Asianet Suvarna News Asianet Suvarna News

ಮಹಿಳಾ ಮೀಸಲು ವಿಧೇಯಕದ ಪರ ಮತ ಹಾಕಲು ಇಬ್ಬರು ಸಂಸದರು ನಿರಾಕರಿಸಿದ್ದೇಕೆ?

ಲೋಕಸಭೆಯಲ್ಲಿ ಮಹಿಳಾ ಮೀಸಲು ವಿಧೇಯಕ ಭಾರೀ ಮತದೊಂದಿಗೆ ಪಾಸ್‌ ಆಯಿತು. ವಿಧೇಯಕದ ಪರವಾಗಿ 454 ಮತಗಳು ಬಂದರೆ, ವಿರುದ್ಧವಾಗಿ 2 ಮತಗಳು ಬಂದವು. ಈ ಎರಡೂ ಮತಗಳು ಅಸಾದುದ್ದೀನ್‌ ಓವೈಸಿ ಅವರ ಪಕ್ಷ ಎಐಎಂಐಎಂನದ್ದಾಗಿತ್ತು.
 

in Loksabha Why Asaduddin Owaisi and Imtiaz Jaleel Voted Against Women Reservation Bill san
Author
First Published Sep 21, 2023, 7:36 PM IST

ನವದೆಹಲಿ (ಸೆ.21): ಭಾರತೀಯ ಸಂವಿಧಾನದ ಇತಿಹಾಸದಲ್ಲಿ ಐತಿಹಾಸಿಕ ಕ್ಷಣ ಎನ್ನುವಂತೆ ಹೊಸ ಸಂಸತ್ತಿನಲ್ಲಿ ಮೊದಲ ವಿಧೇಯಕವಾಗಿ ಮಹಿಳಾ ಮೀಸಲು ಮಸೂದೆಯನ್ನು ಮಂಡಿಸಲಾಗಿತ್ತು. ಎಲ್ಲಾ ಪಕ್ಷಗಳಿಂದ ಅಭೂತಪೂರ್ವ ಬೆಂಬಲ ಪಡೆದ ಈ ವಿಧೇಯಕದ ಪರವಾಗಿ ಲೋಕಸಭೆಯಲ್ಲಿ 454 ಮತಗಳು ಬಂದಿದ್ದರೆ, ವಿರುದ್ಧವಾಗಿ 2 ಮತಗಳು ಬಂದಿದ್ದವು. ಈ ಎರಡು ಮತಗಳು ಅಂಧ್ರಪ್ರದೇಶದ ಎಐಎಂಐಎಂ ಪಕ್ಷದ್ದಾಗಿತ್ತು. ಪಕ್ಷದ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್‌ ಓವೈಸಿ ಹಾಗೂ ಪಕ್ಷದ ಸಂಸದ ಇಮ್ತಿಯಾಜ್‌ ಜಲೀಲ್‌ ಈ ವಿಧೇಯಕದ ವಿರುದ್ಧವಾಗಿ ಮತ ಚಲಾವಣೆ ಮಾಡಿದ್ದರು. ಈ ವಿಧೇಯಕವು ಮೇಲ್ಜಾತಿಯ ಮಹಿಳೆಯರಿಗೆ ಮಾತ್ರವೇ ಪ್ರಾತಿನಿದ್ಯ ನೀಡುತ್ತದೆ ಎನ್ನುವುದು ಅವರ ವಾದವಾಗಿತ್ತು. ಲೋಕಸಭೆಯಲ್ಲಿ ಮುಸ್ಲಿ ಮಹಿಳೆಯರ ಪ್ರಾತಿನಿದ್ಯ ಕೇವಲ ಶೇ.0.7 ಅಷ್ಟೇ ಇದೆ ಎಂದು ಹೇಳಿದ್ದರು.

