Asianet Suvarna News Asianet Suvarna News

ವೈದ್ಯ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ವಿಪಕ್ಷಗಳು ರಾಜಕೀಯ ಮಾಡುತ್ತಿವೆ: ಮಮತಾ ಕಿಡಿ

ವೈದ್ಯೆ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ ಕೋಲ್ಕತಾ ಹೈಕೋರ್ಟ್‌ ನಿರ್ಧಾರವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಸ್ವಾಗತಿಸಿದ್ದಾರೆ. ಆದರೆ ಈ ಪ್ರಕರಣದಲ್ಲಿ ರಾಜಕೀಯ ಮಾಡುತ್ತಿರುವ ವಿಪಕ್ಷಗಳ ವಿರುದ್ಧ ಕಿಡಿ ಕಾರಿದ್ದಾರೆ.

Kolkata doctor rape and murder latest update cm mamata banerjee outraged against bjp cpm rav
Author
First Published Aug 15, 2024, 7:01 AM IST | Last Updated Aug 16, 2024, 8:28 AM IST

ಕೋಲ್ಕತಾ (ಆ.15): ವೈದ್ಯೆ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ ಕೋಲ್ಕತಾ ಹೈಕೋರ್ಟ್‌ ನಿರ್ಧಾರವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಸ್ವಾಗತಿಸಿದ್ದಾರೆ. ಆದರೆ ಈ ಪ್ರಕರಣದಲ್ಲಿ ರಾಜಕೀಯ ಮಾಡುತ್ತಿರುವ ವಿಪಕ್ಷಗಳ ವಿರುದ್ಧ ಕಿಡಿ ಕಾರಿದ್ದಾರೆ.

‘ನಾವು ಹೈಕೋರ್ಟ್‌ನ ಆದೇಶಕ್ಕೆ ತಲೆ ಬಾಗುತ್ತೇವೆ. ಸಿಬಿಐಗೆ ಎಲ್ಲ ರೀತಿಯಲ್ಲಿಯೂ ಬೆಂಬಲ ನೀಡುತ್ತೇವೆ. ಈ ಪ್ರಕರಣವನ್ನು ಸಿಬಿಐಗೆ ನೀಡುವುದಕ್ಕೆ ಯಾವುದೇ ತೊಂದರೆ ಇಲ್ಲ. ಈ ಪ್ರಕರಣ ಆದಷ್ಟು ಬೇಗ ಇತ್ಯರ್ಥವಾಗಬೇಕಿದೆ ’ ಎಂದರು.

Viral: ಪಶ್ಚಿಮ ಬಂಗಾಳದ ಅಸಹ್ಯ, ವೈದ್ಯೆಗೆ ಮರ್ಮಾಂಗ ತೋರಿಸಿ ಓಡಿಹೋದ ರೋಗಿ!

ಆದ ಘಟನೆಯನ್ನು ಬಿಜೆಪಿ(BJP) ಮತ್ತು ಸಿಪಿಎಂ(CPM) ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ ಎಂದ ದೀದಿ ‘ಈ ಪ್ರಕರಣದಲ್ಲಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ನಾವು ಕೈಗೊಂಡಿದ್ದೇವೆ. ಆದರೂ ದುರುದ್ದೇಶಪೂರಿತ ಪ್ರಚಾರ ನಡೆಯುತ್ತಿದೆ. ನಿಮಗೆ ಬೇಕಿದ್ದರೆ ನನ್ನನ್ನು ನಿಂದಿಸಿ. ಅದರೆ ರಾಜ್ಯವನ್ನಲ್ಲ’ ಎಂದರು. ಅಲ್ಲದೇ ಇದೇ ಸಂದರ್ಭದಲ್ಲಿ ಕಳೆದ ಮೂರು ದಿನಗಳಿಂದ ವೈದ್ಯರು ನಡೆಸುತ್ತಿರುವ ಮುಷ್ಕರವನ್ನು ಅಂತ್ಯಗೊಳಿಸಿ, ಸೇವೆಗೆ ಹಾಜರಾಗುವಂತೆ ಮನವಿ ಮಾಡಿಕೊಂಡರು.

Latest Videos
Follow Us:
Download App:
  • android
  • ios