ಅಳಿದಿರುವ ಚೀತಾ ಸಂತತಿಯನ್ನು ಭಾರತದಲ್ಲಿ ಅಭಿವೃದ್ಧಿಪಡಿಸಲು ಆಫ್ರಿಕಾದಿಂದ ತಂದಿರುವ ಚೀತಾಗಳ ಪೈಕಿ ಇದೀಗ ನಿರ್ವಾ ಚೀತಾ 5 ಮರಿಗಳಿಗೆ ಜನ್ಮ ನೀಡಿದೆ. ಕುನೋ ರಾಷ್ಟ್ರೀಯ ಅರಣ್ಯದಲ್ಲಿರುವ 5 ಮರಿಗಳ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ.
ಇಂದೋರ್(ಏ.28) ಕುನೋ ರಾಷ್ಟ್ರೀಯ ಅರಣ್ಯದಲ್ಲಿ ಚೀತಾ ಸಂತತಿಗಳನ್ನು ಬೆಳೆಸಲಾಗುತ್ತಿದೆ. ಇದಕ್ಕಾಗಿ ಅತೀ ದೊಡ್ಡ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಆಫ್ರಿಕಾದಿಂದ ಚೀತಾಗಳನ್ನು ತರಿಸಿಕೊಂಡು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಅರಣ್ಯದಲ್ಲಿ ಬಿಡಲಾಗಿದೆ. ಭಾರತದಲ್ಲಿ ಚೀತಾ ಸಂತತಿ ಬೆಳೆಸುವ ನಿಟ್ಟನಲ್ಲಿ ಕೈಗೊಂಡಿರುವ ಯೋಜನೆ ಆರಂಭಿಕ ಹಂತದಲ್ಲಿ ಅತ್ಯಂತ ಸವಾಲು ಎದುರಿಸಿತ್ತು. ಆಫ್ರಿಕಾ ವಾತಾವರಣದಿಂದ ಭಾರತಕ್ಕೆ ಹೊಂದಿಕೊಳ್ಳಲು ಚೀತಾಗಳು ಹರಸಾಹಸ ಪಟ್ಟಿತ್ತು. ಇದೀಗ ನಿಧಾನವಾಗಿ ಚೇತರಿಸಿಕೊಂಡಿದೆ. ಇಷ್ಟೇ ಅಲ್ಲ ಸಂತತಿ ಕೂಡ ಹೆಚ್ಚಾಗುತ್ತಿದೆ. ಕುನೋ ಅರಣ್ಯದಲ್ಲಿರುವ ನಿರ್ವಾ ಹೆಣ್ಣು ಚೀತಾ ಇದೀಗ 5 ಮರಿಗಳಿಗೆ ಜನ್ಮ ನೀಡಿದೆ. ಈ ಮರಿಗಳ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. 5 ಮರಿಗಳ ಸೇರ್ಪಡೆಯಿಂದ ಭಾರತದಲ್ಲಿ ಚೀತಾಗಳ ಒಟ್ಟು ಸಂಖ್ಯೆ 31ಕ್ಕೆ ಏರಿಕೆಯಾಗಿದೆ.
ಭಾರತದಲ್ಲಿ 31, ಕುನೋ ಅರಣ್ಯದಲ್ಲಿ 29 ಚೀತಾ
ಭಾರತದಲ್ಲಿ ಕುನೋ ರಾಷ್ಟ್ರೀಯ ಅರಣ್ಯದಲ್ಲಿ ಒಟ್ಟು ಚೀತಾಗಳ ಸಂಖ್ಯೆ ಇದೀಗ 31. ಕುನೋ ರಾಷ್ಟ್ರೀಯ ಅರಣ್ಯದಲ್ಲಿ ಒಟ್ಟು ಚೀತಾಗಳ ಸಂಖ್ಯೆ 29. ಇದರಲ್ಲಿ 19 ಮರಿಗಳು ಸೇರಿವೆ. ಇನ್ನೆರಡು ಪಾವಕ್ ಹಾಗೂ ಪ್ರಭಾಷ್ ಗಂಡು ಚೀತಾಗಳನ್ನು ಮಧ್ಯ ಪ್ರದೇಶದ ಗಾಂಧಿ ಸಾಗರ್ ಅಭಯಾರಣ್ಯಕ್ಕೆ ವರ್ಗಾಯಿಸಲಾಗಿದೆ.
