Asianet Suvarna News Asianet Suvarna News

ಶಾಲೆಗಳು ಬದಲಾಗದಿದ್ರೆ ನನ್ನ ಒದ್ದು ಹೊರಹಾಕಿ, ಗುಜರಾತ್ ನಲ್ಲಿ ಗುಡುಗಿದ ಅರವಿಂದ್ ಕೇಜ್ರಿವಾಲ್!

ಒಂದೇ ಒಂದು ಪೇಪರ್ ಲೀಕ್ ಆಗದೇ ರಾಜ್ಯದಲ್ಲಿ ಪರೀಕ್ಷೆಯನ್ನು ನಡೆಸಿ ಎಂದು ನಾನು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಸವಾಲು ಹಾಕುತ್ತೇನೆ. ನನಗೊಂದು ಚಾನ್ಸ್ ಕೊಡಿ. ಈ ಅವಕಾಶದಲ್ಲಿ ಶಾಲೆಗಳನ್ನು ಅಭಿವೃದ್ಧಿ ಮಾಡದೇ ಇದ್ದಲ್ಲಿ ನನ್ನನ್ನು ರಾಜ್ಯದಿಂದ ಒದ್ದು ಹೊರಹಾಕಿ ಎಂದು ಆಪ್ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗುಜರಾತ್ ನಲ್ಲಿ ಹೇಳಿದ್ದಾರೆ.

Kick Me Out If I Dont improve schools says  Aam Aadmi Party chief and delhi CM Arvind Kejriwal in Gujarat san
Author
Bengaluru, First Published May 1, 2022, 7:26 PM IST | Last Updated May 1, 2022, 7:26 PM IST

ಭರೂಚ್ (ಮೇ.1):  ಆಮ್ ಆದ್ಮಿ ಪಕ್ಷದ  (Aam Admi Party) ಮುಖ್ಯಸ್ಥ ಹಾಗೂ ದಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (delhi CM Arvind Kejriwal) ಇಂದು ಗುಜರಾತ್‌ನಲ್ಲಿ (Gujarat ) ಬದಲಾವಣೆಯ ಕುರಿತಾಗಿ ಮಾತನಾಡಿದ್ದಾರೆ. ದೆಹಲಿ (Delhi) ಹಾಗೂ ಇತ್ತೀಚೆಗೆ ಪಂಜಾಬ್ ನಲ್ಲಿ ಭಾರಿ ಮಟ್ಟದಲ್ಲಿ ಯಶಸ್ವಿಯಾಗಿರುವ ಆಡಳಿತ ಮಾದರಿಯನ್ನು ಗುಜರಾತ್ ನಲ್ಲೂ ನೀಡುವ ಬಗ್ಗೆ ಮಾತನಾಡಿದ್ದಾರೆ. ಗುಜರಾತ್ ನ ಭರೂಚ್ ನಲ್ಲಿ (Bharuch) ದೆಹಲಿ ಮಾದರಿಯ ಶಾಲೆಗಳ ಬಗ್ಗೆ ಅವರು ಪ್ರಸ್ತಾಪಿಸಿದರು. ಇದೇ ವೇಳೆ ಗುಜರಾತ್ ನ ಶಾಲೆಗಳ ಸ್ಥಿತಿ ನಿಜಕ್ಕೂ ಕೆಟ್ಟಾಗಿದೆ ಎಂದು ಹೇಳಿದರು.

"ಗುಜರಾತ್‌ನಲ್ಲಿ 6,000 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಇನ್ನೂ ಹಲವು ಶಿಥಿಲಾವಸ್ಥೆಯಲ್ಲಿವೆ. ಲಕ್ಷ ಲಕ್ಷ ಮಕ್ಕಳ ಭವಿಷ್ಯ ಅಸ್ತವ್ಯಸ್ತಗೊಂಡಿದೆ. ನಾವು ಈ ಭವಿಷ್ಯವನ್ನು ಬದಲಾಯಿಸಬಹುದು. ದೆಹಲಿಯಲ್ಲಿ ಇಡೀ ಶಾಲಾ ವ್ಯವಸ್ಥೆಯನ್ನೇ ಬದಲಾಯಿಸಿದ ರೀತಿ ಗುಜರಾತ್ ನಲ್ಲೂ ಮಾಡಬಹುದು' ಎಂದು ಕೇಜ್ರಿವಾಲ್ ಹೇಳಿದ್ದಾರೆ. ಇದೇ ವೇಳೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ, ಗುಜರಾತ್ ನೆಲದಿಂದಲೇ ಅವರಿಗೆ ಸವಾಲು ಎಸೆದರು. "ಗುಜರಾತ್‌ನಲ್ಲಿ ಪರೀಕ್ಷೆ ( Exam ) ವೇಳೆ ಪೇಪರ್ ಸೋರಿಕೆಯಲ್ಲಿ ( Question Paper Leak )  ಬಿಜೆಪಿ ವಿಶ್ವದಾಖಲೆ ಮಾಡುತ್ತಿದೆ. ಪೇಪರ್ ಸೋರಿಕೆಯಾಗದಂತೆ ಒಂದೇ ಪರೀಕ್ಷೆ ನಡೆಸುವಂತೆ ನಾನು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಸವಾಲು ಹಾಕುತ್ತೇನೆ" ಎಂದು ಅವರು ಹೇಳಿದ್ದಾರೆ. 

