Viral: ಪಶ್ಚಿಮ ಬಂಗಾಳದ ಅಸಹ್ಯ, ವೈದ್ಯೆಗೆ ಮರ್ಮಾಂಗ ತೋರಿಸಿ ಓಡಿಹೋದ ರೋಗಿ!
ಪಶ್ಚಿಮ ಬಂಗಾಳದಲ್ಲಿ ವೈದ್ಯೆ ಮೇಲಿನ ರೇಪ್ ವಿಚಾರವಾಗಿ ಪ್ರತಿಭಟನೆ ಜೋರಾಗಿರುವ ನಡುವೆಯೇ ಮತ್ತೊಂದು ಅಸಹ್ಯಕರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನವದೆಹಲಿ (ಆ.12): ಪಶ್ಚಿಮ ಬಂಗಾಳ ಕುದಿಯುವ ಕೆಂಡವಾಗಿದೆ. ಪೋಸ್ಟ್ ಗ್ರಾಜುಯೇಟ್ ಟ್ರೇನಿ ಡಾಕ್ಟರ್‌ನ ರೇಪ್ & ಮರ್ಡರ್ ಕೇಸ್‌ನಲ್ಲಿ ಅಲ್ಲಿನ ವೈದ್ಯರು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಇದರ ನಡುವೆ ಪಶ್ಚಿಮ ಬಂಗಾಳದಲ್ಲಿಯೇ ಮತ್ತೊಂದು ಅಸಹ್ಯಕರ ಘಟನೆ ವರದಿಯಾಗಿದೆ. ವೈದ್ಯೆಗೆ ಆರೋಗ್ಯ ತೋರಿಸಲು ಬಂದಿದ್ದ ರೋಗಿಯೊಬ್ಬ, ಆಕೆಗೆ ತನ್ನ ಮರ್ಮಾಂಗವನ್ನು ತೋರಿಸಿ ಓಡಿ ಹೋಗಿದ್ದಾನೆ. ಇದು ಸಂಪೂರ್ಣ ವಿಡಿಯೋದಲ್ಲಿ ದಾಖಲಾಗಿದೆ. ವೈದ್ಯೆಯ ಮೊಬೆಲ್‌ನಲ್ಲಿ ಇವೆಲ್ಲವೂ ವರದಿಯಾಗಿದೆ. ಒದಲು ಬಾಗಿಲ ಬಳಿ ನಿಲ್ಲುವ ರೋಗಿಗೆ ಒಳಗೆ ಬನ್ನಿ ಎನ್ನುತ್ತಾರೆ. ಈ ವೇಳೆ ತನ್ನ ಪ್ಯಾಂಟ್‌ನಿಂದ ಮರ್ಮಾಂಗವನ್ನು ಹೊರತೆಗೆದು ಆಕೆಗೆ ತೋರಿಸಿದ್ದಾನೆ. ಅಸಹ್ಯಕರ ವರ್ತನೆ ತೋರಿದ ಬೆನ್ನಲ್ಲಿಯೇ ಆತನನ್ನು ಹಿಡಯಲು ಹೊರಟಾಗ, ಆತ ಅಲ್ಲಿಂದ ಸೈಕಲ್‌ನಲ್ಲಿ ಓಡಿ ಹೋಗಿದ್ದಾನೆ. ವಿಭೋರ್ ಆನಂದ್ ಎನ್ನುವವರು ಸೋಮವಾರ ಮಧ್ಯಾಹ್ನ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಇಲ್ಲಿಯವರೆಗೂ 30 ಸಾವಿರ ಮಂದಿ ಇದನ್ನು ವೀಕ್ಷಣೆ ಮಾಡಿದ್ದಾರೆ. ಸಾಕಷ್ಟು ಮಂದಿ ಪಶ್ಚಿಮ ಬಂಗಾಳದಲ್ಲಿ ಪೊಲೀಸ್ ವ್ಯವಸ್ಥೆ ಇದ್ಯಾ, ಅಲ್ಲಿನ ಪೊಲೀಸ್‌ಗೆ ಭಯ ಪಡುವ ವ್ಯಕ್ತಿಗಳು ಯಾರಾದರೂ ಇದ್ದಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಈ ವಿಡಿಯೋಗೆ ಭಿನ್ನ ವಿಭಿನ್ನ ಕಾಮೆಂಟ್‌ಗಳೂ ಬಂದಿವೆ, ಆತನನ್ನು ನೀವು ಯಾವುದೇ ಕಾರಣಕ್ಕೂ ಪೊಲೀಸ್ ಸ್ಟೇಷನ್‌ಗೆ ಒಪ್ಪಿಸಬೇಡಿ. ಆ ವ್ಯಕ್ತಿಯನ್ನು ಅದೇ ವೈದ್ಯೆಯ ಬಳಿ ಬಿಡಿ. ಆಕೆ ಶಸ್ತ್ರಚಿಕಿತ್ಸೆ ಮಾಡಿ, ಆತನ ಮರ್ಮಾಂಗವನ್ನು ತೆಗೆದುಹಾಕ್ತಾರೆ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಈ ವ್ಯಕ್ತಿ ಬಾಂಗ್ಲಾದೇಶಿ ಆಗಿರುವ ಸಾಧ್ಯತೆ ಇದೆ ಎಂದಿದ್ದಾರೆ. ಇದು ಅಸಹ್ಯಕರ ಮಾತ್ರ ಅಲ್ಲ ಶಾಕಿಂಗ್ ಕೂಡ ಹೌದು. ಪಶ್ಚಿಮ ಬಂಗಾಳದಲ್ಲಿ ಎಷ್ಟು ಹೀನ ಸ್ಥಿತಿ ಇದ್ದಿರಬಹುದು ಎನ್ನುವುದನ್ನು ಯೋಚಿಸಿಕೊಳ್ಳಿ ಎಂದಿದ್ದಾರೆ.
