Asianet Suvarna News Asianet Suvarna News

ರಾಜ್ಯಸಭೆಯಲ್ಲೂ ಭಾರೀ ಮತದೊಂದಿಗೆ ಮಹಿಳಾ ಮೀಸಲು ವಿಧೇಯಕ ಪಾಸ್‌

ಐತಿಹಾಸಿಕ ಮಹಿಳಾ ಮೀಸಲು ವಿಧೇಯಕ ರಾಜ್ಯಸಭೆಯಲ್ಲೂ ಭಾರಿ ಮತದೊಂದಿಗೆ ಅಂಗೀಕಾರಗೊಂಡಿದೆ. ಮಸೂದೆಯ ಪರವಾಗಿ ಎಲ್ಲಾ 215 ಮತಗಳು ದಾಖಲಾದರೆ, ವಿರುದ್ಧವಾಗಿ ಒಂದೂ ಮತಗಳು ಬೀಳಲಿಲ್ಲ.

Landmark  Women Reservation Bill Passed in Rajya Sabha 215 Votes san
Author
First Published Sep 21, 2023, 10:33 PM IST

ನವದೆಹಲಿ (ಸೆ.21): ಸಂಸತ್ತಿನ ವಿಶೇಷ ಅಧಿವೇಶನದ ನಾಲ್ಕನೇ ದಿನದಂದು, ಮಹಿಳಾ ಮೀಸಲಾತಿ ಮಸೂದೆ (ನಾರಿ ಶಕ್ತಿ ವಂದನ್ ಮಸೂದೆ) ರಾಜ್ಯಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟಿದೆ. ಮಸೂದೆಯ ವಿರುದ್ಧ ಯಾರೂ ಮತ ಹಾಕಲಿಲ್ಲ. ಸದನದಲ್ಲಿ ಹಾಜರಿದ್ದ ಎಲ್ಲ 215 ಸಂಸದರು ಮಸೂದೆಯನ್ನು ಬೆಂಬಲಿಸಿದರು. ಈಗ ಈ ಮಸೂದೆಯನ್ನು ರಾಷ್ಟ್ರಪತಿಗಳಿಗೆ ಕಳಿಸಲಾಗುತ್ತದೆ. ಅವರ ಒಪ್ಪಿಗೆ ದೊರೆತ ತಕ್ಷಣ ಇದು ಕಾನೂನಾಗಿ ಪರಿಣಮಿಸುತ್ತದೆ. ನಿನ್ನೆ (ಬುಧವಾರ) ಲೋಕಸಭೆಯಲ್ಲಿ ಈ ಮಸೂದೆ ಅಂಗೀಕಾರವಾಗಿದೆ. ಪ್ರಕ್ರಿಯೆ ಪೂರ್ಣಗೊಂಡ ನಂತರ, ಮಹಿಳೆಯರಿಗೆ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ 33% ಮೀಸಲಾತಿ ಸಿಗುತ್ತದೆ. ಈ ಬಗ್ಗೆ ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ನಾವು ಮಸೂದೆಯ ಬಗ್ಗೆ ಅರ್ಥಪೂರ್ಣ ಚರ್ಚೆ ನಡೆಸಿದ್ದೇವೆ, ಈ ಚರ್ಚೆಯ ಪ್ರತಿಯೊಂದು ಪದವು ಭವಿಷ್ಯದಲ್ಲಿ ಉಪಯುಕ್ತವಾಗಲಿದೆ. ಪ್ರತಿಯೊಂದು ಪದಕ್ಕೂ ತನ್ನದೇ ಆದ ಮೌಲ್ಯ ಮತ್ತು ಮಹತ್ವವಿದೆ. ಎಲ್ಲಾ ಸಂಸದರು ತಮ್ಮ ಹೇಳಿಕೆಯ ಆರಂಭದಲ್ಲಿ ನಾನು ಮಸೂದೆಯನ್ನು ಬೆಂಬಲಿಸುತ್ತೇನೆ ಎಂದು ಹೇಳಿದರು. ಇದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಇದರಿಂದ ದೇಶದ ಜನರಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ಎಲ್ಲಾ ಸಂಸದರು ಮತ್ತು ಪಕ್ಷಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸಿವೆ. ಎಲ್ಲ ಸಂಸದರು ಇದನ್ನು ಸರ್ವಾನುಮತದಿಂದ ಅಂಗೀಕರಿಸಬೇಕು ಎಂದು ಮನವಿ ಮಾಡಿದರು.

ಈ ಮಸೂದೆಯನ್ನು ನಾನು ಮತ್ತು ನನ್ನ ಪಕ್ಷ ಬೆಂಬಲಿಸುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಈ ಬಿಲ್ ಬರುವುದು ನಮಗೆ ತಿಳಿದಿರಲಿಲ್ಲ. ಆದರೆ ವಿಧೇಯಕ ಬರುವುದು ಉಪರಾಷ್ಟ್ರಪತಿಗೆ ಆಗಲೇ ಗೊತ್ತಿತ್ತು. ಸೆಪ್ಟೆಂಬರ್ 4 ರಂದು ಜೈಪುರದಲ್ಲಿ ನೀವು ಮಾತನಾಡುತ್ತಾ,  ದೇಶದ ಸಂಸತ್ತು ಮತ್ತು ಅಸೆಂಬ್ಲಿಗಳಲ್ಲಿ ಮಹಿಳೆಯರಿಗೆ ಸಮಾನ ಹಕ್ಕು ಸಿಗುವ ದಿನ ದೂರವಿಲ್ಲ ಎಂದಿದ್ದೀರಿ ಎಂದರು.