ಗ್ರಾಮಕ್ಕೆ ಬಂದು ಬಿಸಿಲಿನಿಂದ ಬಳಲಿದ ಕುನೋ ಚೀತಾಗೆ ನೀರು ಕುಡಿಸಿದ ಗ್ರಾಮಸ್ಥರು, ವಿಡಿಯೋ
ಚೀತಾ ವಿಡಿಯೋ ಹಂಚಿಕೊಂಡ ಮುಖ್ಯಮಂತ್ರಿ
ಮಧ್ಯಪ್ರದೇಶ ಮುಖ್ಯಮಂತ್ರಿ ಡಾ.ಮೋಹನ್ ಯಾದವ್ ಹಾಗೂ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ 5 ಚೀತಾ ಮರಿಗಳ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕುರಿತು ಸಂತಸ ಹಂಚಿಕೊಂಡಿರುವ ಮೋಹನ್ ಯಾದವ್ ಭಾರತದಲ್ಲಿ ನಿಧಾನವಾಗಿ ಚೀತಾ ಸಂತತಿ ಹೆಚ್ಚಾಗುತ್ತಿದೆ. ಇದು ಜೀವವೈವಿಧ್ಯತೆಯನ್ನು ಎತ್ತಿಹಿಡಿದೆ. ಪ್ರಧಾನಿ ನರೇಂದ್ರ ಮೋದಿಯ ಮಹತ್ವಾಕಾಂಕ್ಷಿ ಯೋಜನೆ ಭಾರತದ ಪರಿಸರ, ನೈಸರ್ಗಿಂಕ ಸಂರಕ್ಷಣೆಯಲ್ಲಿ ಮೈಲಿಗಲ್ಲಾಗಿದೆ ಎಂದು ಮೋಹನ ಯಾದವ್ ಟ್ವೀಟ್ ಮಾಡಿದ್ದಾರೆ.
ಎಪ್ರಿಲ್ 25ರಂದು ನಿರ್ವಾ ಚೀತಾ 5 ಮರಿಗಳಿಗೆ ಜನ್ಮ ನೀಡಿತ್ತು. ಏಪ್ರಿಲ್ 27ಕ್ಕೆ ಕುನೋ ಅರಣ್ಯದಲ್ಲಿರುವ ವೈದ್ಯರ ತಂಡ ವಿಡಿಯೋ ಮೂಲಕ 5 ಮರಿಗಳ ಪತ್ತೆ ಹಚ್ಚಿದೆ. ಸದ್ಯ ಎಲ್ಲಾ ಮರಿಗಳು ಆರೋಗ್ಯವಾಗಿದೆ ಎಂದು ವೈದ್ಯರ ತಂಡ ಹೇಳಿದೆ. ಕಾರಣ ಕಳೆದ ವರ್ಷ ಇದೇ ನಿರ್ವಾ ಚೀತಾ 2 ಮರಿಗಳಿಗೆ ಜನ್ಮ ನೀಡಿತ್ತು. ಆದರೆ ಈ ಮರಿಗಳು ಮೃತಪಟ್ಟಿತ್ತು.
2023ರಲ್ಲಿ ಭಾರತಕ್ಕೆ ಬಂದ ನಿರ್ವಾ ಚೀತಾ
ನಿರ್ವಾ ಹೆಣ್ಣ ಚೀತಾವನ್ನು 2023ರಲ್ಲಿ ಸೌತ್ ಆಫ್ರಿಕಾದಿಂದ ಭಾರತಕ್ಕೆ ತರಲಾಗಿದೆ. ಐದೂವರೆ ವರ್ಷದ ಈ ಹೆಣ್ಣು ಚೀತಾವನ್ನು ಕುನೋ ರಾಷ್ಟ್ರೀಯ ಅರಣ್ಯದಲ್ಲಿ ಬಿಡಲಾಗಿತ್ತು. ಇದೇ ಅರಣ್ಯಜಲ್ಲಿ 2022ರಲ್ಲಿ ಮೊದಲ ಬಾರಿಗೆ ತರಲಾಗಿದ್ದ ಎರಡು ಗಂಡು ಚೀತಾಗಳು ಕೂಡ ಇತ್ತು. ಸದ್ಯ ಇವುಗಳನ್ನು ಸ್ಥಳಾಂತರಿಸಲಾಗಿದೆ.
2022ರಲ್ಲಿ ಚೀತಾ ಪ್ರಾಜೆಕ್ಟ್ ಆರಂಭ
ಭಾರತದ ಮೊದಲ ಬಾರಿಗೆ ಚೀತಾ ಪ್ರಾಜೆಕ್ಟ್ ಆರಂಭಿಸಿದ್ದು 2022ರಲ್ಲಿ. ಮೊದಲ ಹಂತದಲ್ಲಿ ಭಾರತ ನಮೀಬಿಯಾದಿಂದ 8 ಚೀತಾಗಳನ್ನು ಭಾರತಕ್ಕೆ ಕರೆತಂದಿತ್ತು. ಈ ಪೈಕಿ 5 ಹಣ್ಣು ಚೀತಾ ಹಾಗೂ ಮೂರು ಗಂಡು ಚೀತಾಗಳಾಗಿತ್ತು.
ಕುನೋ ಅರಣ್ಯದಲ್ಲಿ 5 ಮರಿಗಳೊಂದಿಗೆ ಆಫ್ರಿಕಾ ಚೀತಾ ಆಟ,ಹೃದಯಸ್ವರ್ಶಿ ವಿಡಿಯೋ!