'ನನಗೆ ಒಂದು ಅವಕಾಶ ನೀಡಿ, ಗುಜರಾತ್ ನಲ್ಲಿ ಶಾಲೆಗಳ ಗುಣಮಟ್ಟವನ್ನು, ಶಾಲೆಗಳ ನೋಟ ಬದಲಾವಣೆ ಮಾಡದೇ ಇದ್ರೆ, ನೀವೇ ನನ್ನನ್ನು ಒದ್ದು ಇಲ್ಲಿಂದ ಹೊರಹಾಕಿ' ಎಂದೂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿಯಲ್ಲಿ 4 ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಂದ ದೆಹಲಿ ಸರ್ಕಾರ ನಡೆಸುವ ಶಾಲೆಗಳಿಗೆ ವರ್ಗಾವಣೆಯಾಗಿದೆ ಎಂದು ಹೇಳಿದ ಅವರು, ದೆಹಲಿಯಲ್ಲಿ ಶ್ರೀಮಂತರು ಮತ್ತು ಬಡವರ ಮಕ್ಕಳು ಒಟ್ಟಿಗೆ ಓದುತ್ತಿದ್ದಾರೆ, ದೆಹಲಿಯಲ್ಲಿ ಈ ಬಾರಿ 99.7% ರಷ್ಟು ಉತ್ತೀರ್ಣರಾಗಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷದಿಂದ ಪಂಜಾಬ್ (Punjab) ರಾಜ್ಯವನ್ನು ವಶಪಡಿಸಿಕೊಂಡಿರುವ ಅಮ್ ಆದ್ಮಿ ಪಾರ್ಟಿ, ಕಳೆದ 27 ವರ್ಷಗಳಿಂದ ಬಿಜೆಪಿ ಆಳ್ವಿಕೆ ನಡೆಸುತ್ತಿರುವ ರಾಜ್ಯದಲ್ಲಿ, ಕಾಂಗ್ರೆಸ್ ನ ಅಧಿಕಾರದಲ್ಲಿರುವ ಬುಡಕಟ್ಟು ಪ್ರದೇಶಗಳನ್ನು ಮೊದಲಿಗೆ ಗುರಿಯಾಗಿಸಿಕೊಂಡಿದ್ದಾರೆ. 2017ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 27 ಬುಡಕಟ್ಟು ಪ್ರಾಬಲ್ಯವಿರುವ ಸ್ಥಾನಗಳ ಪೈಕಿ 15 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ.

ಖಲಿಸ್ತಾನಕ್ಕೆ ಅರವಿಂದ್ ಕೇಜ್ರಿವಾಲ್ ಬೆಂಬಲ ಮತ್ತೊಮ್ಮೆ ಸಾಬೀತು!

ಕಳೆದ ತಿಂಗಳು, ಎಎಪಿ ತನ್ನ ಆಂತರಿಕ ಸಮೀಕ್ಷೆಯು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ಸುಮಾರು 58 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಹೇಳಿದೆ. ಗ್ರಾಮೀಣ ಪ್ರದೇಶಗಳು ಮತ್ತು ನಗರ ಪ್ರದೇಶಗಳಲ್ಲಿ ಕೆಳ ಮತ್ತು ಮಧ್ಯಮ ವರ್ಗದ ಭಾಗಗಳಿಂದ ಮತಗಳು ಬರುವ ಸಾಧ್ಯತೆಯಿದೆ ಎಂದು ಆಪ್ ಸಮೀಕ್ಷೆ ಹೇಳಿದೆ.

Viral Video ನನ್ನಮ್ಮ ರಕ್ತವಾಂತಿ ಮಾಡುತ್ತಿದ್ದಾಳೆ, ಸರ್ಕಾರಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಕೊಳ್ತಿಲ್ಲ!

ಸಮಾವೇಶದಲ್ಲಿ ಕೇಜ್ರಿವಾಲ್ ಅವರು ಗುಜರಾತ್‌ನಲ್ಲಿ 1 ಕೋಟಿಗೂ ಹೆಚ್ಚು ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದರೆ, ದೇಶದ ಇಬ್ಬರು ಶ್ರೀಮಂತರು ಮತ್ತು ಅತ್ಯಂತ ಬಡ ಬುಡಕಟ್ಟು ಜನಾಂಗದವರು ಒಂದೇ ರಾಜ್ಯದಿಂದ ಬಂದವರಾಗಿದ್ದಾರೆ ಎಂದು ಹೇಳಿದರು. ಒಂದೆಡೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಶ್ರೀಮಂತರ ಜೊತೆ ನಿಲ್ಲುವ ಮೂಲಕ ಅವರನ್ನು ಮತ್ತಷ್ಟು ಶ್ರೀಮಂತರನ್ನಾಗಿ ಮಾಡುತ್ತಿದ್ದಾರೆ. ಆದರೆ, ನಾನು ಬಡವರ ಪರವಾಗಿ ನಿಲ್ಲುತ್ತೇನೆ. ಅವಕಾಶ ನೀಡಿ ಎಂದರು.

Latest Videos
Follow Us:
Download App:
  • android
  • ios