Asianet Suvarna News Asianet Suvarna News

Lakhimpur Kheri Case: ಕೇಂದ್ರ ಸಚಿವರ ಪುತ್ರನಿಗೆ ಸುಪ್ರೀಂಕೋರ್ಟ್‌ನಿಂದ ಜಾಮೀನು..!

ರೈತರು ಉತ್ತರ ಪ್ರದೇಶದ ಅಂದಿನ ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಅವರ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾಗ ಈ ಘಟನೆ ನಡೆದಿತ್ತು.

lakhimpur kheri case ashish mishra gets interim bail cant stay in uttar pradesh delhi ash
Author
First Published Jan 25, 2023, 11:59 AM IST

ನವದೆಹಲಿ (ಜನವರಿ 25, 2023): ಕೇಂದ್ರ ಸಚಿವ ಅಜಯ್‌ ಕುಮಾರ್‌ ಮಿಶ್ರಾ ಅವರ ಪುತ್ರ ಆಶಿಶ್‌ ಮಿಶ್ರಾಗೆ ಸುಪ್ರೀಂಕೋರ್ಟ್‌ ಜಾಮೀನು ನೀಡಿದೆ. 22021ರ ಲಖೀಂಖೇರಿ ಹಿಂಸಾಚಾರ ಪ್ರಕರಣದಲ್ಲಿ 8 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದೆ. ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಹಾಗೂ ಜೆ.ಕೆ. ಮಹೇಶ್ವರಿ ನೇತೃತ್ವದ ಸುಪ್ರೀಂಕೋರ್ಟ್‌ ದ್ವಿಸದಸ್ಯ ಪೀಠ ಈ ತೀರ್ಪು ನೀಡಿದ್ದು, ಆದರೆ ಈ 8 ವಾರಗಳ ಕಾಲ ಆಶಿಶ್‌ ಮಿಶ್ರಾ ಉತ್ತರ ಪ್ರದೇಶದಲ್ಲಾಗಲಿ ಅಥವಾ ರಾಷ್ಟ್ರ ರಾಜಧಾನಿ ದೆಹಲಿಗೆ ಆಗಲಿ ಹೋಗುವಂತಿಲ್ಲ ಎಂದು ನಿರ್ದೇಶನ ನೀಡಿದೆ. 

ಅಲ್ಲದೆ, ಈ ಪ್ರಕರಣದ ವಿಚಾರಣೆಯನ್ನು ಮೇಲ್ವಿಚಾರಣೆ ಮಾಡೋದಾಗಿಯೂ ಕೋರ್ಟ್‌ ಹೇಳಿದೆ. ಅಕ್ಟೋಬರ್ 3, 2021 ರಂದು ಉತ್ತರ ಪ್ರದೇಶದ ಲಖೀಂಪುರ ಖೇರಿ ಜಿಲ್ಲೆಯ ಟಿಕುನಿಯಾ ಎಂಬಲ್ಲಿ ಗಲಭೆ ನಡೆದಿತ್ತು. ರೈತರು ಉತ್ತರ ಪ್ರದೇಶದ ಅಂದಿನ ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಅವರ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾಗ ಈ ಘಟನೆ ನಡೆದಿತ್ತು. ಆಶಿಶ್‌ ಮಿಶ್ರಾ ಕೂತಿದ್ದ ಎಸ್‌ಯುವಿ ನಾಲ್ವರು ರೈತರ ಮೇಲೆ ಹತ್ತಿಸಿದ್ದಕ್ಕೆ ಅನ್ನದಾತರು ಬಲಿಯಾಗಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರ ಎಫ್‌ಐಆರ್‌ ಹೇಳುತ್ತದೆ.

ಇದನ್ನು ಓದಿ: ಲಖೀಂಪುರ ಹಿಂಸಾಚಾರ: ಜಾಮೀನು ತಿರಸ್ಕಾರ, ಶರಣಾದ ಆಶೀಶ್ ಮಿಶ್ರಾ ಜೈಲಿಗೆ!

