Asianet Suvarna News Asianet Suvarna News

ಔರಂಗಜೇಬ್‌ ಪೋಸ್ಟರ್‌ನೊಂದಿಗೆ ಹಲವರಿಂದ ಡ್ಯಾನ್ಸ್‌: 8 ಮಂದಿ ವಿರುದ್ಧ ಕೇಸ್‌ ದಾಖಲು

ಮೊಘಲ್ ದೊರೆ ಔರಂಗಜೇಬನ ಪೋಸ್ಟರ್‌ಗಳೊಂದಿಗೆ ಜನರು ನೃತ್ಯ ಮಾಡುತ್ತಿರುವ ವಿಡಿಯೋ ಕ್ಲಿಪ್‌ ಭಾನುವಾರ ರಾತ್ರಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು, ಈ ಹಿನ್ನೆಲೆ ಮಹಾರಾಷ್ಟ್ರ ಪೊಲೀಸರು ವಾಶಿಮ್ ಜಿಲ್ಲೆಯಲ್ಲಿ 8 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

video of people dancing with aurangzebs poster in maharashtra goes viral 8 booked ash
Author
First Published Jan 16, 2023, 4:17 PM IST

ಮಹಾರಾಷ್ಟ್ರದಲ್ಲಿ ಮೊಘಲರ ರಾಜ ಔರಂಗಜೇಬ್‌ನ ಪೋಸ್ಟರ್‌ನೊಂದಿಗೆ ಜನರು ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಈ ಹಿನ್ನೆಲೆ ನೃತ್ಯ ಮಾಡಿದ 8 ಮಂದಿಯ ವಿರುದ್ದ ಕೇಸ್‌ ದಾಖಲಿಸಲಾಗಿದೆ. ಮೊಘಲ್ ದೊರೆ ಔರಂಗಜೇಬನ ಪೋಸ್ಟರ್‌ಗಳೊಂದಿಗೆ ಜನರು ನೃತ್ಯ ಮಾಡುತ್ತಿರುವ ವಿಡಿಯೋ ಕ್ಲಿಪ್‌ ಭಾನುವಾರ ರಾತ್ರಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು, ಈ ಹಿನ್ನೆಲೆ ಮಹಾರಾಷ್ಟ್ರ ಪೊಲೀಸರು ವಾಶಿಮ್ ಜಿಲ್ಲೆಯಲ್ಲಿ 8 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಹಾರಾಷ್ಟ್ರದ ಔರಂಗಾಬಾದ್‌ನಿಂದ 200 ಕಿ.ಮೀ. ದೂರದಲ್ಲಿ ಈ ಘಟನೆ ನಡೆದಿದೆ ಎಂದೂ ತಿಳಿದುಬಂದಿದೆ. 

ಜನವರಿ 1 ರಂದು ದಾದಾ ಹಯಾತ್ ಖಲಂದರ್‌ನ ಉರುಸ್‌ (Urs) ಸಂದರ್ಭದಲ್ಲಿ ಕೆಲವು ಯುವಕರು ಔರಂಗಜೇಬ್ (Aurangzeb) ಅವರ ಪೋಸ್ಟರ್‌ಗಳನ್ನು ಹೊತ್ತುಕೊಂಡು ಹೋಗುತ್ತಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಮೊಘಲ್ (Mughal) ದೊರೆಗಳ ಪೋಸ್ಟರ್‌ಗಳನ್ನು ಕೈಯಲ್ಲಿ ಹಿಡಿದುಕೊಂಡಿರುವ ಜನರ ದೊಡ್ಡ ಗುಂಪು ಹಾಡುವ (Singing) ಮತ್ತು ನೃತ್ಯ (Dance) ಮಾಡುವ ವೈರಲ್ ವಿಡಿಯೋವನ್ನು ತೋರಿಸುತ್ತದೆ. ಮಹಾರಾಷ್ಟ್ರದ (Maharashtra) ವಾಶಿಮ್‌ನ ಮಂಗ್ರುಲ್‌ಪಿರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಇದನ್ನು ಓದಿ: ಡಾಕ್ಟರ್‌ ವೇಷ ಧರಿಸಿ ಕಳ್ಳತನ: ಆಸ್ಪತ್ರೆಯಲ್ಲಿ ರೋಗಿಯ ಚಿನ್ನದ ಸರ ಕದ್ದು ಪರಾರಿ

"ಜನವರಿ 1 ರಂದು ದಾದಾ ಹಯಾತ್ ಖಲಂದರ್ ಅವರ ಉರುಸ್‌ ಸಮಯದಲ್ಲಿ ಕೆಲವು ಯುವಕರು ಔರಂಗಜೇಬ್ ಅವರ ಫೋಟೋಗಳನ್ನು ಹೊತ್ತೊಯ್ದರು ಮತ್ತು ಘೋಷಣೆಗಳನ್ನು ಕೂಗಿದರು. ಈ ಹಿನ್ನೆಲೆ ಪ್ರಕರಣ ದಾಖಲಿಸಲಾಗಿದೆ" ಎಂದು ಮಂಗ್ರುಲ್‌ಪಿರ್‌ ಇನ್ಸ್‌ಪೆಕ್ಟರ್‌ ಸುನೀಲ್ ಹುಡ್‌ ಸುದ್ದಿ ಸಂಸ್ಥೆ ANI ಗೆ ಮಾಹಿತಿ ನೀಡಿದ್ದಾರೆ. 