ಬೇಕಾಬಿಟ್ಟಿಯಾಗಿ ಪೋರ್ನ್ ವೆಬ್‌ಸೈಟ್‌ಗಳು ಸಿಗುತ್ತಿರುವ ಕಾರಣಕ್ಕಾಗಿಯೇ ದೇಶದ ಯುವಕರು ಈಗ ಈ ರೀತಿ ಆಗುತ್ತಿದ್ದಾರೆ ಎಂದು ಗಂಭೀರ ಸಮಸ್ಯೆಯ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಟಿಎಂಸಿ ಆಡಳಿತದಲ್ಲಿ ಪಶ್ಚಿಮ ಬಂಗಾಳ ಮಹಿಳೆಯರಿಗೆ ಸೇಫ್ ಎನ್ನಲು ಸಾಧ್ಯವೇ ಇಲ್ಲ ಎಂದು ಇನ್ನೊಬ್ಬರು ಬರೆದಿದ್ದಾರೆ. ತಕ್ಷಣವೇ ಈ ಮೆಂಟಲ್ ರೋಗಿಯನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಿ ಎಂದು ಕಾಮೆಂಟ್ ಮಾಡಿದ್ದಾರೆ.
ಕೋಲ್ಕತ್ತಾದಲ್ಲಿ ವೈದ್ಯೆಯ ರೇಪ್& ಕೊಲೆ ಕೇಸ್: ದೇಶವ್ಯಾಪಿ ಅನಿರ್ದಿಷ್ಟವಾಧಿ ಮುಷ್ಕರಕ್ಕೆ ವೈದ್ಯರ ಕರೆ
ಪಶ್ಚಿಮ ಬಂಗಾಳದಲ್ಲಿ ವೈದ್ಯರ ವಿಚಾರದಲ್ಲಿ ಆಗುತ್ತಿರುವ 2ನೇ ಹೀನ ಘಟನೆ ಇದಾಗಿದೆ. ಕಳೆದ ಶುಕ್ರವಾರ ಪೋಸ್ಟ್ ಗ್ರಾಜುಯೇಟ್ ಟ್ರೇನಿ ವೈದ್ಯೆಯೊಬ್ಬರ ಶವ ಕೋಲ್ಕತ್ತಾದ ಆರ್‌ಜಿ ಖಾರ್ ಮೆಡಿಕಲ್ ಕಾಲೇಜು & ಹಾಸ್ಪಿಟಲ್‌ನ ಸೆಮಿನಾರ್ ಹಾಲ್‌ನಲ್ಲಿ ಪತ್ತೆಯಾಗಿತ್ತು. ಸಹಪಾಠಿಗಳ ಪ್ರಕಾರ, ಆಕೆ ತನ್ನ ತಿಂಡಿಯನ್ನು ತರಲು ಹಾಗೂ ವಿಶ್ರಾಂತಿ ಪಡೆಯಲು ಹೋಗಿದ್ದಾಗ ಈ ಘಟನೆ ನಡೆದಿತ್ತು. ಮುಂಜಾನೆ 3 ರಿಂದ 6 ಗಂಟೆಯ ಅವಧಿಯಲ್ಲಿ ಈ ಕೃತ್ಯ ನಡೆದಿದೆ ಎಂದು ಅಂದಾಜಿಸಲಾಗಿದೆ. ನಗರ ಪೊಲೀಸ್ ಆಯುಕ್ತ ವಿನೀತ್ ಗೋಯಲ್ ಅವರು ಮೂರು ದಿನಗಳಲ್ಲಿ ಎರಡನೇ ಬಾರಿಗೆ ಭಾನುವಾರ ವೈದ್ಯಕೀಯ ಸಂಸ್ಥೆಗೆ ಭೇಟಿ ನೀಡಿ ಧರಣಿ ನಿರತ ಕಿರಿಯ ವೈದ್ಯರ ಪ್ರತಿನಿಧಿಗಳೊಂದಿಗೆ ಸಭೆ ನಡೆದಿದ್ದಾರೆ.
ಕೋಲ್ಕತ್ತಾದ ಆಸ್ಪತ್ರೆಯಲ್ಲೇ ಟ್ರೈನಿ ವೈದ್ಯೆಯ ಅತ್ಯಾಚಾರವೆಸಗಿ ಕೊಲೆ: ಶಂಕಿತನ ಸುಳಿವು ನೀಡಿದ ಬ್ಲೂಟುಥ್