Asianet Suvarna News Asianet Suvarna News

ಕೊರೋನಾ ಹೆಚ್ಚಾದ್ರೆ ಮತ್ತೆ ಲಾಕ್ಡೌನ್‌: ಸಿಎಂ ಎಚ್ಚರಿಕೆ

ಭೋಪಾಲ್‌, ಇಂದೋ​ರ್‌ನಲ್ಲಿ ಇಂದಿ​ನಿಂದ​ಲೇ ರಾತ್ರಿ ಕರ್ಫ್ಯೂ| ಕೊರೋನಾ ಹೆಚ್ಚಾದ್ರೆ ಮತ್ತೆ ಲಾಕ್ಡೌನ್‌: ಸಿಎಂ ಎಚ್ಚರಿಕೆ
 

Last warning do Not force govt to impose lockdown Maharashtra CM Uddhav Thackeray pod
Author
Bangalore, First Published Mar 14, 2021, 12:52 PM IST

ಮುಂಬೈ(ಮಾ.14): ಮಹಾ​ರಾ​ಷ್ಟ್ರ​ದಲ್ಲಿ ಶನಿ​ವಾರ ಮತ್ತೆ 15,602 ಮಂದಿ​ಯಲ್ಲಿ ಹೊಸ​ದಾಗಿ ಕೊರೋನಾ ವೈರಸ್‌ ಪತ್ತೆ​ಯಾ​ಗಿದೆ. ಇದ​ರೊಂದಿ​ಗೆ ರಾಜ್ಯದ ಒಟ್ಟು ಸೋಂಕಿ​ತರ ಸಂಖ್ಯೆ 22.97 ಲಕ್ಷ ದಾಟಿದೆ. ಮುಂಬೈ​ನಲ್ಲೂ ನಿನ್ನೆ 1709 ಮಂದಿಯಲ್ಲಿ ಸೋಂಕು ದೃಢ​ಪ​ಟ್ಟಿದೆ.

ಈ ಬಗ್ಗೆ ಶನಿವಾರ ರೆಸ್ಟೋ​ರೆಂಟ್‌ ಮಾಲೀ​ಕರ ಜೊತೆ ಪರಿ​ಶೀ​ಲನೆ ಸಭೆ ನಡೆ​ಸಿದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ‘ಪರಿ​ಸ್ಥಿತಿ ಹೀಗೆ ಮುಂದು​ವ​ರಿ​ದರೆ ಮತ್ತೊಂದು ಸುತ್ತಿನ ಲಾಕ್‌​ಡೌನ್‌ ಜಾರಿ​ಗೊ​ಳಿ​ಸ​ಬೇ​ಕಾಗುತ್ತದೆ. ರಾಜ್ಯಾ​ದ್ಯಂತ ಮತ್ತೆ ಲಾಕ್‌​ಡೌನ್‌ ಹೇರುವ ಪರಿ​ಸ್ಥಿತಿ ತಂದಿ​ಡ​ಬೇ​ಡಿ. ಹೋಟೆ​ಲ್‌​ಗಳಲ್ಲಿ ಸಾಮಾ​ಜಿಕ ಅಂತರ ಮತ್ತು ಮಾಸ್ಕ್‌ಗೆ ಒತ್ತು ನೀಡಿ. ಇದು ನನ್ನ ಕಡೆಯ ಎಚ್ಚರಿಕೆ’ ಎಂದು ಎಚ್ಚ​ರಿ​ಸಿ​ದರು.

