ಮಹಾಕುಂಭ ಮೇಳ ಸ್ಥಳ ವಕ್ಫ್ ಆಸ್ತಿ, ಆಲ್ ಇಂಡಿಯಾ ಮುಸ್ಲಿಮ್ ಜಮಾತ್ ಸ್ಫೋಟಕ ಹೇಳಿಕೆ
ಸಾವಿರಾರು ವರ್ಷಗಳ ಇತಿಹಾಸವಿರು ಸನಾತನ ಧರ್ಮದ ಪವಿತ್ರ ಹಬ್ಬ ಮಹಾಕುಂಭ ಮೇಳದ ಮೇಲೂ ವಕ್ಫ್ ಸಮಿತಿ ಕಣ್ಣು ಬಿದ್ದಿದೆಯಾ? ಆಲ್ ಇಂಡಿಯಾ ಮುಸ್ಲಿಮ್ ಜಮಾತ್ ಈ ಕುರಿತು ಸ್ಫೋಟಕ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದೆ. ಮಹಾಕುಂಭ ಮೇಳೆ ನಡೆಯುತ್ತಿರುವ ಸ್ಥಳ ವಕ್ಫ್ ಆಸ್ತಿ ಎಂದಿದೆ.
ಲಖನೌ(ಜ.05) ಭಾರತದಲ್ಲಿ ಸಾವಿರಾರು ವರ್ಷಗಳ ಹಿಂದಿನ ಹಿಂದೂ ದೇವಸ್ಥಾನ, ರೈತರ ಜಮೀನು, ಸರ್ಕಾರಿ ಶಾಲೆ ಸೇರಿದಂತೆ ಹಲವು ಸ್ಥಳಗಳನ್ನು ವಕ್ಫ್ ಸಮಿತಿ ತನ್ನದು ಎಂದು ನೋಟಿಸ್ ನೀಡಿ ಈಗಾಗಲೇ ವಿವಾದ ಸೃಷ್ಟಿಸಿದೆ. ಇನ್ನು ಲಕ್ಷ ಲಕ್ಷ ಏಕರೆ ಸ್ಥಳವನ್ನು ಈಗಾಗಲೇ ವಕ್ಫ್ ತನ್ನ ಹೆಸರಿಗೆ ಮಾಡಿಕೊಡಿದೆ. ಇದೀಗ ಹಿಂದೂ ಧರ್ಮದ ಪವಿತ್ರ ಆಚರಣೆಯಾಗಿರುವ ಮಹಾಕುಂಭ ಮೇಳದ ಮೇಲೂ ವಕ್ಫ್ ಸಮಿತಿ ಕಣ್ಣು ಬಿದ್ದಿದೆಯಾ? ಹೌದು ಎನ್ನುತ್ತಿದೆ ಆಲ್ ಇಂಡಿಯಾ ಮುಸ್ಲಿಮ್ ಜಮಾತ್ ಅಧ್ಯಕ್ಷರ ಮಾತು. ಮಹಾಕುಂಭ ಮೇಳೆ ಆರಂಭಕ್ಕೆ ಕ್ಷಣಗಣನೇ ಆರಂಭವಾಗಿರುವ ಬೆನ್ನಲ್ಲೇ ಆಲ್ ಇಂಡಿಯಾ ಮುಸ್ಲಿಮ್ ಜಮಾತ್ ಅಧ್ಯಕ್ಷ ಮೌಲನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಪ್ರತಿ ವರ್ಷ ನಡೆಯುತ್ತಿರುವ ಮಹಾಕುಂಭ ಮೇಳೆ ಸ್ಥಳ ವಕ್ಪ್ ಆಸ್ತಿಗೆ ಸೇರಿದೆ ಎಂದಿದ್ದಾರೆ.
ಮೌಲನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಈ ಕುರಿತು ವಿಡಿಯೋ ಸಂದೇಶ ಹರಿಬಿಟ್ಟಿದ್ದಾರೆ. ಈ ಮೂಲಕ ಯಾವುದೇ ವಿವಾದಗಳಿಲ್ಲದೆ ಸಾಗುತ್ತಿರುವ ಮಹಾಕುಂಭ ಮೇಳದಲ್ಲಿ ವಿವಾದದ ಕಿಡಿ ಹೊತ್ತಿಸಿದ್ದಾರೆ. ಪ್ರಯಾಗರಾಜ್‌ನಲ್ಲಿ ಮಹಾಕುಂಭ ಮೇಳ ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ. ಇದರ ಬೆನ್ನಲ್ಲೇ ಮೌಲನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಹೇಳಿಕೆ ಇದೀಗ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ.
ವಕ್ಫ್ ಆಸ್ತಿ ಮಾತು ಬಿಡಿ, ಈ ರೈಲು ನಿಲ್ದಾಣದ ಪಕ್ಕದ ಸ್ಥಳ ಪಾಕಿಸ್ತಾನ ಪ್ರಧಾನಿ ಆಸ್ತಿ ಎಂದ ಅಧಿಕಾರಿಗಳು!
ವಿಡಿಯೋ ಸಂದೇಶದಲ್ಲಿ ಮೌಲನಾ ಶಹಾಬುದ್ದೀನ್ ರಜ್ವಿ ಬರೇಲ್ವಿ, ಭಾರತದ ಅದರಲ್ಲೂ ಪ್ರಯಾಗರಾಜ್‌ನಲ್ಲಿರುವ ಮುಸ್ಲಿಮರು ಅತ್ಯಂತ ಸಹಿಷ್ಣುಗಳು ಎಂದಿದ್ದಾರೆ. ಕಾರಣ ಮಹಾಕುಂಭ ಮೇಳ ವಕ್ಫ್ ಆಸ್ತಿಯಲ್ಲಿ ನಡೆಯುತ್ತಿದೆ. ಆದರೆ ಪ್ರಯಾಗರಾಜ್ ಮುಸ್ಲಿಮರು ಇದಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇದು ಮುಸ್ಲಿಮರ ಅತೀ ಹೃದವೈಶಾಲ್ಯತೆಗೆ ಹಿಡಿದ ಕನ್ನಡಿಯಾಗಿದೆ. ಇದಕ್ಕೆ ಪ್ರತಿಯಾಗಿ ಹಿಂದೂಗಳು ಮಹಾಕುಂಭ ಮೇಳೆದಲ್ಲಿ ಮುಸ್ಲಿಮರಿಗೆ ಅವಕಾಶ ನೀಡಬೇಕು ಎಂದಿದ್ದಾರೆ. ಮಹಾಕುಂಭ ಮೇಳ ನಡುಯೆವು ಸರಿಸುಮಾರು 35 ಏಕರೆ ಪ್ರದೇಶ ವಕ್ಫ್ ಆಸ್ತಿ ಎಂದು ಶಹಾಬುದ್ದೀನ್ ರಜ್ವಿ ಬರೇಲ್ವಿ ಹೇಳಿದ್ದಾರೆ.
ಅಕರ ಪರಿಷದ್, ನಾಗ ಸನ್ಯಾಸಿ, ಸ್ವಾಮೀಜಿಗಳು ಸೇರಿದಂತೆ ಕೆಲವರು ಮಹಾಕುಂಭ ಮೇಳದಲ್ಲಿ ಮುಸ್ಲಿರ ಪ್ರವೇಶ ನಿಷೇಧಿಸಿದ್ದಾರೆ ಎಂದು ಶಹಾಬುದ್ದೀನ್ ರಜ್ವಿ ಬರೇಲ್ವಿ ಹೇಳಿದ್ದಾರೆ. 35ಕ್ಕೂ ಹೆಚ್ಚು ಏಕರೆ ಪ್ರದೇಶ ವಕ್ಪ್ ಆಸ್ತಿಯಾಗಿದೆ. ಇದು ಪ್ರಯಾಗರಾಜ್‌ನ ಮುಸ್ಲಿಮರ ಮಾಲೀಕತ್ವದಲ್ಲಿದೆ. ಆದರೆ ಮುಸ್ಲಿಮರು ಮಹಾಕುಂಭ ಮೇಳಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಹಿಂದೂಗಳು ಮುಸ್ಲಿಮರ ಪ್ರವೇಶ ನಿಷೇಧಿಸಿದ್ದಾರೆ ಎಂದಿದ್ದಾರೆ.
