Asianet Suvarna News Asianet Suvarna News

Kushinagar Tragedy: ಐವರು ಮಕ್ಕಳನ್ನು ಕಾಪಾಡಿ, ಜೀವನ ಸಮರ ಸೋತ ಪೂಜಾ ಯಾದವ್!

* ಉತ್ತರ ಪ್ರದೇಶದ ಕುಶಿನಗರದಲ್ಲಿ ಫೋರ ದುರಂತ

* ಬಾವಿಗೆ ಬಿದ್ದ ಹದಿಮೂರು ಮಂದಿ ಹೆಣ್ಮಕ್ಕಳು ಸಾವು

* ಬಾವಿಗೆ ಬಿದ್ದವರನ್ನು ಪ್ರಾಣ ಪಣಕ್ಕಿಟ್ಟು ಕಾಪಾಡಿದ ಪೂಜಾ ಯಾದವ್

Kushinagar Tragedy Pooja Yadav 21 year old girl lost life while saving 5 lives pod
Author
Bangalore, First Published Feb 17, 2022, 3:17 PM IST | Last Updated Feb 17, 2022, 3:27 PM IST

ಲಕ್ನೋ(ಫೆ.17): ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ತನ್ನ ಜೀವದ ಜೊತೆ ಆಟವಾಡಿ ಐವರ ಪ್ರಾಣ ಉಳಿಸಿದ ಯುವತಿ ಪೂಜಾ ಯಾದವ್ ತನ್ನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕುಶಿನಗರ ಅಪಘಾತದಲ್ಲಿ ಮೃತಪಟ್ಟ 13 ಮಂದಿಯಲ್ಲಿ 21 ವರ್ಷದ ಪೂಜಾ ಯಾದವ್ ಕೂಡ ಸೇರಿದ್ದಾರೆ. ಧೈರ್ಯಶಾಲಿ ಮಗಳು ಇನ್ನಿಲ್ಲ, ಆದರೆ ರಾತ್ರಿಯ ನೋವಿನ ಅಪಘಾತದ ಸಮಯದಲ್ಲಿ ಅವಳು ತೋರಿದ ಧೈರ್ಯವು ಎಲ್ಲೆಡೆ ಸದ್ದು ಮಾಡುತ್ತಿದೆ. ಅವಳು ಸೇನಾ ನೇಮಕಾತಿಗೆ ತಯಾರಿ ನಡೆಸುತ್ತಿದ್ದಳು. ತನ್ನ ಆಯ್ಕೆಯ ಮೊದಲು ಅವಳು ಜೀವನದ ಯುದ್ಧವನ್ನು ಸೋತಿದ್ದಾಳೆ. ಅವರು ತೋರಿದ ಶೌರ್ಯ ಎರಡು ಮಕ್ಕಳು ಸೇರಿದಂತೆ ಐವರ ಪ್ರಾಣ ಉಳಿಸಿದೆ. ಪೂಜಾ ಯಾದವ್ ತಂದೆ ಬಲವಂತ ಯಾದವ್ ಸೇನೆಯಲ್ಲಿದ್ದಾರೆ. ಮಗಳ ಮದುವೆಯ ಬಗ್ಗೆ ಸದಾ ಚಿಂತಿಸುತ್ತಿದ್ದರು. ಇಲ್ಲಿ ಪೂಜಾ ಸೇನೆಗೆ ಆಯ್ಕೆಯಾಗಲಿಲ್ಲ, ಮದುವೆಯಾಗಲೂ ಆಗಲಿಲ್ಲ. ಇದೀಗ ತಂದೆ ಮೃತದೇಹದ ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಕೆಯ ಧೈರ್ಯ, ಸಾಹಸಕ್ಕೆ ಒಂದೆಡೆ ಗ್ರಾಮವೇ ಹೆಮ್ಮೆ ಪಡುತ್ತಿದ್ದರೆ, ಆಕೆ ಇನ್ನಿಲ್ಲ ಎಂದು ಅದೇ ಗ್ರಾಮ ಕಂಬನಿ ಮಿಡಿಯುತ್ತಿದೆ.    

ಎಲ್ಲರೂ ಈ ಧೈರ್ಯಶಾಲಿ ಯುವತಿ ಪೂಜಾ ಬಗ್ಗೆ ಮಾತನಾಡುತ್ತಿದ್ದಾರೆ. ಅಪಘಾತ ಸಂಭವಿಸಿದಾಗ ಕತ್ತಲಾಗಿತ್ತು. ಪೂಜಾ ಜೊತೆ ನೀರಿನಲ್ಲಿ ಮುಳುಗಿದವರಲ್ಲಿ ಆಕೆಯ ತಾಯಿಯೂ ಸೇರಿದ್ದರು. ಅಕೆ ಮೊದಲು ತನ್ನ ತಾಯಿಯನ್ನು ಉಳಿಸಿದಳು ಇದಾದ ಬಳಿಕ, 5 ಮಂದಿಯನ್ನು ಒಬ್ಬೊಬ್ಬರಾಗಿ ರಕ್ಷಿಸಿದ್ದಾಳೆ. ಆರನೇ ವ್ಯಕ್ತಿಯನ್ನು ರಕ್ಷಿಸುವ ಸಂದರ್ಭದಲ್ಲಿ ಆಕೆ ಸ್ವತಃ ಮುಳುಗಿದ್ದಾಳೆ.

