Asianet Suvarna News Asianet Suvarna News

ಚೀನಾದ ಕಂಪನಿಗೆ ಯುವಕರನ್ನು ಮಾರಾಟ ಮಾಡಿದ್ದ ವ್ಯಕ್ತಿಯ ಬಂಧನ; ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗುವಂತೆ ಒತ್ತಡ

ಕೆಲಸದ ಆಮಿಷ ತೋರಿಸಿ ಪ್ರತಿಯೊಬ್ಬರಿಂದಲೂ 50 ಸಾವಿರ ಹಣ ಪಡೆದುಕೊಂಡಿದ್ದನು. ಕಂಪನಿಯಿಂದ ತಲಾ ಒಬ್ಬರಿಗೆ 4 ಲಕ್ಷ ರೂಪಾಯಿ ಅಂದ್ರೆ ಬರೋಬ್ಬರಿ 24 ಲಕ್ಷ ರೂಪಾಯಿ ಹಣವನ್ನು ಅಫ್ಸರ್ ಅಶ್ರಫ್ ಪಡೆದುಕೊಂಡಿದ್ದನು.
 

Kochi police arrests human trafficker Afsar Ashraf for selling youths to china mrq
Author
First Published Aug 8, 2024, 2:12 PM IST | Last Updated Aug 8, 2024, 2:12 PM IST

ತಿರುವನಂತಪುರ: ಆರು ಯುವಕರನ್ನು ಚೀನಾಕ್ಕೆ (China) ಮಾರಾಟ ಮಾಡಿದ್ದ ಕೊಚ್ಚಿ ಮೂಲದ ಅಫ್ಸರ್ ಅಶ್ರಫ್ ಎಂಬಾತನನ್ನು ಬಂಧಿಸಲಾಗಿದೆ. ಬಂಧಿತ ಅಫ್ಸರ್ ಅಶ್ರಫ್ ಕೊಚ್ಚಿ ಮೂಲದವನಾಗಿದ್ದು, ಮಾನವ ಕಳ್ಳಸಾಗಣೆ (Human Traffic) ಮಾಡಿ ಆರು ಯುವಕರನ್ನು ಚೀನಾದ ಲಾವೋಸ್ ನಲ್ಲಿರುವ ಕಂಪನಿಗೆ ಮಾರಾಟ ಮಾಡಿದ್ದನು. ಈ ಕಂಪನಿ ಯುವಕರನ್ನು ಆನ್‌ಲೈನ್ ಅಕ್ರಮ ಚಟುವಟಿಕೆಗಳಲ್ಲಿ (Online Scam) ಭಾಗಿಯಾಗುವಂತೆ ಒತ್ತಡ ಹೇರಲಾಗುತ್ತಿತ್ತು. ಆನ್‌ಲೈನ್‌ನಲ್ಲಿ ಅಕ್ರಮ ಚಟುವಟಿಕೆಗಳಲ್ಲಿ (Financial Scam) ಒತ್ತಡ ಹಾಕುತ್ತಿದ್ದ ಕಂಪನಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. 

ಪಲ್ಲುರುಥಿ ಯುವಕರಿಗೆ ಚೀನಾದ ಲಾವೋಸ್‌ನಲ್ಲಿ ಕೆಲಸ ಕೊಡಿಸೋದಾಗಿ ನಂಬಿಸಿದ್ದನು. ಕೆಲಸದ ಆಮಿಷ ತೋರಿಸಿ ಪ್ರತಿಯೊಬ್ಬರಿಂದಲೂ 50 ಸಾವಿರ ಹಣ ಪಡೆದುಕೊಂಡಿದ್ದನು. ನಂತರ ಆರು ಯುವಕರನ್ನು ಆನ್‌ಲೈನ್‌ ಹಗರಣದಲ್ಲಿ ತೊಡಗಿಕೊಂಡಿರುವ ಚೀನಾದ ಯಿಂಗ್ ಲಾಂಗ್ ಎಂಬ ಕಂಪನಿಗೆ ಮಾರಾಟ ಮಾಡಿದ್ದನು. ಈ ಕಂಪನಿಯಿಂದ ತಲಾ ಒಬ್ಬರಿಗೆ 4 ಲಕ್ಷ ರೂಪಾಯಿ ಅಂದ್ರೆ ಬರೋಬ್ಬರಿ 24 ಲಕ್ಷ ರೂಪಾಯಿ ಹಣವನ್ನು ಅಫ್ಸರ್ ಅಶ್ರಫ್ ಪಡೆದುಕೊಂಡಿದ್ದನು.