ಮಹಾಕುಂಭ ಮೇಳ ಸ್ಥಳ ವಕ್ಫ್ ಆಸ್ತಿ ಅನ್ನೋ ಹೇಳಿಕೆಗೆ ಹಿಂದೂಮಹಾಸಭಾ ಅಧ್ಯಕ್ಷ ಸ್ವಾಮಿ ಚಿಕ್ರಪಾಣಿ ಮಹರಾಜ್ ಖಂಡಿಸಿದ್ದಾರೆ. ತೀವ್ರ ಆಕ್ರೋಶ ಹೊರಹಾಕಿರುವ ಚಕ್ರಪಾಣ ಮಹಾರಾಜ್, ಈ ಮೌಲ್ವಿ ಹೇಳಿ ಪಾಕಿಸ್ತಾನ ಪ್ರಾಯೋಜಿತ ಹಾಗೂ ಭಯೋತ್ಪಾದಕ ಮನಸ್ಥಿತಿಯಿಂದ ಕೂಡಿದೆ. ಶಹಾಬುದ್ದೀನ್ ರಜ್ವಿ ಬರೇಲ್ವಿ ಶಾಂತಿಯುತವಾಗಿ ನಡೆಯುತ್ತಿರುವ ಮಹಾಕುಂಭ ಮೇಳವವನ್ನು ಕೆಡಿಸಲು ಯತ್ನಿಸುತ್ತಿದ್ದಾರೆ. ಇವರ ವಿರುದ್ದ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಮಹಾಕುಂಭ ಮೇಳೆ ವಾತಾವರಣ ಕೆಡಿಸಲು ಪ್ರಯತ್ನಿಸುತ್ತಿರುವ ಇಂತಹ ವ್ಯಕ್ತಿಗಳ ವಿರುದ್ದ ತಕ್ಷಣ ಕಾನೂನು ಕ್ರಮ ಆಗಬೇಕು. ತಕ್ಷಣವೇ ಬಂಧಿಸಬೇಕು. ಇಲ್ಲದಿದ್ದರೂ ಮತ್ತಷ್ಟು ಈ ರೀತಿಯ ಹೇಳಿಕೆಗಳು ಬರಲಿದೆ. ಇದು ಪವಿತ್ರ ಆಚರಣೆಗೆ ಹಾಗೂ ಶಾಂತಿ ಸುವ್ಯವಸ್ಥೆಗೆ ಅಡ್ಡಿಯಾಗಲಿದೆ. ಮಹಾಕುಂಭ ಮೇಳೆದಲ್ಲಿ ಮುಸ್ಲಿಮ್ ವ್ಯಾಪಾರಿಗಳು, ಮುಸ್ಲಿಮರು ಪ್ರವೇಶ ನಿರಾಕರಿಸಲಾಗಿದೆ. ಇದು ಮುಸ್ಲಿಮ್ ಮೌಲ್ವಿಗಳು ಸೇರಿದಂತೆ ಹಲರಿಗೆ ನುಂಗಲಾರದ ತುತ್ತಾಗಿದೆ. ಹೀಗಾಗಿ ಕುಂಭ ಮೇಳದ ವಿರುದ್ದ ಷಡ್ಯಂತ್ರಗಳು ನಡೆಯುತ್ತಿದೆ ಎಂದು ಚಕ್ರಪಾಣಿ ಮಹಾರಾಜ್ ಆಗ್ರಹಿಸಿದ್ದರೆ.
ಆಂಧ್ರ ವಕ್ಫ್ ಆಡಳಿತ ಮಂಡಳಿ ವಿಸರ್ಜನೆ: ಟಿಡಿಪಿ ಸರ್ಕಾರ ಹಾಕಲಿದೆ ಹೊಸ ಬೋರ್ಡ್