ಕೋಲ್ಕತಾ ಆರ್‌ಜಿ ಕರ್ ಆಸ್ಪತ್ರೆ ನಿವೃತ್ತ ಪ್ರಿನ್ಸಿಪಾಲ್ ಅರೆಸ್ಟ್, ಸಿಎಂ ಮಮತಾಗೆ ಹೆಚ್ಚಾದ ಸಂಕಷ್ಟ!
ಕೋಲ್ಕತಾ ವೈದ್ಯೆ ಅತ್ಯಾಚಾರ ಹತ್ಯೆ ಪ್ರಕರಣ ತನಿಖೆ ತೀವ್ರಗೊಳಿಸಿರುವ ಸಿಬಿಐ ಇದೀಗ ನಿವೃತ್ತ ಪ್ರಾಂಶುಪಾಲ ಸಂದೀಪ್ ಘೋಷ್ ಅರೆಸ್ಟ್ ಮಾಡಿದೆ. ಸತತ ವಿಚಾರಣೆ ಬಳಿಕ ಸಂದೀಪ್ ಘೋಷ್ ಬಂಧಿಸಲಾಗಿದೆ. ಸಂದೀಪ್ ಬಂಧನ , ಮಮತಾ ಬ್ಯಾನರ್ಜಿ ಸರ್ಕಾರದ ಸಂಕಷ್ಟ ಹೆಚ್ಚಿಸಿದೆ.
ಕೋಲ್ಕತಾ(ಸೆ.02) ಕೋಲ್ಕತಾ ವೈದ್ಯೆ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿದೆ. ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಇತ್ತ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಸಿಬಿಐ ಇದೀಗ ಆಸ್ಪತ್ರೆ ನಿವೃತ್ತ ಪ್ರಿನ್ಸಿಪಾಲ್ ಸಂದೀಪ್ ಘೋಷ್ ಬಂಧಿಸಿದೆ. ಹಲವು ಸುತ್ತಿನ ವಿಚಾರಣೆ ಬಳಿಕ ಇದೀಗ ಸಂದೀಪ್ ಬಂಧನವಾಗಿದೆ. ಘಟನೆ ನಡೆದ 15 ದಿನ ಸಿಬಿಐ ಸಾಲ್ಟ್ ಲೇಕ್ ಕಚೇರಿಯಲ್ಲಿ ವಿಚಾರಣೆ ನಡೆಸಿದ ಅಧಿಕಾರಿಗಳು, ಸಂದೀಪ್ ಘೋಷ್ ಬಂಧಿಸಿರುವ ಮಾಹಿತಿಯನ್ನು ನೀಡಿದ್ದಾರೆ.
ಸಂದೀಪ್ ಘೋಷ್ ವಿರುದ್ಧ ಸಿಬಿಐ ಅಧಿಕಾರಿಗಳು ಐಪಿಸಿ ಸೆಕ್ಷನ್ 120ಬಿ, ಸೆಕ್ಷನ್ 420 ಹಾಗೂ 1988ರ ಭ್ರಷ್ಟಾಚಾರ ವಿರೋಧಿ ಕಾಯ್ದೆಯ ಸೆಕ್ಷನ್ 7ರ ಅಡಿ ಪ್ರಕರಣ ದಾಖಲಿಸಿದೆ. ಸಿಬಿಐ ದಾಖಲಿಸಿರುವ ಸೆಕ್ಷನ್ ಅಡಿಯಲ್ಲಿ ಸಂದೀಪ್ ಘೋಷ್‌ಗೆ ಜಾಮೀನು ರಹಿತ ಪ್ರಕರಣಗಳು ದಾಖಲಾಗಿದೆ. ಸಂದೀಪ್ ಘೋಷ್ ಬಂದನ ಪಶ್ಚಿಮ ಬಂಗಾಳ ಮಮತಾ ಬ್ಯಾನರ್ಜಿ ಸರ್ಕಾರದ ಸಂಕಷ್ಟ ಹೆಚ್ಚಿಸಿದೆ.