ಪೊಲೀಸ್ ಠಾಣೆಯಲ್ಲಿಯೇ ಎಲ್ಲರ ಮುಂದೆಯೇ ಮಹಿಳೆ ಮೇಲೆ ಹಲ್ಲೆ ನಡೆಸಿದ ಬಿಜೆಪಿ ನಾಯಕ!

ಚೀನಾದ ಕಂಪನಿ ಮೋಸದಿಂದ ಯುವಕರಿಂದ ಕಾಂಟ್ರಾಕ್ಟ್‌ಗೆ ಸಹಿ ಮಾಡಿಸಿಕೊಂಡಿತ್ತು. ನಂತರ ಎಲ್ಲರ ಪಾಸ್‌ಪೋರ್ಟ್ ತಮ್ಮ ವಶಕ್ಕೆ ಪಡೆದುಕೊಂಡು ಬಲವಂತವಾಗಿ ಕಾನೂನು ಬಾಹಿರ ಕೆಲಸಗಳನ್ನು ಮಾಡುವಂತೆ ಒತ್ತಡ ಹಾಕಲಾಗುತ್ತಿತ್ತು. ಪಾಸ್‌ಪೋರ್ಟ್ ಇಲ್ಲದ ಕಾರಣ ಯುವಕರು ಚೀನಾ ಕಂಪನಿ ಸೂಚಿಸಿದ ಕೆಲಸಗಳನ್ನು ಮಾಡುತ್ತಿದ್ದರು. 

ಆನ್‌ಲೈನ್ ಹಣಕಾಸು ವಂಚನೆ ಕೆಲಸಗಳನ್ನು ಮಾಡುವಂತೆ ಯುವಕರನ್ನು ಬಲವಂತಪಡಿಸಲಾಗುತ್ತಿತ್ತು. ವಿವಿಧ ಚಾಟಿಂಗ್ ಅಪ್ಲಿಕೇಶನ್‌ಗಳ ಮೂಲಕ ಭಾರತೀಯರನ್ನೇ ಗುರಿಯಾಗಿಸಿ ಆನ್‌ಲೈನ್‌ನಲ್ಲಿ ವಂಚಿಸಲಾಗುತ್ತಿತ್ತು. ಈ ಆರು ಯುವಕರ ಪೈಕಿ ಓರ್ವ ತಮ್ಮನ್ನು ಕಂಪನಿಗೆ ಮೋಸವಾಗಿ ಮಾರಾಟ ಮಾಡಿದ್ದ ಅಫ್ಸರ್ ಅಶ್ರಫ್‌  ವಿರುದ್ಧ ದೂರು ದಾಖಲಿಸಿದ್ದನು. ಈ ಮಾನವ ಕಳ್ಳಸಾಗಣೆಯಲ್ಲಿ ಅಫ್ಸರ್ ಸೇರಿದಂತೆ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಚೀನಾದ ಸಾಂಗ್ ಮತ್ತು ಬೋನಿ (Song and Bonnie) ಸೇರಿದಂತೆ ಹಲವು ಕಂಪನಿಯ ಉದ್ಯೋಗಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುತ್ತಲೂ ಕೃಷಿ ಜಮೀನು, 3 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸೇತುವೆಗೆ ರಸ್ತೆಯೇ ಇಲ್ಲ

Latest Videos
Follow Us:
Download App:
  • android
  • ios