ಪುದುಚೇರಿ ಸಿಎಂ, ಗೌರ್ನರ್‌ ನಡುವಿನ ಜಟಾಪಟಿಗೆ ಕಾರಣವಾಯ್ತು ಹೆಲ್ಮೇಟ್ | ಹೆಲ್ಮೆಟ್‌ ಧರಿಸದ್ದಕ್ಕೆ ಕ್ರಮಕ್ಕೆ ಸೂಚಿಸಿದ ಬೇಡಿ | ಯಾರನ್ನೂ ಬಿಡುವುದಿಲ್ಲ ಟ್ರಾಫಿಕ್ ನಿಯಮ 

ಪುದುಚೇರಿ (ಅ. 21): ಪುದುಚೇರಿ ಉಪರಾಜ್ಯಪಾಲೆ ಕಿರಣ್‌ ಬೇಡಿ ಹಾಗೂ ಮುಖ್ಯಮಂತ್ರಿ ವಿ. ನಾರಾಯಣಸಾಮಿ ಅವರ ನಡುವಿನ ಜಟಾಪಟಿ ಮತ್ತೊಂದು ಹಂತಕ್ಕೆ ತಲುಪಿದೆ. ಈ ಸಲ ಈ ಇಬ್ಬರೂ ಹೆಲ್ಮೆಟ್‌ ಧರಿಸದ ಬಗ್ಗೆ ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪಗಳ ಮಳೆಗರೆದಿದ್ದಾರೆ.

ನಾರಾಯಣಸಾಮಿ ಅವರು ಕಾಮರಾಜನಗರ ವಿಧಾನಸಭೆ ಉಪಚುನಾವಣೆ ಪ್ರಚಾರ ಮಾಡುವ ವೇಳೆ ಶನಿವಾರ ಹೆಲ್ಮೆಟ್‌ ಧರಿಸದೇ ಬೈಕ್‌ ರ್ಯಾಲಿ ನಡೆಸಿದ್ದರು.

Scroll to load tweet…

ಈ ಫೋಟೋ ಭಾನುವಾರದ ದಿನಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಇದನ್ನು ಗಮನಿಸಿದ ಬೇಡಿ ಅವರು, ‘ಹೆಲ್ಮೆಟ್‌ ಧರಿಸದೇ ಸಂಚಾರ ನಿಯಮ ಉಲ್ಲಂಘಿಸಿದ ಮುಖ್ಯಮಂತ್ರಿ ಮೇಲೆ ಕ್ರಮ ಜರುಗಿಸಿ’ ಎಂದು ಪುದುಚೇರಿ ಪೊಲೀಸ್‌ ಮಹಾನಿರ್ದೇಶಕರಿಗೆ ವಾಟ್ಸಪ್‌ ಸಂದೇಶ ಕಳಿಸಿದ್ದರು.

ಇದರ ಬೆನ್ನಲ್ಲೇ ನಾರಾಯಣಸ್ವಾಮಿ ಅವರು ಟ್ವೀಟರ್‌ನಲ್ಲಿ, ಬೇಡಿ ಅವರು 2017ರಲ್ಲಿ ಹೆಲ್ಮೆಟ್‌ ಧರಿಸದೇ ದ್ವಿಚಕ್ರ ವಾಹನದಲ್ಲಿ ಹಿಂಬದಿಯಲ್ಲಿ ಕುಳಿತು ಸಂಚರಿಸುತ್ತಿರುವ ಫೋಟೋವನ್ನು ಪ್ರಕಟಿಸಿದ್ದು, ‘ಉಪದೇಶ ಮಾಡುವ ಮುನ್ನ ಅದನ್ನು ಪಾಲಿಸಿ’ ಎಂದು ಕಿಚಾಯಿಸಿದ್ದಾರೆ. ಬೇಡಿ ಅವರು ಕುಳಿತಿದ್ದ ವಾಹನದ ಚಾಲಕಿ ಕೂಡ ಹೆಲ್ಮೆಟ್‌ ಧರಿಸಿರಲಿಲ್ಲ.

Scroll to load tweet…