* ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ಅವರ ಕಿರಿಯ ಪುತ್ರ ತೇಜಸ್ವಿ ಯಾದವ್ ಮದುವೆ* ರಾಚೆಲ್ ಅಲೆಕ್ಸಿಸ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತೇಜಸ್ವಿ* ಕಿರಿ ಸೊಸೆಗೆ ಹೊಸ ಹೆಸರಿಟ್ಟ ಲಾಲು ಕುಟುಂಬ

ಪಾಟ್ನಾ(ಡಿ.10): ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ಅವರ ಕಿರಿಯ ಪುತ್ರ ತೇಜಸ್ವಿ ಯಾದವ್ ಮತ್ತು ರಾಚೆಲ್ ಅಲೆಕ್ಸಿಸ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುವಾರ ಸಂಜೆ ಹಿಂದೂ ಪದ್ಧತಿಯಂತೆ ವಿವಾಹ ನೆರವೇರಿಸಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮೂಲಕ ತೇಜಸ್ವಿ-ರೇಚೆಲ್ ಪತಿ ಪತ್ನಿಯಾಗಿದ್ದಾರೆ. ಯಾದವ್ ಕುಟುಂಬ ಕೂಡ ತಮ್ಮ ಹೊಸ ಸೊಸೆಗೆ ಹೊಸ ಹೆಸರನ್ನು ಇಟ್ಟಿದೆ.

Add Asianetnews Kannada as a Preferred SourcegooglePreferred

ಈಗ ತೇಜಸ್ವಿ ವಧುವಿಗೆ ಹೊಸ ಹೆಸರು

ವಾಸ್ತವವಾಗಿ, ತೇಜಸ್ವಿ ಪತ್ನಿ ಮತ್ತು ಲಾಲು ಯಾದವ್ ಅವರ ಕಿರಿಯ ಸೊಸೆ ರಾಚೆಲ್ ಅವರನ್ನು ಈಗ ರಾಜೇಶ್ವರಿ ಯಾದವ್ ಎಂದು ಕರೆಯಲಾಗುತ್ತದೆ. ಏಕೆಂದರೆ ತೇಜಸ್ವಿ ವಧು, ರಚೆಲ್ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರು ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ. ಯಾದವೇತರ ಕುಟುಂಬದೊಂದಿಗೆ ಈ ಸಂಬಂಧ ನಡೆದಿರುವುದು ಇದೇ ಮೊದಲು. ಅದಕ್ಕಾಗಿಯೇ ಲಾಲು ಕುಟುಂಬ ತಮ್ಮ ಹೊಸ ಸೊಸೆಗೆ ರಾಜೇಶ್ವರಿ ಯಾದವ್ ಎಂದು ಹೆಸರಿಟ್ಟಿದ್ದಾರೆ.

ಈ ಮದುವೆಗೆ ಲಾಲು ಯಾದವ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು

ಈ ಮದುವೆಗೆ ತೇಜಸ್ವಿ ಅವರ ತಂದೆ ಲಾಲು ಯಾದವ್ ಅವರು ಈ ಮದುವೆಗೆ ಸಿದ್ಧರಿರಲಿಲ್ಲ ಎಂಬುವುದು ಉಲ್ಲೇಖನೀಯ. ಏಕೆಂದರೆ ರಾಚೆಲ್ ಕ್ರಿಶ್ಚಿಯನ್ ಎಂಬ ಕಾರಣಕ್ಕೆ ಲಾಲು ಯಾದವ್ ಈ ಸಂಬಂಧವನ್ನು ವಿರೋಧಿಸಿದ್ದರು. ಆದರೆ ತೇಜಸ್ವಿ ಈ ಮದುವೆ ಮಾಡುವಂತೆ ಒತ್ತಾಯಿಸಿದ್ದರು. ಹೀಗಿರುವಾಗ ಲಾಲು ಮಗನ ಸಂತೋಷಕ್ಕೆ ತಲೆಬಾಗಿ ಈ ಮದುವೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ತನ್ನ ತಂದೆಯ ಅನುಮತಿ ಪಡೆದ ತಕ್ಷಣ, ತೇಜಸ್ವಿ ನಿಧಾನವಾಗಿ ತನ್ನ ಇಡೀ ಕುಟುಂಬವನ್ನು ಈ ಮದುವೆಗೆ ಒಪ್ಪಿಸಿದರು.

