Asianet Suvarna News Asianet Suvarna News

ಮಾಜಿ IAS ಅಧಿಕಾರಿ ಆನಂದ್ ಬೋಸ್ ಪಶ್ಚಿಮ ಬಂಗಾಳದ ನೂತನ ರಾಜ್ಯಪಾಲ!

ಜಗದೀಪ್ ಧನ್ಕರ್ ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಬಳಿಕ ತೆರವಾದ ಪಶ್ಚಿಮ ಬಂಗಳಾ ರಾಜ್ಯಪಾಲ ಸ್ಥಾನಕ್ಕೆ ಇದೀಗ ಮಾಜಿ ಅಧಿಕಾರಿ ಆನಂದ್ ಬೊಸ್ ನೇಮಕಗೊಂಡಿದ್ದಾರೆ.
 

Former IAS officer Dr CV Ananda Bose appointed as new governor of West Bengal says Rashtrapati Bhavan ckm
Author
First Published Nov 17, 2022, 9:47 PM IST

ನವದೆಹಲಿ(ನ.17): ಪಶ್ಚಿಮ ಬಂಗಳಾದ ನೂತನ ರಾಜ್ಯಪಾಲರಾಗಿ ನಾಗರೀಕ ಸೇವಾ ಮಾಜಿ ಅಧಿಕಾರಿ ಸಿವಿ ಆನಂದ್ ಬೋಸ್ ನೇಮಕಗೊಂಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಬಂಗಾಳ ರಾಜ್ಯಪಾಲ ನೇಮಕಕ್ಕೆ ಅಂಕಿತ ಹಾಕಿದ್ದಾರೆ.  ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಡಾ. ಸಿವಿ ಆನಂದ್ ಬೋಸ್ ಅವರನ್ನು ನೇಮಕ ಮಾಡಲು ಸಂತಸವಾಗುತ್ತಿದೆ. ಬೋಸ್ ಕಚೇರಿ ಪ್ರಭಾರ ವಹಿಸಿಕೊಂಡ ದಿನದಿಂದ ನೇಮಕ ಜಾರಿಗೆ ಬರಲಿದೆ ಎಂದು ರಾಷ್ಟ್ರಪತಿ ಕಾರ್ಯದರ್ಸಿ ಅಜಯ್ ಕುಮಾರ್ ಸಿಂಗ್ ಹೇಳಿದ್ದಾರೆ.  ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ಜಗದೀಪ್ ದನ್ಕರ್ ಉಪರಾಷ್ಟ್ರಪತಿಗಳಾಗಿ ಆಯ್ಕೆಯಾಗಿದ್ದಾರೆ. ಉಪರಾಷ್ಟ್ರ ಚುನಾವಣೆಗೆ ಸ್ಪರ್ಧಿಸಿದ್ದ ಧನ್ಕರ್, ಬಂಗಾಳ ರಾಜ್ಯಪಾಲರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಈ ಸ್ಥಾನಕ್ಕೆ ಆನಂದ್ ಬೋಸ್ ನೇಮಕಗೊಂಡಿದ್ದಾರೆ.

ಜಗದೀಪ್ ದನ್ಕರ್ ರಾಜೀನಾಮೆ ಬಳಿಕ ಮಣಿಪುರದ ರಾಜ್ಯಪಾಲ ಲಾ ಗಣೇಶನ್‌ಗೆ ಹೆಚ್ಚುವರಿಯಾಗಿ ಪಶ್ಚಿಮ ಬಂಗಾಳದ ರಾಜ್ಯಪಾಲರ ಆಡಳಿತ ಉಸ್ತುವಾರಿ ನೀಡಲಾಗಿತ್ತು. ಇದೀಗ ಆನಂದ್ ಬೋಸ್ ಪಶ್ಚಿಮ ಬಂಗಾಳದ ರಾಜ್ಯಪಾಲ ಹುದ್ದೆ ಅಲಂಕರಿಸಲಿದ್ದಾರೆ.

ಗವರ್ನರ್ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ್ದ ಆಪ್ ಸರ್ಕಾರಕ್ಕೆ ಮುಖಭಂಗ, ಕೇಜ್ರಿವಾಲ್‌ಗೆ ಮಂಗಳಾರತಿ!

