Asianet Suvarna News Asianet Suvarna News

ಹೋರಿ ಬೆದರಿಸುವ ಸ್ಪರ್ಧೆಗೆ ನಿರಾಕರಣೆ : ಚೆನ್ನೈ ಬೆಂಗಳೂರು ಹೈವೇ ಬಂದ್ ಮಾಡಿ ಪ್ರತಿಭಟನೆ

ಹೋರಿ ಬೆದರಿಸುವ ಸ್ಪರ್ಧೆ ಅಥವಾ ಜಲ್ಲಿ ಕಟ್ಟು ಆಟಕ್ಕೆ ಜಿಲ್ಲಾಡಳಿತ ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ  ಆಕ್ರೋಶಗೊಂಡ ಗ್ರಾಮಸ್ಥರು  ಬೆಂಗಳೂರು ಚೆನ್ನೈ ಹೈವೇಯನ್ನು ಬಂದ್ ಮಾಡಿದ್ದಲ್ಲದೇ ಆ ದಾರಿಯಲ್ಲಿ ಸಾಗುತ್ತಿದ್ದ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ದಾಂಧಲೆ ನಡೆಸಿದ್ದಾರೆ.

Krishnagiri District administration Denied for Bull Competition, protester closed Chennai Bangalore Highway and stone pelting on vehicle akb
Author
First Published Feb 2, 2023, 3:16 PM IST

ಚೆನ್ನೈ:  ಹೋರಿ ಬೆದರಿಸುವ ಸ್ಪರ್ಧೆ ಅಥವಾ ಜಲ್ಲಿ ಕಟ್ಟು ಆಟಕ್ಕೆ ಜಿಲ್ಲಾಡಳಿತ ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ  ಆಕ್ರೋಶಗೊಂಡ ಗ್ರಾಮಸ್ಥರು  ಬೆಂಗಳೂರು ಚೆನ್ನೈ ಹೈವೇಯನ್ನು ಬಂದ್ ಮಾಡಿದ್ದಲ್ಲದೇ ಆ ದಾರಿಯಲ್ಲಿ ಸಾಗುತ್ತಿದ್ದ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ದಾಂಧಲೆ ನಡೆಸಿದ್ದಾರೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಇಂದು ಈ ಘಟನೆ ನಡೆದಿದೆ. 

ಹೋರಿ ಬೆದರಿಸುವ ಸ್ಪರ್ಧೆಗೆ ನಿರಾಕರಿಸಿದ್ದಕ್ಕೆ ಬೆಂಗಳೂರು-ಚೆನ್ನೈ ಹೆದ್ದಾರಿಯಲ್ಲಿ ಸೇರಿದ ಗ್ರಾಮದ ಜನ, ಅಲ್ಲಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಷ್ಟೇ ಅಲ್ಲದೇ ರಸ್ತೆ ಬಂದ್ ಮಾಡಿ ಆಕ್ರೋಶ  ಹೊರಹಾಕಿದ್ದಾರೆ. ಇರುತ್ ವಿಡುಂ ತಿರುವಿಳ ಎಂಬ ಹೆಸರಿನ ಹೋರಿಗಳ ಸ್ಪರ್ಧೆಗೆ  ನಿರಾಕರಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಈ ಕೃತ್ಯವೆಸಗಿದ್ದಾರೆ.  ಇಷ್ಟೇ ಅಲ್ಲದೇ ವಾಹನಗಳ ಮೇಲೆ ನಿಂತು  ಪ್ರತಿಭಟನೆ ನಡೆಸಿದ್ದಾರೆ.  

Shivamogga: ಹೋರಿ ಬೆದರಿಸುವ ಸ್ಪರ್ಧೆ: ಹೋರಿ ತಿವಿದು ಇಬ್ಬರ ಸಾವು

ಇದಕ್ಕೂ ಮೊದಲು ಕೃಷ್ಣಗಿರಿ ಜಿಲ್ಲೆಯ ಹೊಸೂರು ಸಮೀಪದ ಗೋಪಸಂದ್ರಂ (ಕೊಯ್ಲಿನ ಸಮಯದಲ್ಲಿ ಹೋರಿ ಬೆದರಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಆದರೆ ಕಾರ್ಯಕ್ರಮದ ದಿನ ಬಂದ ಸ್ಥಳಕ್ಕೆ ಬಂದ ಪೊಲೀಸರು ಗೂಳಿ ಪಳಗಿಸುವ ಕಾರ್ಯಕ್ರಮವನ್ನು ನಡೆಸದಂತೆ ಸಂಘಟಕರನ್ನು ತಡೆದರು. ಉತ್ಸವಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ಪೊಲೀಸರು ಆಯೋಜಕರಿಗೆ ತಿಳಿಸಿದರು. ಪೊಲೀಸರ ಹೇಳಿಕೆಯಿಂದ ರೊಚ್ಚಿಗೆದ್ದ ಸಾರ್ವಜನಿಕರು ಕೂಡಲೇ ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು. ಆ ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳ ಮೇಲೂ ಕಲ್ಲು ತೂರಾಟ ನಡೆಸಿದರು. ಗಲಾಟೆಯಲ್ಲಿ ನಾಲ್ಕು ಸರ್ಕಾರಿ ಬಸ್‌ಗಳು ಮತ್ತು ಪೊಲೀಸ್ ವಾಹನಗಳನ್ನು ಪ್ರತಿಭಟನಾಕಾರರು ಜಖಂಗೊಳಿಸಿದ್ದಾರೆ.

ಹೋರಿ ಬೆದರಿಸುವ ಸ್ಪರ್ಧೆ ವೇಳೆ ಅವಘಡ: ಯುವಕನನ್ನು ದರದರನೆ ಎಳೆದುಕೊಂಡು ಹೋದ ಹೋರಿಗಳು

ಪ್ರತಿಭಟನೆಯಿಂದ ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಗ್ರಾಮಸ್ಥರ ಮನವೊಲಿಕೆಗೆ  ಪೊಲೀಸರು  ಯತ್ನಿಸಿದ ನಂತರವೂ  ಅವರೊಂದಿಗೆ ಮಾತಿನ ಚಕಮಕಿ ನಡೆಸಿದ ನಂತರವೂ ಪ್ರತಿಭಟನಾಕಾರರು ಸ್ಥಳದಿಂದ ಹೊರಬರಲು ನಿರಾಕರಿಸಿದರು.  ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಲ್ಲದೇ ಹಾಗೂ ಜಲಫಿರಂಗಿ ಪ್ರಯೋಗ ಮಾಡಿದರು. ಗುಂಪನ್ನು ಚದುರಿಸಲು  ಅಶ್ರುವಾಯು ಪ್ರಯೋಗವನ್ನು ಮಾಡಿದರು . ನಂತರ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿ ಆ ಪ್ರದೇಶದಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. 
 

Follow Us:
Download App:
  • android
  • ios