸೋಧಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುತ್ತಾರೆ.

Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…

ಹೀಗಿರುವಾಗ ಅನೇಕ ಮಂದಿ ಈ ಟ್ವೀಟ್‌ಗೆ ಭಿನ್ನ ವಿಭಿನ್ನ ಕಮೆಂಟ್‌ಗಳನ್ನೂ ನೀಡಿದ್ದಾರೆ.