ರಾಚೆಲ್ ಗಗನಸಖಿಯೂ ಆಗಿದ್ದರು

ಮಾಧ್ಯಮಗಳಲ್ಲಿ ನಡೆಯುತ್ತಿರುವ ಸುದ್ದಿ ಪ್ರಕಾರ, ತೇಜಸ್ವಿ ಯಾದವ್ ಮತ್ತು ಅವರ ವಧು ರಾಜಶ್ರೀ ಅವರ ಸ್ನೇಹಕ್ಕೆ 7 ವರ್ಷ. ಇವರು ಚಂಡೀಗಢ ಮೂಲದ ಉದ್ಯಮಿಯೊಬ್ಬರ ಮಗಳು ಮತ್ತು ಹರಿಯಾಣದವರು. ರೇಚೆಲ್ ಗಗನಸಖಿಯಾಗಿಯೂ ಕೆಲಸ ಮಾಡಿದ್ದಾರೆ. ಅವರು ಕೆಲವು ವರ್ಷಗಳ ಹಿಂದೆ ಈ ಕೆಲಸ ತೊರೆದರು. ಇಬ್ಬರೂ ದೆಹಲಿಯ ಆರ್‌ಕೆ ಪುರಂನಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲಿ (ಡಿಪಿಎಸ್) ಒಟ್ಟಿಗೆ ಓದಿದ್ದಾರೆ. ಅದೇ ಸಮಯದಲ್ಲಿ, ಅವರು 2014 ರಿಂದ ಆಪ್ತರಾದರು. ಸ್ನೇಹ ಪ್ರೀತಿಗೆ ತಿರುಗಿ ಮದುವೆ ಎಂಬ ಬಮಧನದಲ್ಲಿ ಒಂದಾಗಿದ್ದಾರೆ. 

ಸರ್ಕಾರಿ ವೆಬ್‌ಸೈಟ್‌ನಲ್ಲಿ ಹುಡುಗಿಯರ ಲೈನ್

ತೇಜಸ್ವಿ ಯಾದವ್ ಅವರ ಮದುವೆಯ ಬಗ್ಗೆ ಕಳೆದ ಹಲವಾರು ವರ್ಷಗಳಿಂದ ಚರ್ಚೆ ನಡೆಯುತ್ತಿದೆ ಎಂಬುವುದು ಉಲ್ಲೇಖನೀಯ. ಅವರು ರಾಜಕೀಯಕ್ಕೆ ಬಂದಾಗ ಅವರಿಗೆ ಸಂಬಂಧಗಳು ಬರಲಾರಂಭಿಸಿದವು. ಈ ಮಧ್ಯೆ ಅವರು ಬಿಹಾರದಲ್ಲಿ ಉಪಮುಖ್ಯಮಂತ್ರಿಯಾದಾಗ ಹೆಣ್ಣುಮಕಕ್ಕಳು ಅವರನ್ನು ಮದುವರಯಾಗಲು ಪೈಪೋಟಿಗಿಳಿದಿದ್ದರು. ಅಲ್ಲದೇ ಸರ್ಕಾರಿ ವೆಬ್‌ಸೈಟ್‌ನಲ್ಲಿ ಹೆಣ್ಣುಮಕ್ಕಳ ಸಂಬಂಧಗಳೂ ಹರಿದು ಬಂದಿದ್ದವು.

ತೇಜಸ್ವಿಯವರಿಗೆ ಬಂದಿತ್ತು 44,000 ಪ್ರೊಪೋಸಲ್ಸ್

ಉಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತೇಜಸ್ವಿ ಅವರು ತಮ್ಮ ವಾಟ್ಸಾಪ್ ನಂಬರ್ ಒಂದನ್ನು ಸರ್ಕಾರಿ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿದ್ದರು. ಇದರಿಂದ ಜನರು ತಮ್ಮ ಸಮಸ್ಯೆಗಳನ್ನು ಫೋಟೋಗಳೊಂದಿಗೆ ಹಂಚಿಕೊಳ್ಳುವಂತೆ ತಿಳಿಸಿದ್ದರು. ಆದರೆ ಜನರು ಮದುವೆಗೆಯಾಗುವಂತೆ ಕೇಳಿ ತಮ್ಮ ಹೆಣ್ಣು ಮಕ್ಕಳ ಫೋಟೋ ಹಾಕಲು ಶುರು ಮಾಡಿದರು. ಇದರಲ್ಲಿ ಕುಟುಂಬದ ಎಲ್ಲಾ ವಿವರಗಳು ಸೇರಿದಂತೆ ಜಾತಕವನ್ನೂ ಕಳುಹಿಸುತ್ತಿದ್ದರು. ಸರ್ಕಾರದ ಅಂಕಿಅಂಶಗಳ ಪ್ರಕಾರ, ಸುಮಾರು 44,000 ಹುಡುಗಿಯರ ಸಂಬಂಧಗಳು ಈ ವಾಟ್ಸಾಪ್ ಸಂಖ್ಯೆಗೆ ಮದುವೆಯಾಗುವಂತೆ ಕೋರಿ ಬಂದಿದ್ದವು. ಎಲ್ಲರೂ ತೇಜಸ್ವಿಯನ್ನು ತಮ್ಮ ಅಳಿಯನನ್ನಾಗಿ ಮಾಡಲು ಬಯಸಿದ್ದರು.

