ದೆಹಲಿ(ಎ.17): ಕೊರೋನವೈರಸ್ ಹೆಚ್ಚುತ್ತಿರೋ ಮಧ್ಯೆ ಕುಂಭಮೇಳವು ಸಾಂಕೇತಿಕವಾಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದು ಕೊರೋನಾ ವಿರುದ್ಧದ ಹೋರಾಟಕ್ಕೆ ಶಕ್ತಿ ನೀಡುತ್ತದೆ ಎಂದು ಹೇಳಿದ್ದಾರೆ.

ಗಂಗಾ ತೀರದಲ್ಲಿ ಕಳೆದ ಕೆಲವು ದಿನಗಳಲ್ಲಿ ಹತ್ತಾರು ಯಾತ್ರಾರ್ಥಿಗಳ ಬೃಹತ್ ಸಂಗಮ ರಾಷ್ಟ್ರವ್ಯಾಪಿ ಕಳವಳವನ್ನು ಹುಟ್ಟುಹಾಕಿದೆ. ಏಕೆಂದರೆ ಕೊರೋನಾ ಎರಡನೇ ಅಲೆಗೆ  ತುತ್ತಾದ ಭಾರತದಲ್ಲಿ ಕೊರೋನಾ ಸೋಂಕು ಆತಂಕಕಾರಿಯಾಗಿ ಉಲ್ಬಣವಾಗಿದೆ. ಹಿಂದೂ ಧರ್ಮ ಆಚಾರ್ಯ ಸಭಾ ಅಧ್ಯಕ್ಷ ಸ್ವಾಮಿ ಅವಧೇಶಾನಂದ್ ಗಿರಿ ಜಿ ಮಹಾರಾಜ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾಗಿ ಟ್ವೀಟ್ ನಲ್ಲಿ ಮೋದಿ ತಿಳಿಸಿದ್ದಾರೆ.

ಕುಂಭಮೇಳದಲ್ಲಿ ಮುಮ್ತಾಜ್ ಎಂಬ ಮುಸ್ಲಿಂ ಮಹಾಯೋಗಿಯ ಭಗವದ್ಗೀತೆ ಪ್ರವಚನ

ಆರೋಗ್ಯ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕುಂಭಮೇಳವನ್ನು ಹಿಂತೆಗೆದುಕೊಳ್ಳಲು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿಯನ್ನು ತಿರಸ್ಕರಿಸಲಾಗಿದೆ. ಇಲ್ಲಿಯವರೆಗೆ ಯಾವುದೇ ಮಾತುಕತೆ ನಡೆದಿಲ್ಲ, ಮತ್ತು ಕುಂಭವು ಈಗಾಗಲೇ ನಿಗದಿಪಡಿಸಿರುವಂತೆ ನಡೆಯಲಿದೆ ಎನ್ನಲಾಗಿದ.

ಕುಂಭಮೇಳವು ಸಾಮಾನ್ಯವಾಗಿ ಜನವರಿಯಲ್ಲಿ ಪ್ರಾರಂಭವಾಗುತ್ತಿತ್ತು. ಆದರೆ ಕೋವಿಡ್ ಪರಿಸ್ಥಿತಿಯನ್ನು ಗಮನಿಸಿ ರಾಜ್ಯ ಸರ್ಕಾರ ಇದನ್ನು ಈ ಬಾರಿ ಏಪ್ರಿಲ್‌ನಲ್ಲಿ ಪ್ರಾರಂಭಿಸಲು ನಿರ್ಧರಿಸಿತು. ಪರಿಸ್ಥಿತಿಯ ಕಾರಣ, ಅವಧಿಯನ್ನು ಕಡಿಮೆಗೊಳಿಸಲಾಗುವುದು ಎಂದು ಕೇಂದ್ರದ ಎಸ್‌ಒಪಿ ತಿಳಿಸಿದೆ.

ಕುಂಭಮೇಳಕ್ಕೆ ಹೋದೋರು ಕರ್ನಾಟಕ ಎಂಟ್ರಿ ಆಗೋಕೆ ಕೊರೋನಾ ಟೆಸ್ಟ್ ಕಡ್ಡಾಯ

ಕುಂಭಮೇಳ ಆಚರಣೆ ಸಿನ ಕಡಿಮ ಮಾಡಿದ್ದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಹರಿದ್ವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಕುಂಭಮೇಳ ಅಧಿಕಾರಿ ದೀಪಕ್ ರಾವತ್ ಹೇಳಿದ್ದಾರೆ. ಭಾರತದಲ್ಲಿ ಕೊರೋನಾ ಪ್ರಕರಣ ಭಾರೀ ಏರಿಕೆ ಕಂಡಿದೆ. ಇದುವರೆಗಿನ ಅತಿದೊಡ್ಡ ದೈನಂದಿನ ಕೇಸ್‌ನಲ್ಲಿ 2,34,692 COVID-19 ಪ್ರಕರಣಗಳು ವರದಿಯಾಗಿವೆ.