ಪುತ್ರ ಶಿವಂ ಮಿಶ್ರಾ ಚಲಾಯಿಸುತ್ತಿದ್ದ ಲ್ಯಾಂಬೋರ್ಘಿನಿ ಕಾರು ಹರಿದು 6 ಮಂದಿಗೆ ಗಾಯವಾದ ಸಂಬಂಧ ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಅವರು ತಮ್ಮ ಮಗನ ಬೆನ್ನಿಗೆ ನಿಂತಿದ್ದು ‘ನನ್ನ ಪುತ್ರ ಕಾರು ಚಲಾಯಿಸುತ್ತಿರಲಿಲ್ಲ. ಅಲ್ಲದೇ ಆತನ ಪಾನಮತ್ತನಾಗಿರಲಿಲ್ಲ’ ಎಂದಿದ್ದಾರೆ.

ಕಾನ್ಪುರ: ಪುತ್ರ ಶಿವಂ ಮಿಶ್ರಾ ಚಲಾಯಿಸುತ್ತಿದ್ದ ಲ್ಯಾಂಬೋರ್ಘಿನಿ ಕಾರು ಹರಿದು 6 ಮಂದಿಗೆ ಗಾಯವಾದ ಸಂಬಂಧ ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಅವರು ತಮ್ಮ ಮಗನ ಬೆನ್ನಿಗೆ ನಿಂತಿದ್ದು ‘ನನ್ನ ಪುತ್ರ ಕಾರು ಚಲಾಯಿಸುತ್ತಿರಲಿಲ್ಲ. ಅಲ್ಲದೇ ಆತನ ಪಾನಮತ್ತನಾಗಿರಲಿಲ್ಲ’ ಎಂದಿದ್ದಾರೆ.

Add Asianetnews Kannada as a Preferred SourcegooglePreferred

ಕಾರು ಹರಿಯುತ್ತಿದ್ದಂತೆ ಶಿವಂ ಪ್ರಜ್ಞಾಹೀನನಾದ

ಈ ಬಗ್ಗೆ ಮಾತನಾಡಿರುವ ಅವರು, ‘ಘಟನೆಗೂ ಹಿಂದಿನ ದಿನ ಲ್ಯಾಂಗೋರ್ಘಿನಿ ಕಾರಿನಲ್ಲಿ ತಾಂತ್ರಿಕ ಸಮಸ್ಯೆಯಿತ್ತು. ಹಾಗಾಗಿ ಅದನ್ನು ಸರಿಪಡಿಸಲಾಗಿತ್ತು. ಶಿವಂ ಮತ್ತು ಚಾಲಕ ಪರೀಕ್ಷೆಗೆಂದು ಕಾರು ತೆಗೆದುಕೊಂಡು ಹೋಗಿದ್ದರು. ಪಾದಚಾರಿಗಳ ಮೇಲೆ ಕಾರು ಹರಿಯುತ್ತಿದ್ದಂತೆ ಶಿವಂ ಪ್ರಜ್ಞಾಹೀನನಾದ.

ಕಾರಿನ ಬಾಗಿಲು ತೆಗೆಯುವುದಕ್ಕೆ ಆಗಲಿಲ್ಲ

ಕಾರಿನ ಬಾಗಿಲು ತೆಗೆಯುವುದಕ್ಕೆ ಆಗಲಿಲ್ಲ. ಗಾಜು ಒಡೆದು ಶಿವಂನನ್ನು ಹೊರ ತೆಗೆಯಲಾಯಿತು. ಸದ್ಯ ಅವನು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು 2-3 ದಿನದಲ್ಲಿ ಸುಧಾರಿಸಿಕೊಳ್ಳಬಹುದು. ಅಪಘಾತದ ವೇಳೆ ಶಿವಂ ಕಾರು ಚಲಾಯಿಸುತ್ತಿರಲಿಲ್ಲ. ಅಲ್ಲದೇ ನಮ್ಮ ಮನೆಯಲ್ಲಿ ಯಾರಿಗೂ ಮದ್ಯಸೇವನೆ ಅಭ್ಯಾಸ ಇಲ್ಲ’ ಎಂದಿದ್ದಾರೆ.

ಆದರೆ ಪೊಲೀಸರು, ಕಾರು ಚಲಾಯಿಸಿದ್ದು ಶಿವಂ. ಅಲ್ಲದೇ ಈ ದೃಶ್ಯಾವಳಿಗಳು ಸಿಸಿಟೀವಿಯಲ್ಲಿ ಸೆರೆಯಾಗಿದೆ ಎಂದು ದೃಢಪಡಿಸಿದ್ದಾರೆ.