ಕಾಶ್ಮೀರದಲ್ಲಿ 26 ಹಿಂದೂಗಳ ಹತ್ಯೆ ಖಂಡನೀಯ. ಸಾಮಾಜಿಕ ಜಾಲತಾಣಗಳಲ್ಲಿ ಉಗ್ರರಿಗೆ ಕಠಿಣ ಶಿಕ್ಷೆಗೆ ಆಗ್ರಹ ವ್ಯಕ್ತವಾಗಿದೆ. ಬಲಿಪಶುಗಳ ಪತ್ನಿಯರು ಧರ್ಮ ಕೇಳಿ ಗುಂಡು ಹಾರಿಸಿದ್ದಾಗಿ ಹೇಳಿದ್ದಾರೆ. ಆದರೆ, ಓರ್ವ ಯುವತಿ ಕಾಶ್ಮೀರದಲ್ಲಿ ಯಾವುದೇ ಧಾರ್ಮಿಕ ತಾರತಮ್ಯ ನಡೆದಿಲ್ಲ, ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಹೇಳಿದ್ದಾಳೆ. ಈಕೆ ರಾಹುಲ್ ಗಾಂಧಿಯೊಂದಿಗೆ ಕಾಣಿಸಿಕೊಂಡಿದ್ದು, ವಿವಾದಕ್ಕೆ ಕಾರಣವಾಗಿದೆ.

ಕಾಶ್ಮೀರದಲ್ಲಿ ಉಗ್ರರು ನಡೆಸಿರುವ 26 ಮಂದಿಯ ನರಮೇಧಕ್ಕೆ ನಿಜವಾದ ಭಾರತೀಯರೆಲ್ಲರೂ ಕೊತಕೊತ ಕುದಿಯುತ್ತಿದ್ದಾರೆ. ಹಿಂದೂಗಳ ಮೇಲೆ ನಡೆದಿರುವ ಈ ಹತ್ಯಾಕಾಂಡಕ್ಕೆ ನಿಜವಾದ ದೇಶಪ್ರೇಮಿಗಳ ಮನದಲ್ಲಿ ಕಿಚ್ಚು ಹೊತ್ತಿ ಉರಿದಿದೆ.  ಉಗ್ರರನ್ನು, ಅವರಿಗೆ ರಕ್ಷಣೆ ನೀಡುತ್ತಿರುವವರನ್ನು ಮಟ್ಟ ಹಾಕುವವರೆಗೂ ನಿಜವಾದ ಭಾರತೀಯರಿಗೆ ನೆಮ್ಮದಿ ಇಲ್ಲ. ಹೆಂಡತಿ- ಮಕ್ಕಳ ಎದುರಿನಲ್ಲಿಯೇ ಹಿಂದೂ ಗಂಡಸರನ್ನು ಕೊಲೆ ಮಾಡಿರುವ ಪಾತಕಿಗಳಿಗೆ ಏಳೇಳು ಜನ್ಮದಲ್ಲಿಯೂ ನಡುಕು ಹುಟ್ಟಿಸುವಂಥ ಶಿಕ್ಷೆ ಆಗಬೇಕು ಎಂದೇ ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲಿ ಸತ್ತಿರುವ ಪ್ರತಿಯೊಬ್ಬ ಹಿಂದೂ ಪುರುಷರ ಪತ್ನಿಯರು ಹೇಳಿದ್ದು ಏನೆಂದರೆ, ನೀವು ಯಾವ ಧರ್ಮದವರು ಎಂದು ಕೇಳಿದರು. ಹಿಂದೂಗಳು ಎಂದ ತಕ್ಷಣ ಗುಂಡು ಹಾರಿಸಿದರು ಎಂದು ಕರಾಳ ಘಟನೆಯನ್ನು ತೆರೆದಿಟ್ಟಿದ್ದಾರೆ. ಹೇಗೋ ಜೀವ ಉಳಿಸಿಕೊಂಡು ಬಂದಿರುವವರೂ ಅದನ್ನೇ ಸಾರಿ ಸಾರಿ ಹೇಳಿದ್ದಾರೆ. 