ಈ ಘಟನೆ ಬಳಿಕ, ಉದ್ರಿಕ್ತ ರೈತರು ಎಸ್‌ಯುವಿ ಚಾಲಕ ಹಾಗೂ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಹಿಂಸಾಚಾರದಲ್ಲಿ ಪತ್ರಕರ್ತರೊಬ್ಬರು ಮೃತಪಟ್ಟಿದ್ದರು. 

ಕಳೆದ ವರ್ಷ ಜುಲೈ 26 ರಂದು ಅಲಾಹಾಬಾದ್‌ ಹೈಕೋರ್ಟ್‌ನ ಲಖನೌ ಪೀಠ ಆಶಿಶ್‌ ಮಿಶ್ರಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ನಂತರ ಹೈಕೋರ್ಟ್‌ ಅರ್ಜಿಯನ್ನು ಮೇಲ್ಮನವಿ ಸಲ್ಲಿಸಿದ್ದ ಆಶಿಶ್‌ ಮಿಶ್ರಾ ದೇಶದ ಉನ್ನತ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಮಧ್ಯೆ, ಉತ್ತರ ಪ್ರದೇಶದ ವಿಚಾರಣಾ ನ್ಯಾಯಾಲಯವು 2022 ರ ಡಿಸೆಂಬರ್‌ನಲ್ಲಿ ಆಶಿಶ್‌ ಮಿಶ್ರಾ ವಿರುದ್ಧ ಕೊಲೆ ಆರೋಪಗಳನ್ನು ದಾಖಲಿಸಿದೆ. ಅಲ್ಲದೆ, ಸೆಕ್ಷನ್ 147 (ಗಲಭೆ), 148 (ಮಾರಣಾಂತಿಕ ಶಸ್ತ್ರಾಸ್ತ್ರಗಳೊಂದಿಗೆ ಗಲಭೆ), 149 (ಸಾಮಾನ್ಯ ವಸ್ತುವಿನ ವಿಚಾರಣೆಯಲ್ಲಿ ಮಾಡಿದ ಅಪರಾಧ), 302 (ಕೊಲೆ), 307 (ಕೊಲೆಗೆ ಯತ್ನ), 326 (ಅಪಾಯಕಾರಿ ಆಯುಧಗಳಲ್ಲಿ ಸ್ವಯಂಪ್ರೇರಿತವಾಗಿ ಘೋರವಾದ ಗಾಯವನ್ನು ಉಂಟುಮಾಡುವುದು),  427 (ಹಾನಿ ಉಂಟುಮಾಡುವ ಕಿಡಿಗೇಡಿತನ), IPC ಯ 120B (ಅಪರಾಧದ ಪಿತೂರಿ) ಮತ್ತು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 177 ಅಡಿಯಲ್ಲಿ ಆರೋಪಗಳನ್ನು ರಚಿಸಲಾಗಿದೆ.)

ಇದನ್ನೂ ಓದಿ: ಆಶಿಶ್ ಮಿಶ್ರಾ ಜಾಮೀನು ರದ್ದುಗೊಳಿಸಿದ ಸುಪ್ರೀಂ, ಒಂದು ವಾರದಲ್ಲಿ ಶರಣಾಗಲು ಆದೇಶ!

ಇನ್ನು, ಸುಪ್ರೀಂಕೋರ್ಟ್‌ನಲ್ಲಿ ಆಶಿಶ್‌ ಮಿಶ್ರಾ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಿದ್ದರು. ಹಾಗೂ, ದೂರುದಾರರ ಪರವಾಗಿ ವಕೀಲ ಪ್ರಶಾಂತ್ ಭೂಷಣ್ ಅವರೊಂದಿಗೆ ಹಿರಿಯ ವಕೀಲ ದುಷ್ಯಂತ್ ದವೆ ಮತ್ತು ಉತ್ತರ ಪ್ರದೇಶ ರಾಜ್ಯದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಗರಿಮಾ ಪ್ರಶಾದ್ ವಾದ ಮಂಡಿಸಿದ್ದರು.

ಇದನ್ನೂ ಓದಿ: Lakhimpur Kheri case : ಜೈಲಿನಿಂದ ಬಿಡುಗಡೆಯಾದ ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಆಶಿಶ್

Follow Us:
Download App:
  • android
  • ios