Kushinagar Tragedy; ಮದುವೆಗೆ ಹೋದವರು ಮಸಣ ಸೇರಿದ್ರು, ಬಾವಿಗೆ ಬಿದ್ದು 13 ಹೆಣ್ಮಕ್ಕಳು ಸಾವು, ಮೋದಿ ಸಂತಾಪ!

ಪೂಜಾ ಬಳಿ ತನ್ನನ್ನು ಕಾಪಾಡುವಂತೆ ಎಲ್ಲರೂ ಕೇಳಿಕೊಳ್ಳುತ್ತಿದ್ದರು

ಅಪಘಾತದ ವೇಳೆ ಪೂಜಾ ತಾನು ಎಲ್ಲರನ್ನೂ ಕಾಪಾಡುತ್ತೇನೆ ಎನ್ನುವಂತೆ ಸಾಹಸ ಪ್ರದರ್ಶಿಸಿದದಳು ಎಂದಿದ್ದಾರೆ. ಆಕೆಯ ಉತ್ಸಾಹವನ್ನು ಕಂಡು ಜನರು ಅಳುತ್ತಾ ತಮ್ಮನ್ನು ಕಾಪಾಡುವಂತೆ ಪೂಜಾ ಬಳಿ ಗೋಗರೆಯುತ್ತಿದ್ದರು. ಎಲ್ಲರೂ ಪೂಜಾ ಬಳಿಯೇ ಸಹಾಯ ಮಾಡುವಂತೆ ಮನವಿ ಮಾಡುತ್ತಿದ್ದರು. ಹೀಗಿರುವಾಗಲೇ ಆಕೆ 5 ಜನರನ್ನು ಉಳಿಸಿದ್ದು, ಜನರಿಗೆ ಆಕೆಯ ಮೇಲೆ ಮತ್ತಷ್ಟು ಭರವಸೆ ಹುಟ್ಟುವಂತೆ ಮಾಡಿತ್ತು. ಆದರೆ ಪೂಜಾ ಆರನೇ ಜೀವ ಉಳಿಸುವಷ್ಟರಲ್ಲಿ ಸಮತೋಲನ ಕಳೆದುಕೊಂಡು ನೀರಿನೊಳಗೆ ಮುಳುಗಿದ್ದಾಳೆ.

ತನ್ನ ಜೀವ ಪಣಕ್ಕಿಟ್ಟು ಇತರರ ಜೀವ ಉಳಿಸುವ ಕಾರ್ಯ

ಶಿಥಿಲಗೊಂಡ ಬಾವಿಯ ನೀರು, 13 ಜನರಿಗೆ ಪಾಲಿಗೆ ಯಮನಂತೆ ಎರಗಿದೆ. ಕತ್ತಲ ರಾತ್ರಿ ಮತ್ತು ಆಳವಾದ ಬಾವಿಯಲ್ಲಿ ಬಿದ್ದ ಜನರ ಧ್ವನಿಯೂ ಗ್ರಾಮದ ಇತರ ಜನರಿಗೆ ತಲುಪಲಿಲ್ಲ. ಹೀಗಿರುವಾಗ ಪೂಜಾ ಜೊತೆಗೆ ಇತರ ಮಹಿಳೆಯರು ನಿರಂತರವಾಗಿ ಕೂಗಾಡತೊಡಗಿದರು. ಪೂಜಾಳ ಧ್ವನಿ ಕೇಳಿ ವಿಪಿನ್ ಅಲ್ಲಿಗೆ ಓಡಿದ. ಅವರ ಸಹಾಯದಿಂದ ಐದು ಜನರನ್ನು ರಕ್ಷಿಸಲಾಯಿತು. ಪ್ರತಿ ಬಾರಿಯೂ ಪೂಜಾ ತಾನು ಹೊರ ಬರುವ ಬದಲು ಮಹಿಳೆಯರು, ಮಕ್ಕಳನ್ನು ತನ್ನ ಕೈ ಹಿಡಿದುಕೊಳ್ಳುವಂತೆ ಹೇಳಿ ರಕ್ಷಿಸುತ್ತಿದ್ದಳು. .

ಪೂಜಾ ಬಿಎ ದ್ವಿತೀಯ ವರ್ಷದ ವಿದ್ಯಾರ್ಥಿನಿ

ಪೂಜಾ ತಹಸೀಲ್ದಾರ್ ಶಾಹಿ ಮಹಾವಿದ್ಯಾಲಯ ಸಿನ್ಹಾದಲ್ಲಿ ಬಿಎ ಎರಡನೇ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಇದರೊಂದಿಗೆ ಅವರಿಗೆ ಆದಿತ್ಯ ಮತ್ತು ಉತ್ಕರ್ಷ್ ಎಂಬ ಇಬ್ಬರು ಅವಳಿ ಸಹೋದರರಿದ್ದಾರೆ. ತಂದೆ ಬಲ್ವಂತ್ ಯಾದವ್ ದೆಹಲಿಯಲ್ಲಿ ನೇಮಕಗೊಂಡಿದ್ದರೆ, ಅವಳಿ ಸಹೋದರ ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದರು.

Latest Videos
Follow Us:
Download App:
  • android
  • ios