ಆದರೆ, ಇಲ್ಲೊಬ್ಬ ಯುವತಿಯ ವಿಡಿಯೋ ವೈರಲ್​ ಆಗುತ್ತಿದೆ. ಆಕೆಯ ಪ್ರಕಾರ, ಭಾರತದಲ್ಲಿ ಸುಳ್ಳು ಸುದ್ದಿ ಹರಡಿಸಲಾಗುತ್ತಿದೆಯಂತೆ. ನಾನು ಕೂಡ ಆ ಸಂದರ್ಭದಲ್ಲಿ ಕಾಶ್ಮೀರದಲ್ಲಿಯೇ ಇದ್ದೆ. ವಿನಾ ಕಾರಣ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಉಗ್ರರು ಸಾಯಿಸುವ ಮುನ್ನ ನೀನು ಹಿಂದೂನೋ, ಮುಸ್ಲಿಮೋ ಎಂದು ಕೇಳಿಯೇ ಇಲ್ಲ. ಎಲ್ಲವೂ ಸುಳ್ಳು ಸುದ್ದಿ. ಇಲ್ಲಿರುವ ಮುಸ್ಲಿಮರು ಎಲ್ಲರಿಗೂ ಸಹಾಯ ಮಾಡಿದ್ದಾರೆ. ವಿನಾ ಕಾರಣ ಸುಳ್ಳು ಸುದ್ದಿ ಹರಡಲಾಗುತ್ತಿದೆ. ನನ್ನ ಡ್ರೈವರ್​ ಕೂಡ ಮುಸ್ಲಿಂ. ನನ್ನ ಜೀವವನ್ನಾದರೂ ಬೇಕಾದರೆ ಕೊಡುತ್ತೇನೆ, ಹಿಂದೂಗಳಿಗೆ ಏನೂ ಮಾಡಲು ಬಿಡುವುದಿಲ್ಲ ಎಂದರು. ಅಷ್ಟು ಒಳ್ಳೆಯವರು ಮುಸ್ಲಿಂ ಸಮುದಾಯವರು. ಆದರೆ ಹಿಂದೂ-ಮುಸ್ಲಿಂ ಎಂದು ಕೇಳುವ ಮೂಲಕ ಉಗ್ರರು ಸಾಯಿಸಿದ್ದಾರೆ ಎನ್ನುವ ಅಪಪ್ರಚಾರ ಮಾಡಲಾಗುತ್ತಿದೆ ಎಂದಿದ್ದಾಳೆ ಈಕೆ. ಇಲ್ಲಿ ಧರ್ಮ- ಧರ್ಮದ ನಡುವೆ ಏನೂ ಇಲ್ಲ. ಇಲ್ಲಿ ಇರುವುದು ಮಾನವೀಯತೆಯೇ ಎಂದು ಹೇಳಿದ್ದಾಳೆ. 

Pahalgam Terror Attack: ಕಾಶ್ಮೀರದಲ್ಲಿ ಉಗ್ರರ ಕೃತ್ಯದ ಮುನ್ನ ಪ್ರವಾಸಿಗನೊಬ್ಬ ಮಾಡಿರುವ ವಿಡಿಯೋ ವೈರಲ್​

ಈಕೆಯ ವಿಡಿಯೋ ವೈರಲ್​ ಆಗುತ್ತಲೇ, ಯಾರೀಕೆ ಎಂದು ಜಾಲತಾಣದಲ್ಲಿ ಸಂಶೋಧನೆ ಆರಂಭವಾಗಿದ್ದೇ ತಡ. ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿಯ ಜೊತೆ ಈಕೆ ಕಾಣಿಸಿಕೊಂಡಿದ್ದಾಳೆ. ಇನ್ನೇನು ಬೇಕು? ಇಷ್ಟಾಗುತ್ತಿದ್ದಂತೆಯೇ ರಾಹುಲ್​ ಗಾಂಧಿ ಹಾಗೂ ಮುಸ್ಲಿಂ ಸಮುದಾಯದವರ ಮುಂದೆ ನಿಂತು ಈಕೆ ಮಾಡುತ್ತಿರುವ ಉಪದೇಶದ ಮಾತುಗಳು ವೈರಲ್​ ಆಗುತ್ತಿವೆ. ನಾನೂ ಕೂಡ ಅಲ್ಲಿಯೇ ಇದ್ದೆ, ಏನೂ ಆಗಲಿಲ್ಲ ಎಂದಿರುವ ಈಕೆಯ ವಿರುದ್ಧ ಸೋಷಿಯಲ್​ ಮೀಡಿಯಾದಲ್ಲಿ ಹಿಂದೂಗಳು ಕಿಡಿ ಕಾರುತ್ತಿದ್ದಾರೆ. ಇದಾಗಲೇ ಮಿತ್ರರ ರೂಪದಲ್ಲಿ ಇರುವ ಶತ್ರುಗಳನ್ನೂ ಸದೆಬಡಿಯಬೇಕು ಎಂಬ ಕೂಗು ಜೋರಾಗುತ್ತಿರುವ ಹೊತ್ತಿನಲ್ಲಿಯೇ ಈಕೆಯ ಮಾತುಗಳು ನಿಜವಾದ ಹಿಂದೂಗಳನ್ನು ಇನ್ನಷ್ಟು ರೊಚ್ಚಿಗೆ ಎಬ್ಬಿಸಿದೆ. ಇದು ಟೂಲ್​ಕಿಟ್​ನವರೇ ಮಾಡಿಸಿದ್ದು ಎನ್ನುವುದು ಸಾಬೀತಾಗಿದೆ ಎನ್ನುತ್ತಿದ್ದಾರೆ. 

