Asianet Suvarna News Asianet Suvarna News

ಟಿಪ್ಪು, ಔರಂಗಜೇಬ್ ಪರ ಸ್ಟೇಟಸ್, ಧಗಧಹಿಸಿದ ಕೊಲ್ಹಾಪುರದಲ್ಲಿ ಇಂಟರ್‌ನೆಟ್ ಸ್ಥಗಿತ!

ಕೊಲ್ಹಾಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಹಿಂದೂ ಸಂಘಟನೆಗಳು ಕರೆ ನೀಡಿದ ಬಂದ್ ಹಿಂಸಾರೂಪ ಪಡೆದುಕೊಂಡಿದೆ. ಇದರ ಪರಿಣಾಮ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದ್ದು, ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಈ ಗಲಭೆಗೆ ಮುಖ್ಯ ಕಾರಣ ಔರಂಗಜೇಬ್ ಹಾಗೂ ಟಿಪ್ಪು ಸುಲ್ತಾನ್ ಪರ ಹಾಕಿರುವ ವ್ಯಾಟ್ಸ್ಆ್ಯಪ್ ಸ್ಟೇಟಸ್.

Kolhapur Violence Internet shut after amid protest over glorifying aurangzeb and tipu sultan WhatsApp status ckm
Author
First Published Jun 7, 2023, 4:23 PM IST

ಕೊಲ್ಹಾಪುರ(ಜೂ.07): ಅಹಮ್ಮದನಗರವನ್ನು ಅಹಿಲ್ಯನಗರ ಎಂದು ಮಹಾರಾಷ್ಟ್ರ ಸರ್ಕಾರ ಮರುನಾಮಕರಣ ಮಾಡಿದ ಬೆನ್ನಲ್ಲೆ ಕೊಲ್ಹಾಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಸರ್ಕಾರದ ನಿರ್ಧಾರಕ್ಕೆ ಪ್ರತಿಯಾಗಿ ಕೆಲ ಸಮುದಾಯದ ಮುಖಂಡರು ಸೇರಿದಂತೆ ಹಲವರು ತಮ್ಮ ವ್ಯಾಟ್ಸ್ಆ್ಯಪ್‌ನಲ್ಲಿ ಔರಂಗಜೇಬ್ ಹಾಗೂ ಟಿಪ್ಪು ಸುಲ್ತಾನ್ ಪರ ಫೋಟೋಗಳು, ಬರಹ ವಿರುದ ವ್ಯಾಟ್ಸ್ಆ್ಯಪ್ ಸ್ಟೇಟಸ್ ಹಾಕಲಾಗಿತ್ತು. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಔರಂಗಜೇಬ್ ಹಾಗೂ ಟಿಪ್ಪು ಪರ ಪೋಸ್ಟ್ ಹಾಕಿದ್ದಾರೆ. ಮಹಾರಾಷ್ಟ್ರ ಔರಂಗಜೇಬ್ ರಾಜ್ಯ. ಇದು ಟಿಪ್ಪು ಸುಲ್ತಾನನ ರಾಜ್ಯ ಎಂದು ಬರೆಯಲಾಗಿದೆ. ಇದರಿಂದ ಕೆರಳಿದ ಹಿಂದೂ ಸಂಘಟನೆಗೆ ಕೊಲ್ಹಾಪುರ ಬಂದ್‌ಗೆ ಕರೆ ನೀಡಿತ್ತು. ಈ ಬಂದ್ ವೇಳೆ ಹಿಂಸಾಚಾರ ಭುಗಿಲೆದ್ದಿದೆ. ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಕೊಲ್ಹಾಪುರದಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ.

ಮಹಾರಾಷ್ಟ್ರ ಛತ್ರಪತಿ ಶಿವಾಜಿಯ ರಾಜ್ಯ. ಇಲ್ಲಿ ದಾಳಿಕೋರ, ಮತಾಂಧ ಔರಂಗಜೇಬ್ ಹಾಗೂ ಟಿಪ್ಪು ಸುಲ್ತಾನನ ವೈಭವೀಕರಣ ಅಗತ್ಯವಿಲ್ಲ ಎಂದು ಹಿಂದೂ ಸಂಘಟನೆಗಳು ಬಂದ್‌ಗೆ ಕರೆ ನೀಡಿತ್ತು. ಇದನ್ನು ವಿರೋಧಿಸಿ ಮುಸ್ಲಿಂ ಸಮುದಾಯ ಪ್ರತಿಭಟನೆ ನಡೆಸಿದೆ. ಹೀಗಾಗಿ ಕೊಲ್ಹಾಪುರ ಧಗಧಗಿಸಿದೆ. ಹಿಂಸಾಚಾರ ತೀವ್ರಗೊಳ್ಳುತ್ತಿದ್ದ ಮಹಾರಾಷ್ಟ್ರ ಸರ್ಕಾರ ಹೆಚ್ಚುವರಿ ಪೊಲೀಸ್ ನಿಯೋಜಿಸಿದೆ. ಕೆಲೆವೆಡೆ ಆಶ್ರುವಾಯು ಸಿಡಿಸಲಾಗಿದೆ. ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಔರಂಗಜೇಬ್‌ ಪೋಸ್ಟರ್‌ನೊಂದಿಗೆ ಹಲವರಿಂದ ಡ್ಯಾನ್ಸ್‌: 8 ಮಂದಿ ವಿರುದ್ಧ ಕೇಸ್‌ ದಾಖಲು