ಭಾರತದ ಆಡಳಿತ ಸೇವೆಯಲ್ಲಿ ಸೇವೆ ಸಲ್ಲಿಸಿರುವ ಆನಂದ್ ಬೋಸ್. ಭಾರತ ಸರ್ಕಾರದ ಕಾರ್ಯದರ್ಶಿ, ಮುಖ್ಯ ಕಾರ್ಯದರ್ಶಿಯಾಗಿದ್ದರು. ವಿಶ್ವವಿದ್ಯಾಲದ ಉಪಕುಲಪತಿಯಾಗಿ ಸೇವೆ ಸಲ್ಲಿಸಿದ್ದಾರೆ. ವಿಶ್ವಸಂಸ್ಥೆಯ ಹ್ಯಾಬಿಟ್ಯಾಟ್ ಅಲೈಯನ್ಸ್ ಅಧ್ಯಕ್ಷರಾಗಿರುವ ಆನಂದ್ ಬೋಸ್, ವಿಶ್ವಸಂಸ್ಥೆಯ ಆವಾಸಸ್ಥಾನ ಆಡಳಿತಮಂಡಳಿಯ ಸದಸ್ಯರಾಗಿದ್ದಾರೆ.  

14ನೇ ಉಪರಾಷ್ಟ್ರಪತಿ ಧನಕರ್‌ 
 ಜಗದೀಪ್‌ ಧನಕರ್‌ ದೇಶದ 14ನೇ ಉಪರಾಷ್ಟ್ರಪತಿಯಾಗಿದ್ದಾರೆ .ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ಧನಕರ್‌ ವಿಪಕ್ಷಗಳ ಅಭ್ಯರ್ಥಿ ಮಾರ್ಗರೇಟ್‌ ಆಳ್ವ ವಿರುದ್ಧ ದಾಖಲೆಯ 528 ಮತಗಳಿಸಿ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರು.ಜಗದೀಪ್‌ ಧನಕರ್‌ರ ಮೂಲ ರಾಜಸ್ಥಾನ. ವೃತ್ತಿಯಲ್ಲಿ ವಕೀಲ. ರಾಜಸ್ಥಾನ ಹೈಕೋರ್ಚ್‌ ಮತ್ತು ಸುಪ್ರೀಂಕೋರ್ಚ್‌ನಲ್ಲಿ ವಕೀಲಿಕೆ ನಡೆಸಿದ ಅನುಭವ ಹೊಂದಿದ್ದಾರೆ. 1989ರಲ್ಲಿ ಮೊದಲ ಬಾರಿ ರಾಜಸ್ಥಾನದ ಝುನುಝುನು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿ 1990ರಲ್ಲಿ ಕೇಂದ್ರ ಸಚಿವರಾಗಿದ್ದರು. 1993-98ರ ಅವಧಿಗೆ ರಾಜಸ್ಥಾನ ವಿಧಾನಸಭೆಯ ಶಾಸಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಆರಂಭದಲ್ಲಿ ದೇವಿಲಾಲ್‌ ಜೊತೆಗೆ ಗುರುತಿಸಿಕೊಂಡು, ನರಸಿಂಹರಾವ್‌ ಪ್ರಧಾನಿಯಾದಾಗ ಕಾಂಗ್ರೆಸ್‌ಗೆ ಹಾರಿ, ರಾಜಸ್ಥಾನದಲ್ಲಿ ಅಶೋಕ್‌ ಗೆಹ್ಲೋಟ್‌ ಮುಂಚೂಣಿಗೆ ಬರುತ್ತಲೇ ಬಿಜೆಪಿ ಪಾಳಯಕ್ಕೆ ಹಾರಿದ ಹಿನ್ನೆಲೆ ಜಗದೀಪ್‌ ಅವರಿಗಿದೆ. 

ಸಮಾಜವಾದಿ ಹಿನ್ನೆಲೆ ಹೊಂದಿದ, ರಾಜಸ್ಥಾನದ ಪ್ರಬಲ ಜಾಟ್‌ ಸಮುದಾಯದ ರೈತ ಕುಟುಂಬದಿಂದ ಬಂದ ಧನಕರ್‌ ಅವರನ್ನು ಬಿಜೆಪಿ ಸರ್ಕಾರ 2019ರಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನೇಮಿಸಿತು. ಆದರೆ ಆರಂಭದಿಂದಲೂ ಬಂಗಾಳ ಸಿಎಂ ಮಮತಾ ಮತ್ತು ಧನಕರ್‌ ನಡುವೆ ಹೊಂದಾಣಿಕೆ ಮೂಡಲೇ ಇಲ್ಲ. ಧನಕರ್‌ ಅವರನ್ನು ಬಿಜೆಪಿ ಏಜೆಂಟ್‌ ಎಂದು ಮಮತಾ ಟೀಕಿಸುತ್ತಲೇ ಬಂದರು. ಆದರೆ ತಮ್ಮ ನಿರ್ಧಾರಗಳನ್ನು ಸಂವಿಧಾನ್ಮಕ ಎಂದು ಜಗದೀಪ್‌ ಬಣ್ಣಿಸಿಕೊಂಡೇ ಬಂದಿದ್ದರು.

Follow Us:
Download App:
  • android
  • ios