ಭೋಪಾಲ್‌, ಇಂದೋ​ರ್‌ನಲ್ಲಿ ಇಂದಿ​ನಿಂದ​ಲೇ ರಾತ್ರಿ ಕರ್ಫ್ಯೂ

ಕೊರೋನಾ ವೈರಸ್‌ ನಿಯಂತ್ರ​ಣ​ಕ್ಕಾಗಿ ಮಹಾ​ರಾ​ಷ್ಟ್ರದ ವಿವಿಧ ನಗ​ರ​ಗ​ಳಲ್ಲಿ ರಾತ್ರಿ ಕಫä್ರ್ಯ ಜಾರಿ ಮಾಡಿದ ಬೆನ್ನಲ್ಲೇ, ಮಧ್ಯ​ಪ್ರ​ದೇ​ಶದ ಭೋಪಾಲ್‌ ಮತ್ತು ಇಂದೋರ್‌ ನಗ​ರ​ಗ​ಳಲ್ಲೂ ಸಹ ಇದೇ ಕ್ರಮ ಜಾರಿ​ಗೊ​ಳಿ​ಸುವ ಸಾಧ್ಯ​ತೆ​ಯಿದೆ.

ರಾಜ್ಯ​ದ​ಲ್ಲಿನ ಕೊರೋನಾ ಪರಿ​ಸ್ಥಿತಿ ಕುರಿ​ತಾಗಿ ಅಧಿ​ಕಾ​ರಿ​ಗಳ ಜೊತೆ ಸಭೆ ನಡೆ​ಸಿದ ಸಿಎಂ ಚೌಹಾಣ್‌ ಅವರು, ‘ರಾಜ್ಯ​ದಲ್ಲಿ ಕೊರೋನಾ ವೈರ​ಸ್‌​ಗಳ ಸಂಖ್ಯೆ ಹೆಚ್ಚು​ತ್ತಿದೆ. ಹೀಗಾಗಿ ಭಾನು​ವಾರ ಅಥವಾ ಸೋಮ​ವಾ​ರ​ದಿಂದ ಈ ಎರಡೂ ನಗ​ರ​ಗ​ಳಲ್ಲಿ ರಾತ್ರಿ ಕರ್ಫ್ಯೂ ಮತ್ತೆ ಜಾರಿ​ಯಾ​ಗುವ ಸಂಭ​ವ​ವಿದೆ’ ಎಂದು ತಿಳಿ​ಸಿ​ದರು.

ದೇಶ​ದಲ್ಲೇ ಅತಿ​ಹೆಚ್ಚು ಸೋಂಕು ದೃಢ​ಪ​ಡು​ತ್ತಿ​ರುವ ಮಹಾ​ರಾಷ್ಟ್ರ ಸೇರಿ​ದಂತೆ ಇನ್ನಿ​ತರ ರಾಜ್ಯ​ಗ​ಳಿಂದ ನಮ್ಮ ರಾಜ್ಯಕ್ಕೆ ವಿಮಾನ, ರೈಲು ಸೇರಿ ಇನ್ನಿ​ತರ ವಾಹ​ನ​ಗಳ ಮೂಲಕ ಜನ ಪ್ರವೇ​ಶಿ​ಸು​ತ್ತಿ​ದ್ದಾರೆ. ಹೀಗಾಗಿ ನೆರೆ ರಾಜ್ಯ​ಗ​ಳಿಂದ ಬರುವ ಎಲ್ಲ​ರಿಗೂ ಥರ್ಮಲ್‌ ಪರೀಕ್ಷೆ ಮಾಡಿ​ಸ​ಲೇ​ಬೇಕು. ಜೊತೆಗೆ ಜನರು ಮಾಸ್ಕ್‌, ಸಾಮಾ​ಜಿಕ ಅಂತರ ಕಾಯ್ದು​ಕೊ​ಳ್ಳುವ ಕುರಿ​ತಾಗಿ ಜಿಲ್ಲೆಗ​ಳಲ್ಲಿ ಜಾಗೃತಿ ಕಾರ್ಯ​ಕ್ರ​ಮ​ಗ​ಳನ್ನು ಏರ್ಪ​ಡಿ​ಸ​ಲೇ​ಬೇಕು ಎಂದು ಅಧಿ​ಕಾ​ರಿ​ಗ​ಳಿಗೆ ಸೂಚಿ​ಸಿ​ದ್ದಾರೆ.

Follow Us:
Download App:
  • android
  • ios