Asianet Suvarna News Asianet Suvarna News

ಸುಪ್ರೀಂ ಕೋರ್ಟ್ ಭರವಸೆ ಬಳಿಕ ಕೋಲ್ಕತಾ ಪ್ರಕರಣ ಖಂಡಿಸಿ ನಡೆಸುತ್ತಿದ್ದ ಪ್ರತಿಭಟನೆ ಕೈಬಿಟ್ಟ ವೈದ್ಯರು!

ಸುಪ್ರೀಂ ಕೋರ್ಟ್ ಮನವಿ ಹಾಗೂ ಭರವಸೆ ಬೆನ್ನಲ್ಲೇ AIIMS ವೈದ್ಯರು ಪ್ರತಿಭಟನೆ ಅಂತ್ಯಗೊಳಿಸಿದ್ದಾರೆ. ಕಳೆದ 11 ದಿನಗಳಿಂದ ಕೋಲ್ಕತಾ ವೈದ್ಯೆಗೆ ನ್ಯಾಯಕೊಡಿಸಲು ಹೋರಾಡುತ್ತಿದ್ದ ವೈದ್ಯರು ಇದೀಗ ಪ್ರತಿಭಟನೆ ಅಂತ್ಯಗೊಳಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

Kolkata Doctor case AIIMS Doctors call off 11 day strike after supreme court assurance ckm
Author
First Published Aug 22, 2024, 5:09 PM IST | Last Updated Aug 22, 2024, 5:09 PM IST

ನವದೆಹಲಿ(ಆ.22) ಆರ್‌ಜಿ ಕಾರ್ ಕೋಲ್ಕತಾ ಆಸ್ಪತ್ರೆಯಲ್ಲಿ ನಡೆದ ವೈದ್ಯೆ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ಖಂಡಿಸಿ ಕಳೆದ 11 ದಿನಗಳಿಂದ ದೆಹಲಿ AIIMS ವೈದ್ಯರು ನಡೆಸುತ್ತಿದ್ದ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ. ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಪ್ರತಿಭಟನಾ ನಿರತ ವೈದ್ಯರಿಗೆ ಭರವಸೆ ನೀಡಿದೆ. ಪ್ರತಿಭಟನೆಯಿಂದ ಕರ್ತವ್ಯಕ್ಕೆ ಮರಳಿದ ಬಳಿಕ ವೈದ್ಯರ ಮೇಲೆ ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ವೈದ್ಯರಿಗೆ ಭರವಸೆ ನೀಡಿದೆ. ಈ ಭರವಸೆ ಬಳಿಕ ವೈದ್ಯರು ಪ್ರತಿಭಟನೆ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿದ್ದಾರೆ. 

ಆರ್‌ಜಿ ಕಾರ್ ಆಸ್ಪತ್ರೆ ಘಟನೆ ಕುರಿತು ಸುಪ್ರೀಂ ಕೋರ್ಟ್ ಪ್ರತಿಭಟನಾ ನಿರತ ವೈದ್ಯರಿಕೆ ಕೆಲ ಭರವಸೆಗಳನ್ನೂ ನೀಡಿದೆ. ಕೋಲ್ಕತಾ ವೈದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದೆ. ಇದೇ ವೇಳೆ ವೈದ್ಯರ ಸುರಕ್ಷತೆ, ತಪ್ಪಿತಸ್ಥರಿಗೆ ಶಿಕ್ಷೆ, ಭವಿಷ್ಯದಲ್ಲಿ ಸುರಕ್ಷತಾ ಕ್ರಮಗಳ ಕುರಿತು ವೈದ್ಯರಿಗೆ ಭರವಸೆ ನೀಡಿದೆ. ಇದರ ಬೆನ್ನಲ್ಲೇ ದೆಹಲಿ ಏಮ್ಸ್ ವೈದ್ಯರು ಪ್ರತಿಭಟನೆ ಅಂತ್ಯಗೊಳಿಸುವುದಾಗಿ ಪ್ರಕಟಣೆ ಹೊರಡಿಸಿದ್ದಾರೆ.