ಹಾಗೆಂದು ಎಲ್ಲರೂ ಏನೂ ಈಕೆಯ ವಿರುದ್ಧವಾಗಿ ನಿಂತಿಲ್ಲ. ಅಲ್ಲಿರುವ ಉಗ್ರರು ಹಿಂದೂಗಳ ಮೇಲೆ ಟಾರ್ಗೆಟ್​  ಮಾಡುತ್ತಿದ್ದಾರೆ ಎಂದು ಬಿಜೆಪಿಯವರು ಬಿಂಬಿಸುತ್ತಿದ್ದು, ಅವರಿಗೆ ಈ ಯುವತಿ ಸರಿಯಾದ ಮುಖಭಂಗ ಮಾಡಿದ್ದಾಳೆ ಎಂದೇ ಹೇಳುತ್ತಿದ್ದಾರೆ. ಯಾವಾಗ ಈಕೆಯ ಫೋಟೋ ವಿಪಕ್ಷ ನಾಯಕ ರಾಹುಲ್​ ಗಾಂಧಿಯ ಜೊತೆ ಕಾಣಿಸಿಕೊಂಡಿತೋ ಇದೀಗ ಕಾಂಗ್ರೆಸ್ಸಿಗರು ಈಕೆಯ ಸಹಾಯಕ್ಕೆ ನಿಂತಿದ್ದಾರೆ. ಇದಾಗಲೇ ಉಗ್ರರು ಮಹಿಳೆಯರು ಮತ್ತು ಮಕ್ಕಳಿಗೆ ಏನೂ ಮಾಡದ ಬಗ್ಗೆ ಅವರ ಪರ ವಹಿಸಿಕೊಂಡು ಒಂದಿಷ್ಟು ಮಂದಿ ಬರಹ ಬರೆದಿರುವ ಬೆನ್ನಲ್ಲೇ ಈಗ ಅಲ್ಲಿ ಆಗಿದ್ದೇ ಸುಳ್ಳು ಎನ್ನುವುದಾಗಿ ಹೇಳುತ್ತಿರುವ ಈಕೆಯ ಮಾತುಗಳು ನಿಜವಾದ ಹಿಂದೂಗಳನ್ನು ದಂಗಾಗಿಸಿದೆ. ಹಾಗಿದ್ರೆ, ಕಣ್ಣೆದುರೇ ಪತಿಯ ಕೊಲೆ  ಮಾಡಿದ್ದನ್ನು ನೋಡಿ ಇನ್ನೂ ಆ ಭಯದಿಂದ ಹೊರಕ್ಕೆ ಬರಲಾಗದೇ ನರಳಾಡುತ್ತಿರುವ ಹಿಂದೂ ಪತ್ನಿಯರು ಹೇಳ್ತಿರೋದೇ ಸುಳ್ಳಾ? ಉಗ್ರರಿಂದ ಬಚಾವಾಗಿ ಬಂದು ಅಲ್ಲಿ ನಡೆದ ಘಟನೆಯನ್ನು ವಿವರಿಸಿವರು ಹೇಳ್ತಿರೋದೇ ಸುಳ್ಳಾ? ಅಥ್ವಾ ಈ ಯುವತಿ..? 

ಪಾಕ್​ಗೆ ಡಿಜಿಟಲ್​ ಮರ್ಮಾಘಾತ ಕೊಟ್ಟ ಭಾರತ: ​ ಇದು ಟ್ರೈಲರ್ ಅಷ್ಟೇ... ಪಿಚ್ಚರ್​ ಇನ್ನೂ ಬಾಕಿ ಇದೆ...

YouTube video player