ಮೋದಿ ಸಭೆಗೆ ಹೋಗದ ದೀದಿ: ಕೋಲ್ಕತ್ತಾ ಫೋರ್ಟ್ ಟ್ರಸ್ಟ್‌ಗೆ ಶಾಮಾ ಪ್ರಸಾದ್ ಹೆಸರು!
ಮೋಧಿ ಕಾಣಿಸಿಕೊಂಡ ವೇದಿಕೆ ಹತ್ತಲು ಒಲ್ಲೆ ಎಂದ ದೀದಿ| ಕೋಲ್ಕತ್ತಾ ಪೋರ್ಟ್ 150ನೇ ವರ್ಷಾಚರಣೆ ಕಾರ್ಯಕ್ರಮ| ಟ್ರಸ್ಟ್‌ಗೆ ಶಾಮಾ ಪ್ರಸಾದ್ ಮುಖರ್ಜಿ ಹೆಸರು ಘೋಷಿಸಿದ ಪ್ರಧಾನಿ ಮೋದಿ| ಭಾರತದ ಬಂದರುಗಳು ಅಭಿವೃದ್ಧಿಯ ಬಾಗಿಲುಗಳು ಎಂದ ಮೋದಿ| ಮೋದಿ ಸಮಾರಂಭಕ್ಕೆ ಗೈರಾದ ಪ.ಬಂಗಹಾಳ ಸಿಎಂ ಮಮತಾ ಬ್ಯಾನರ್ಜಿ|
ನವದೆಹಲಿ(ಜ.12): ಪ್ರಧಾನಿ ಮೋದಿ ಭಾಗವಹಿಸಿದ್ದ ಕೋಲ್ಕತಾ ಪೋರ್ಟ್ ಟ್ರಸ್ಟ್'ನ 150ನೇ ವರ್ಷಾಚರಣೆ ಕಾರ್ಯಕ್ರಮಕ್ಕೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಗೈರು ಹಾಜರಾಗಿದ್ದಾರೆ.
ಕೋಲ್ಕತ್ತಾ ಪೋರ್ಟ್ ಟ್ರಸ್ಟ್‌ನ 150ನೆ ವರ್ಷಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನಿ ಮೋದಿ, ಟ್ರಸ್ಟ್‌ನ ಹೆಸರನ್ನು ಶಾಮಾ ಪ್ರಸಾದ್ ಮುಖರ್ಜಿ ಎಂದು ಮರುನಾಮಕರಣ ಮಾಡುವುದಾಗಿ ಘೋಷಿಸಿದರು.
ಪ.ಬಂಗಾಳವೂ ಸೇರಿದಂತೆ ಇಡೀ ಭಾರತದ ಔದ್ಯೋಗಿಕ ಕ್ಷೇತ್ರದ ಬೆಳವಣಿಗೆಗೆ ಅಡಿಪಾಯ ಹಾಕಿದ ಶಾಮಾ ಪ್ರಸಾದ್ ಮುಖರ್ಜಿಗೆ ಗೌರವಪೂರ್ವಕವಾಗಿ ಈ ಪೋರ್ಟ್‌ನ್ನು ಸಮರ್ಪಿಸುತ್ತಿರುವುದಾಗಿ ಪ್ರಧಾನಿ ಮೋದಿ ಹೇಳಿದರು.
ವಿರೋಧಿಗಳ ನೆಲದಲ್ಲಿ ಧೈರ್ಯವಾಗಿ ಸಿಎಎ ಸಮರ್ಥಿಸಿಕೊಂಡ ಧೀರ!
ಕೋಲ್ಕತ್ತಾದ ಬಂದರು ಕೇವಲ ವ್ಯಾವಹಾರಿಕ ಬಂದರಾಗಿ ಉಳಿದಿಲ್ಲ. ಈ ದೇಶದ ಒಂದು ಪೀಳಿಗೆಯ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿದ್ದು, ಇದರ ಅಭಿವೃದ್ಧಿ ನಮ್ಮೆಲ್ಲರ ಕರ್ತವ್ಯ ಎಂದು ಮೋದಿ ಈ ವೇಳೆ ನುಡಿದರು.
ಭಾರತದ ಬಂದರುಗಳು ದೇಶದ ಅಭಿವೃದ್ಧಿಯ ಬಾಗಿಲುಗಳಾಗಿದ್ದು, ಇದರ ಆಧುನಿಕರಣ ನವ ಭಾರತದ ನಿರ್ಮಾಣಕ್ಕೆ ನಾಂದಿಯಾಗಲಿ ಎಂದು ಮೋದಿ ಹಾರೈಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಮಮತಾ ಬ್ಯಾನರ್ಜಿ ಹಾಗೂ ಪ್ರಧಾನಿ ಮೋದಿ ಕಾಣಿಸಿಕೊಳ್ಳಲಿದ್ದಾರೆಂದು ಹೇಳಲಾಗುತ್ತಿತ್ತು. ಆದರೆ ಮಮತಾ ಸಮಾರಂಭದಿಂದ ದೂರ ಉಳಿದಿದ್ದು ಎದ್ದು ಕಾಣುತ್ತಿತ್ತು.
ದೀದಿ-ಮೋದಿ ಮುಲಾಖಾತ್: ಪಿಎಂ-ಸಿಎಂ ನಡುವೆ ಖಾಸ್‌ಬಾತ್!
ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಪ್ರಧಾನಿ ಮೋದಿ, ಪ.ಬಂಗಾಳ ಮಮತಾ ಬ್ಯಾನರ್ಜಿ, ರಾಜ್ಯಪಾಲ ಜಗದೀಪ್ ಧನಕರ್ ಹಾಗೂ ಕೇಂದ್ರ ಸಚಿವ ಮನ್ಸುಖ್ ಮಂಡವಿಯಾ ಅವರ ಹೆಸರನ್ನು ನಮೂದಿಸಲಾಗಿತ್ತು. ಮಮತಾ ಹೊರತಾಗಿ ಉಳಿದವರೆಲ್ಲರೂ ಭಾಗವಹಿಸಿದ್ದರು.