 ರೇಪ್ ಕೇಸ್‌ ವಿಚಾರಣೆ ವೇಳೆ ನಕ್ಕ ಪಶ್ಚಿಮ ಬಂಗಾಳ ಸರ್ಕಾರ ಪರ ವಕೀಲ ಸಿಬಲ್‌ಗೆ ತುಷಾರ್ ಮೆಹ್ತಾ ಕ್ಲಾಸ್‌

ಸುಪ್ರೀಂ ಕೋರ್ಟ್ ಭರವಸೆ ಬಳಿಕ ಕಳೆದ 11 ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಕೈಬಿಟ್ಟಿದ್ದೇವೆ. ನಮ್ಮ ಮೊದಲ ಆದ್ಯತೆ ರೋಗಿಗಲ ಸುಶ್ರೂಷೆ. ತಕ್ಷಣದಿಂದಲೇ ವೈದ್ಯರು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ ಎಂದು ವೈದ್ಯರು ಪ್ರಕಟಣೆಯಲ್ಲಿ ಹೇಳಿದ್ದಾರೆ. ಈ ದೇಶಕ್ಕಾಗಿ ಹಾಗೂ ರೋಗಿಗಳ ಸೇವಾ ಮನೋಭಾವದಿಂದ  RDA, AIIMS ವೈದ್ಯರ ಪ್ರತಿಭಟನೆ ಅಂತ್ಯಗೊಳಿಸುತ್ತಿದ್ದೇವೆ. ಸುಪ್ರೀಂ ಕೋರ್ಟ್ ಮನವಿ ಹಾಗೂ ಭರವಸೆ ಬಳಿಕ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಕೋಲ್ಕತಾ ವೈದ್ಯೆ ಪ್ರಕರಣದಿಂದ ವೈದ್ಯರ ಸುರಕ್ಷತೆಯ ಪ್ರಶ್ನೆ ಇದೀಗ ಅತ್ಯಂತ ಪ್ರಮುಖವಾಗಿದೆ.  ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮದ್ಯಪ್ರವೇಶಿಸಿದೆ. ಕೋರ್ಟ್ ಮದ್ಯಪ್ರವೇಶದಿಂದ ನಮ್ಮಲ್ಲಿ ಆಶಾವಾದವೊಂದು ಮೂಡಿದೆ ಎಂದು ಪ್ರತಿಭಟನಾನಿರತ ವೈದ್ಯರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಕೋಲ್ಕತ್ತಾ ವೈದ್ಯೆಯ ಕೊಂದವ ಆರ್‌ಜಿ ಕರ್ ಆಸ್ಪತ್ರೆಯ ಬಾಸ್‌ ಸಂದೀಪ್ ಘೋಷ್ ಶಿಷ್ಯ!

ಆರ್‌ಜಿ ಕಾರ್ ಆಸ್ಪತ್ರೆಯಲ್ಲಿ ರಾತ್ರಿ ಶಿಫ್ಟ್‌ನಲ್ಲಿದ್ದ ವೈದ್ಯೆ ಮೇಲೆ ಭೀಕರ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿತ್ತು. ಈ ಘಟನೆ ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿದೆ. ಪ್ರಕರಣ ಮುಚ್ಚಿಹಾಕಲು ಪಶ್ಚಿಮ ಬಂಗಾಳ ಸರ್ಕಾರ ಕೂಡ ಪ್ರಯತ್ನಿಸಿರುವುದು ಸುಪ್ರೀಂ ಕೋರ್ಟ್ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆ ಸಂಬಂಧ ಪಶ್ಚಿಮ ಬಂಗಾಳ ಮಮತಾ ಬ್ಯಾನರ್ಜಿ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
 

Latest Videos
Follow Us:
Download App:
  • android
  • ios