ಚುನಾವಣೆಯಯ ಸಮಯದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ. 15 ಲಕ್ಷ ಪ್ರತಿಯೊಬ್ಬರ ಖಾತೆಗೆ ಹಾಕುತ್ತೇವೆ ಎಂದಿತ್ತು. ಆದರೆ, ಇದು ಮಾಡಲೇ ಇಲ್ಲ. ಮಹಿಳಾ ಮೀಸಲಾತಿ ವಿಧೇಯಕ ಕೂಡ ಇದೇ ರೀತಿ ಸುಳ್ಳಿನ ಕಂತೆ ಆಗಬಾರದು. ಅದನ್ನು ಜಾರಿಗೆ ತರಬೇಕು ಎಂದು ನಾನು ಬಯಸುತ್ತೇನೆ. ನೋಟು ಅಮಾನ್ಯೀಕರಣದ ನಿರ್ಧಾರವನ್ನು ನೀವು ತಕ್ಷಣ ತೆಗೆದುಕೊಂಡಂತೆ, ಮೀಸಲಾತಿಯನ್ನು ತಕ್ಷಣವೇ ಜಾರಿಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಿ ಎಂದು ಖರ್ಗೆ ಹೇಳಿದರು.

Women Reservation Bill: ಲೋಕಸಭೆಯಲ್ಲಿ ಮಹಿಳಾ ಮೀಸಲು ವಿಧೇಯಕ ಪಾಸ್‌

ಈ ವೇಳೆ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಅವರ ಸರ್ಕಾರಕ್ಕೆ ನಾನು ಮನ್ನಣೆ ನೀಡಲು ಬಯಸುತ್ತೇನೆ, ಅವರು ಪಂಚಾಯತ್ ರಾಜ್‌ನಲ್ಲಿ ಮಹಿಳೆಯರಿಗೆ 33 ಪ್ರತಿಶತ ಮೀಸಲಾತಿ ನೀಡಿದ್ದಾರೆ. ಇದರೊಂದಿಗೆ ಪಂಚಾಯಿತಿ ಮಟ್ಟದಲ್ಲಿ ಪ್ರಗತಿ ಕಂಡಿದ್ದೇವೆ. ಇಂದು ಹಲವು ರಾಜ್ಯಗಳಲ್ಲಿ ಶೇ.33ರ ಮೀಸಲಾತಿಯನ್ನು ಶೇ.50ಕ್ಕೆ ಹೆಚ್ಚಿಸಲಾಗಿದೆ ಎಂದು ಹೇಳಿದರು.

ಮಹಿಳಾ ಮೀಸಲು ವಿಧೇಯಕದ ಪರ ಮತ ಹಾಕಲು ಇಬ್ಬರು ಸಂಸದರು ನಿರಾಕರಿಸಿದ್ದೇಕೆ?

ನಮ್ಮ ರಾಷ್ಟ್ರದ ಪ್ರಜಾಸತ್ತಾತ್ಮಕ ಪಯಣದಲ್ಲಿ ನಿರ್ಣಾಯಕ ಕ್ಷಣ! 140 ಕೋಟಿ ಭಾರತೀಯರಿಗೆ ಅಭಿನಂದನೆಗಳು. ನಾರಿ ಶಕ್ತಿ ವಂದನ್ ವಿಧೇಯಯಕಕ್ಕೆ ಮತ ಹಾಕಿದ ಎಲ್ಲಾ ರಾಜ್ಯಸಭಾ ಸಂಸದರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಇಂತಹ ಒಮ್ಮತದ ಬೆಂಬಲ ನಿಜಕ್ಕೂ ಸಂತಸ ತಂದಿದೆ. ಸಂಸತ್ತಿನಲ್ಲಿ ನಾರಿ ಶಕ್ತಿ ವಂದನ್ ಅಧಿನಿಯಮ್ ಅಂಗೀಕಾರದೊಂದಿಗೆ, ನಾವು ಭಾರತದ ಮಹಿಳೆಯರಿಗೆ ಬಲವಾದ ಪ್ರಾತಿನಿಧ್ಯ ಮತ್ತು ಸಬಲೀಕರಣದ ಯುಗವನ್ನು ಪ್ರಾರಂಭಿಸುತ್ತೇವೆ. ಇದು ಕೇವಲ ಶಾಸನವಲ್ಲ; ಇದು ನಮ್ಮ ದೇಶವನ್ನು ನಿರ್ಮಿಸಿದ ಅಸಂಖ್ಯಾತ ಮಹಿಳೆಯರಿಗೆ ಗೌರವವಾಗಿದೆ. ಅವರ ಕೊಡುಗೆಗಳಿಂದ ಭಾರತವನ್ನು ಶ್ರೀಮಂತಗೊಳಿಸಲಾಗಿದೆ. ಈ ಹಂತದಲ್ಲಿ ನಮ್ಮ ರಾಷ್ಟ್ರದ ಎಲ್ಲಾ ಮಹಿಳೆಯರ ಶಕ್ತಿ, ಧೈರ್ಯ ಮತ್ತು ಅದಮ್ಯ ಮನೋಭಾವವನ್ನು ನಾವು ನೆನಪಿಸಿಕೊಳ್ಳುತ್ತೇವೆ. ಈ ಐತಿಹಾಸಿಕ ಹೆಜ್ಜೆಯು ಅವರ ಧ್ವನಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕೇಳಲು ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

Follow Us:
Download App:
  • android
  • ios