ಇನ್ನು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದು, ಬಂಧಿತರೆಲ್ಲರೂ ವಾಶಿಮ್‌ ನಿವಾಸಿಗಳಾಗಿದ್ದಾರೆ ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ; ಬುದ್ಧಿ ಹೇಳಿದ ಸಂಬಂಧಿಕನಿಗೆ ಇರಿದು ಹತ್ಯೆ: ಆರೋಪಿ ಸೆರೆ

ಹಿಂದೂ ಸಂಘಟನೆಯಿಂದ ಪ್ರತಿಭಟನೆ..!
ಇನ್ನು, ಔರಂಗಜೇಬ್‌ ಫೊಟೋ ಇಟ್ಟುಕೊಂಡು ಡ್ಯಾನ್ಸ್‌ ಮಾಡಿದ್ದ ಕಿಡಿಗೇಡಿಗಳು ವಿರುದ್ಧ ಹಿಂದೂ ಸಂಘಟನೆಯೊಂದು ಪ್ರತಿಭಟನೆ ನಡೆಸಿದೆ. ಅಲ್ಲದೆ, ಔರಂಗಜೇಬ್‌ ಪ್ರತಿಕೃತಿಯನ್ನು ಸಹ ಈ ಸಂಘಟನೆ ದಹಿಸಿದೆ ಎಂದೂ ತಿಳಿದುಬಂದಿದೆ. ಔರಂಗಜೇಬ್‌ ಫೋಟೋ ಇಟ್ಟುಕೊಂಡು ನೃತ್ಯ ಮಾಡಿದ ಜನರ ಗುಂಪಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಈ ಹಿನ್ನೆಲೆ ಹಿಂದೂ ಸಂಘಟನೆಯೊಂದು ಇದರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. 

ಡಾನ್‌ ಛೋಟಾ ರಾಜನ್‌ ಹುಟ್ಟುಹಬ್ಬ ಆಚರಿಸಿದ್ದರು..!
ಇನ್ನು, ಇತ್ತೀಚೆಗಷ್ಟೇ ಮಹಾರಾಷ್ಟ್ರದ ಮಲಾಡ್‌ನಲ್ಲಿ ಅಂಡರ್‌ವರ್ಲ್ಡ್‌ ಡಾನ್‌ ಛೋಟಾ ರಾಜನ್‌ ಹುಟ್ಟುಹಬ್ಬವನ್ನು ಆಚರಿಸಿದ್ದರು. ಈ ಸಂಬಂಧ ಮುಂಬೈ ಪೊಲೀಸರು 6 ಜನರ ವಿರುದ್ಧ ಕೇಸ್‌ ದಾಖಲಿಸಿದ್ದರು. ಛೋಟಾ ರಾಜನ್‌ ಹುಟ್ಟುಹಬ್ಬವನ್ನು ಆಚರಿಸುವ ಹೆಸರಲ್ಲಿ ಆರೋಪಿಗಳು ಹಣ ಸಂಗ್ರಹಿಸುತ್ತಿದ್ದರು ಹಾಗೂ ಅವರನ್ನು ಗೌರವಿಸಲು ಕಬ್ಡಿ ಕಾರ್ಯಕ್ರಮವೊಂದನ್ನೂ ಆಯೋಜಿಸಲಾಗಿತ್ತು. 

ಇದನ್ನೂ ಒದಿ: ಹಿಂದು ನಾಯಕರ ಹತ್ಯೆ ಗುರಿ: ಬಾಲಕನ ಹತ್ಯೆ ಮಾಡಿ ಸ್ಯಾಂಪಲ್ ತೋರಿಸಿದ ಹಂತಕರು

2015 ರಲ್ಲಿ ಇಂಡೋನೇಷ್ಯಾದ ಬಾಲಿಯಿಂದ ಭಾರತಕ್ಕೆ ಕರೆತಂದ ಬಳಿಕ ಛೋಟಾ ರಾಜನ್‌  ದೆಹಲಿಯ ತಿಹಾರ್‌ ಜೈಲಿನಲ್ಲಿದ್ದಾರೆ. ಅವರ ವಿರುದ್ಧ ಈಗಲೂ ಹಲವು ಕೇಸ್‌ಗಳಿವೆ. ಪತ್ರಕರ್ತ ಜೆ. ಡೇ ಹತ್ಯೆ ಪ್ರಕರಣದಲ್ಲಿ ಛೋಟಾ ರಾಜನ್‌ ಅಪರಾಧಿಯಾಗಿದ್ದಾರೆ. 

Follow Us:
Download App:
  • android
  • ios