ಸಿಎಂ ಮಮತಾ ಬ್ಯಾನರ್ಜಿ ರಾಜೀನಾಮೆಗೆ ಆಗ್ರಹಿಸಿ ಭಾರಿ ಪ್ರತಿಭಟನೆ, ಹಿಂಸಾಚಾರ
ಘಟನೆ ಬೆನ್ನಲ್ಲೇ ಮಮತಾ ಬ್ಯಾನರ್ಜಿ ರಾಜೀನಾಮೆ ಆಗ್ರಹಿಸಿ ಪಶ್ಚಿಮ ಬಂಗಾಳ ಸೇರಿದಂತೆ ದೇಶಾದ್ಯಂತ ಪ್ರತಿಭಟನೆ ನಡೆದಿದೆ. ಇದೀಗ ಸಂದೀಪ್ ಘೋಷ್ ಬಂಧನ ಮಮತಾ ಸರ್ಕಾರಕ್ಕೆ ತೀವ್ರ ಹಿನ್ನಡೆ ತಂದಿದೆ. ಇತ್ತ ಮಮತಾ ಬ್ಯಾನರ್ಜಿ ನೇತತ್ವದ ಟಿಎಂಸಿ ಕೂಡ ಕೆಲ ಪ್ರತಿಭಟನೆ ನಡೆಸಿದೆ. ಇದರ ನಡುವೆ ಪ್ರಧಾನಿ ಮೋದಿಗೆ ಪತ್ರ ಬರೆದು ಅತ್ಯಾಚಾರ ಪ್ರಕರಣಗಳ ತ್ವರಿತ ವಿಚಾರಣೆಗೆ ಆಗ್ರಹಿಸಿದ್ದರು.
ಆಗಸ್ಟ್ 9 ರಂದು ರಾತ್ರಿ ಶಿಫ್ಟ್‌ನಲ್ಲಿದ್ದ ವೈದ್ಯೆ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿತ್ತು. ಆದರ ಈ ಘಟನೆ ಕುರಿತು ಎಫ್ಐಆರ್ ದಾಖಲಿಸಲು ಪಶ್ಚಿಮ ಬಂಗಾಳ ಪೊಲೀಸರು ಹಿಂದೇಟು ಹಾಕಿದ್ದರು. ವೈದ್ಯೆ ಪೋಷಕರ ಆಕ್ರಂದನ, ಇತರ ವೈದ್ಯರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಎಫ್ಐಆರ್ ದಾಖಲಾಗಿತ್ತು. ಬಳಿಕ ಮಮತಾ ಸರ್ಕಾರ ಎಸ್ಐಟಿ ತಂಡ ರಚಿಸಿ ತನಿಖೆಗೆ ಆದೇಶಿಸಿತ್ತು. ಆದರೆ ಕೋಲ್ಕತಾ ಹೈಕೋರ್ಟ್ ಘಟನೆ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿತ್ತು. ಇಷ್ಟೇ ಅಲ್ಲ ಸಿಬಿಐ ವಿಚಾರಣೆಗೆ ಆದೇಶಿಸಿತ್ತು.
ಸಿಬಿಐ ಪ್ರಕರಣ ತನಿಖೆ ಆರಂಭಿಸಿದ ಬಳಿಕ ಪ್ರತಿ ದಿನ ಸಂದೀಪ್ ಘೋಷ್ ವಿಚಾರಣೆ ನಡೆಸಲಾಗಿದೆ. 18 ದಿನಗಳ ಕಾಲ ಸತತ ವಿಚಾರಣೆ ಬಳಿಕ ಇದೀಗ ಬಂಧಿಸಲಾಗಿದೆ. ವಿಚಾರಣೆ ವೇಳೆ ವೈದ್ಯೆ ಪ್ರಕರಣಕ್ಕೂ ತನಗೂ ಸಂಬಂಧವಿಲ್ಲ ಎಂದೇ ಉತ್ತರ ನೀಡಿದ್ದಾನೆ. ಇಷ್ಟೇ ಅಲ್ಲ ವೈದ್ಯೆ ಮೃತಪಟ್ಟು ಪೊಲೀಸರಿಗೆ ಮಾಹಿತಿ ಸಿಕ್ಕ ಬಳಿಕವೇ ತನಗೆ ಮಾಹಿತಿ ಸಿಕ್ಕಿದೆ. ಇದಕ್ಕೂ ಮೊದಲು ತನಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ವಿಚಾರಣೆಯಲ್ಲಿ ಹೇಳಿದ್ದಾನೆ.
ಕೋಲ್ಕತ್ತಾ ರೇಪ್ ಕೇಸ್‌ಗೆ ಟ್ವಿಸ್ಟ್: ಸಿಬಿಐ ಸತ್ಯ ಪರೀಕ್ಷೆ ವೇಳೆ ಆರೋಪಿ ಸಂಜಯ್ ರಾಯ್ ಹೇಳಿದ್ದೇನು?