ತೇಜಸ್ವಿ ಬಗ್ಗೆ ಕೆಲ ಮಾಹಿತಿ

ಲಾಲು ಯಾದವ್ ಅವರಿಗೆ 7 ಪುತ್ರಿಯರು ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ. ತೇಜಸ್ವಿ ಯಾದವ್ (32 ವರ್ಷ) ಅತ್ಯಂತ ಕಿರಿಯ. ಆದಾಗ್ಯೂ, ತೇಜಸ್ವಿ ಅವರನ್ನು ಲಾಲು ಯಾದವ್ ಅವರ ರಾಜಕೀಯ ಉತ್ತರಾಧಿಕಾರಿ ಎಂದು ಪರಿಗಣಿಸಲಾಗಿದೆ. ಲಾಲು ಅನುಪಸ್ಥಿತಿಯಲ್ಲಿ ಪಕ್ಷಕ್ಕೆ ಸಂಬಂಧಿಸಿದ ಎಲ್ಲ ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳುತ್ತಿದ್ದಾರೆ. ಸದ್ಯ ತೇಜಸ್ವಿ ಬಿಹಾರದ ವಿರೋಧ ಪಕ್ಷದ ನಾಯಕನೂ ಆಗಿದ್ದಾರೆ. ತೇಜಸ್ವಿ ರಾಘೋಪುರ ಕ್ಷೇತ್ರದಿಂದ ಶಾಸಕರಾಗಿದ್ದಾರೆ ಮತ್ತು 2015 ರಿಂದ 2017 ರವರೆಗೆ ಬಿಹಾರದ ಉಪ ಮುಖ್ಯಮಂತ್ರಿಯಾಗಿದ್ದಾರೆ. ತೇಜಸ್ವಿ ಅವರು ಕ್ರಿಕೆಟ್‌ ಕ್ಷೇತ್ರದಲ್ಲೂ ಸಾಧನೆ ಮಾಡಲು ಪ್ರಯತ್ನಿಸಿದ್ದಾರೆ. ಅವರು ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದಲ್ಲಿ ಆಡಿದ್ದಾರೆ. ಅಲ್ಲದೇ ಜಾರ್ಖಂಡ್ ಕ್ರಿಕೆಟ್ ತಂಡದ ಸದಸ್ಯರಾಗಿದ್ದರು

ಹಿರಿಯ ಸಹೋದರ ತೇಜ್ ಪ್ರತಾಪ್ ವಿಚ್ಛೇದನ ಪಡೆದರು

ತೇಜಸ್ವಿಯವರ ಹಿರಿಯ ಸಹೋದರ ತೇಜ್ ಪ್ರತಾಪ್ 2018 ರಲ್ಲಿ ವಿವಾಹವಾಗಿದ್ದರು. ಅವರು ದರೋಗಾ ರೈ ಅವರ ಮೊಮ್ಮಗಳು ಮತ್ತು ಚಂದ್ರಿಕಾ ರೈ ಅವರ ಮಗಳು ಐಶ್ವರ್ಯಾ ರೈ ಅವರನ್ನು ವಿವಾಹವಾದರು. ಆದರೆ ಮದುವೆಯಾದ ಕೆಲವು ತಿಂಗಳ ನಂತರ ತೇಜ್ ಪ್ರತಾಪ್ ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ತೇಜ್ ಪ್ರತಾಪ್ ಮತ್ತು ಐಶ್ವರ್ಯಾ ಪರಸ್ಪರ ಗಂಭೀರ ಆರೋಪ ಮಾಡಿದ್ದರು. ಹೈವೋಲ್ಟೇಜ್ ನಾಟಕದ ನಂತರ ಇಬ್ಬರೂ ಈಗ ವಿಚ್ಛೇದನ ಪಡೆದಿದ್ದಾರೆ.