17ನೇ ಲೋಕಸಭೆಯ ವೇಳೆಗೆ ಈವರೆಗೂ 690 ಮಹಿಳಾ ಸಂಸದರು ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಇದರಲ್ಲಿ ಕೇವಲ 25 ಮಂದಿ ಮಾತ್ರವೇ ಮುಸ್ಲಿಂ ಮಹಿಳೆಯರಾಗಿದ್ದಾರೆ. 1957, 1962, 1991 ಹಾಗೂ 1999 ಚುನಾವಣೆಯಲ್ಲಿ ಯಾವೊಬ್ಬ ಮುಸ್ಲಿಂ ಮಹಿಳೆ ಕೂಡ ಲೋಕಸಭೆಗೆ ಚುನಾಯಿತರಾಗಿರಲಿಲ್ಲ ಎಂದು ಅಸಾದುದ್ದೀನ್‌ ಓವೈಸಿ ಲೋಕಸಭೆಯ ಚರ್ಚೆಯ ವೇಳೆ ಹೇಳಿದ್ದರು. ಇದರ ಬೆನ್ನಲ್ಲಿಯೇ ಟ್ವೀಟ್‌ ಮಾಡಿರುವ ಎಐಎಂಐಎಂ ಸಂಸದ ಇಮ್ತಿಯಾಜ್‌ ಜಲೀಲ್‌, ಮಹಿಳಾ ಮೀಸಲು ವಿಧೇಯಕದ ವಿಚಾರದಲ್ಲಿ ನಾವು ಸೋತಿದ್ದೇವೆ. ಆದರೆ, ಕನಿಷ್ಠ ಪಕ್ಷ ನಾವು ಹೋರಾಟ ಮಾಡಿದ್ದೇವೆ. 454 ಮತಗಳು ಪರವಾಗಿ ಬಿದ್ದಿದ್ದರೆ, 2 ವೋಟ್‌ಗಳು ವಿರುದ್ಧವಾಗಿ ಬಿದ್ದಿದೆ. ಒಬಿಸಿಗಳು ಹಾಗೂ ಮುಸ್ಲಿಮರು ಖಂಡಿತವಾಗಿ 454 ಮತಗಳನ್ನು ನೆನಪಿಟ್ಟುಕೊಳ್ಳುವುದಿಲ್ಲ. ಆದರೆ, ಅವರಿಗಾಗಿ ನಾವು ಹಾಕಿರುವ ಎರಡು ಮತಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲಿದ್ದಾರೆ ಎಂದು ಟ್ವೀಟ್‌ ಮಾಡಿದ್ದಾರೆ.

Women Reservation Bill: ಲೋಕಸಭೆಯಲ್ಲಿ ಮಹಿಳಾ ಮೀಸಲು ವಿಧೇಯಕ ಪಾಸ್‌

ಈ ನಡುವೆ ಅವರು ಈ ವಿಧೇಯಕದ ವಿರುದ್ಧವಾಗಿ ಮತ ಚಲಾವಣೆ ಮಾಡಿದ್ದೇಕೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಈ ಬಗ್ಗೆ ಮಾತನಾಡಿರುವ ಓವೈಸಿ,  ಈಗ ತಾನೆ ಲೋಕಸಭೆಯಲ್ಲಿ ವಿಧೇಯಕದ ಕುರಿತಾಗಿ ಮತ ನಡೆಯಿತು. ಒಬಿಸಿ ಹಾಗೂ ಮುಸ್ಲಿಂ ಮಹಿಳೆಯರ ಪರವಾಗಿ ನಾವು ಹೋರಾಟ ಮಾಡಿದ್ದೇವೆ. ಈ ಬಿಲ್‌ ತಂದಿರುವ ಹಿಂದಿನ ಉದ್ದೇಶವೇನು, ಈ ಮಹಿಳೆಯರಿಗೆ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಅವಕಾಶ ಸಿಗಬೇಕು ಎನ್ನುವುದು. ಆದರೆ, ರಾಜಕಾರಣದಲ್ಲಿ ಇವರುಗಳ ಪ್ರಾತಿನಿಧ್ಯವೇ ಇಲ್ಲದಿರುವುವಾಗ ಇದು ಹೇಗೆ ಸಾಧ್ಯ? ಒಬಿಸಿ ಮಹಿಳೆಯರಿಗೆ ಹಾಗೂ ಮುಸ್ಲಿ ಮಹಿಳೆಯರಿಗೆ ಮೀಸಲಾತಿ ಸಿಗಬೇಕು ಅನ್ನೋದಷ್ಟೇ ನಮ್ಮ ಇಂಗಿತ ಎಂದು ಓವೈಸಿ ಹೇಳಿದ್ದಾರೆ.

ಮಹಿಳಾ ಮೀಸಲು ಕಾಂಗ್ರೆಸ್‌, ಯುಪಿಎ ಪ್ರಯತ್ನಕ್ಕೆ ಸಂದ ಜಯ: ಶಾಸಕ ದೇಶಪಾಂಡೆ

Follow Us:
Download App:
  • android
  • ios