ಹಿಂಸಾಚಾರ ಭುಗಿಲೆದ್ದ ಬೆನ್ನಲ್ಲೇ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಯಾವುದೇ ಅಹಿತಕರ ಘಟನೆಗೆ ಅವಕಾಶವಿಲ್ಲ. ಪ್ರತಿಭಟನೆ ಶಾಂತಿಯುತವಾಗಿರಲಿ. ಹಿಂಸಾಚಾರಕ್ಕೆ ಅವಕಾಶವಿಲ್ಲ. ಇದು ಛತ್ರಪತಿ ಶಿವಾಜಿ ರಾಜ್ಯ. ಇಲ್ಲಿ ಔರಂಗಜೇಬ, ಟಿಪ್ಪು ಸುಸ್ತಾನನ ಹೊಗಳುವ ಅವಶ್ಯಕತೆ ಇಲ್ಲ. ಇತಿಹಾಸದಲ್ಲಿ ಇರುವುದನ್ನು ಹೇಳಿದರೆ ಸಾಕು ಎಂದು ಫಡ್ನವಿಸ್ ಎಚ್ಚರಿಕೆ ನೀಡಿದ್ದಾರೆ.

ವ್ಯಾಟ್ಸ್ಆ್ಯಪ್, ಸಾಮಾಜಿಕ ಮಾಧ್ಯಮದಲ್ಲಿ ಔರಂಗಜೇಬ್ ಹಾಗೂ ಟಿಪ್ಪು ಪರ ಘೋಷಣೆಗಳು, ಪೋಸ್ಟ್‌ಗಳು ಹೆಚ್ಚಾಗುತ್ತಿದ್ದಂತೆ ಪೊಲೀಸರು ಕೊಲ್ಹಾಪುರದಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ. ಹೆಚ್ಚುವರಿ ಪೊಲೀಸರು ಇದೀಗ ಸ್ಥಳಕ್ಕೆ ಠಿಕಾಣಿ ಹೊಡಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿದೆ. 

ಕೆಳದಿ ಚೆನ್ನಮ್ಮನ ಏಟಿಗೆ ನುಚ್ಚುನೂರಾಗಿ ಓಡಿಹೋದ ಔರಂಗಜೇಬನ ಸೈನ್ಯ : BY raghavendra

ಇತ್ತ ಘಟನೆಗೆ ಸರ್ಕಾರವೇ ಹೊಣೆ ಎಂದು ಮಹಾರಾಷ್ಟ್ರದ ಪ್ರತಿಪಕ್ಷಗಳು ಹರಿಹಾಯ್ದಿದೆ. ಇದು ಬಿಜೆಪಿ ಪ್ರಾಯೋಜಿತ ಬಂದ್. ಬಿಜೆಪಿ ಸೃಷ್ಟಿಸಿದ ಘಟನೆ ಇದು ಎಂದು ವಿಪಕ್ಷಗಳು ಆರೋಪಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ವಿಫಲಾಗಿದೆ ಎಂದಿದೆ. ಹಲವು ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತ ಹಲವರ ಮೇಲೆ ಪ್ರಕರಣ ದಾಖಲಾಗಿದೆ. 

ಇತ್ತೀಚೆಗೆ ಮಹಾರಾಷ್ಟ್ರದ ಅಹಮದ್‌ ನಗರ ಜಿಲ್ಲೆಯ ಹೆಸರನ್ನು ‘ಅಹಲ್ಯಾ ನಗರ’ ಎಂದು ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಏಕ್‌ನಾಥ್‌ ಶಿಂಧೆ ಘೋಷಿಸಿದ್ದಾರೆ. 18ನೇ ಶತಮಾನದ ಮರಾಠ ಸಾಮ್ರಾಜ್ಯದ ರಾಣಿ ಅಹಲ್ಯಾದೇವಿ ಹೋಳ್ಕರ್‌ ಅವರ 298ನೇ ಜಯಂತಿ ಅಂಗವಾಗಿ ರಾಣಿಯ ಸ್ಮರಣಾರ್ಥ ಈ ನಿರ್ಧಾರ ಹೆಸರು ಘೋಷಿಸಲಾಗಿತ್ತು. ರಾಣಿ ಅಹಲ್ಯಾಬಾಯಿ ಜನಿಸಿದ್ದ ಜಿಲ್ಲೆಯ ಚೌಂಡಿ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಶಿಂಧೆ ‘ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಅಹಲ್ಯಾಬಾಯಿ ಹೋಳ್ಕರ್‌ ಸ್ಥಾಪಿಸಿದ ಆಡಳಿತ ಆದರ್ಶವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ನಿಮ್ಮೆಲ್ಲರ ಆಶಯದಂತೆ ಅಹಲ್ಯಾ ನಗರ ಎಂದು ನಾಮಕರಣ ಮಾಡಲು ನಿರ್ಧರಿಸಿದ್ದೇವೆ. ರಾಣಿ ಅಹಲ್ಯಾ ಹೋಳ್ಕರ್‌ರಿಗೆ ಅಹಲ್ಯಾ ನಗರವನ್ನು ಸಮರ್ಪಿಸಲಾಗುವುದು’ ಎಂದರು.

Follow Us:
Download App:
  • android
  • ios