Asianet Suvarna News Asianet Suvarna News

Viral Video ನನ್ನಮ್ಮ ರಕ್ತವಾಂತಿ ಮಾಡುತ್ತಿದ್ದಾಳೆ, ಸರ್ಕಾರಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಕೊಳ್ತಿಲ್ಲ!

"ನಾನು ನಿನ್ನೆ ಸಂಜೆ 4:30 ಕ್ಕೆ ಮಂಗೋಲ್ಪುರಿಯ ಸಂಜಯ್ ಗಾಂಧಿ ಆಸ್ಪತ್ರೆಗೆ ನನ್ನ ತಾಯಿಯನ್ನು ಕರೆತಂದಿದ್ದೇನೆ. ಆದರೆ ಇಲ್ಲಿ ವೈದ್ಯರು ಅವಳನ್ನು ಸೇರಿಸಿಕೊಳ್ಳಲು ನಿರಾಕರಿಸಿದರು. ಅದರ ಬದಲು ಕೆಲವು ಔಷಧಿಗಳನ್ನು ಬರೆದು ನಮ್ಮನ್ನು ಆಸ್ಪತ್ರೆಯಿಂದ ತೆರಳುವಂತೆ ಹೇಳಿದ್ದರು ಎಂದು ವೈರಲ್ ಆಗಿರುವ ವೀಡಿಯೊದಲ್ಲಿ ವ್ಯಕ್ತಿ ಮಾತನಾಡಿದ್ದಾರೆ.

Delhi man accuses state govt hospital of medical negligence says My mother was vomiting blood but they refused to admit her san
Author
Bengaluru, First Published Apr 28, 2022, 11:30 PM IST

ನವದೆಹಲಿ (ಏ. 28): ಅರವಿಂದ್ ಕೇಜ್ರಿವಾಲ್ (Arvind Kejriwal) ನೇತೃತ್ವದ ಸರ್ಕಾರವು ರಾಜ್ಯ ಸರ್ಕಾರಿ ಆಸ್ಪತ್ರೆಗಳಲ್ಲಿ (state govt hospital) ಸರಿಯಾದ ವೈದ್ಯಕೀಯ ಸೌಲಭ್ಯಗಳನ್ನು ಒಡಗಿಸುತ್ತಿಲ್ಲ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಮಾಡಿರುವ ವಿಡಿಯೋ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ.  ದೆಹಲಿಯ ಸರ್ಕಾರಿ ಆಸ್ಪತ್ರೆಗಳು ರೋಗಿಗಳನ್ನು ಶೋಷಿಸುತ್ತಿವೆ ಮತ್ತು ಅವರಿಗೆ ಸರಿಯಾದ ವೈದ್ಯಕೀಯ ಗಮನವನ್ನು ನೀಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಸಿಎಂ ಅರವಿಂದ್ ಕೇಜ್ರಿವಾಲ್ ಉಚಿತ ಸೇವೆಗಳ ಹೆಸರಿನಲ್ಲಿ ನಾಗರಿಕರ ಜೀವನವನ್ನು ಹಾಳು ಮಾಡಿದ್ದಾರೆ ಎಂದು ಬಿಜೆಪಿ ದೆಹಲಿಯ ವಕ್ತಾರ ನೀತು ಸಿಂಗ್ (Delhi BJP spokesperson Neetu Singh) ಅವರು ಭೀಕರ ಘಟನೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. “ರೋಗಿಗಳಿಗೆ ಚಿಕಿತ್ಸೆ ಸಿಗದ ದೆಹಲಿ ಸರ್ಕಾರದ ಸಂಜಯ್ ಗಾಂಧಿ ಆಸ್ಪತ್ರೆಯ ಸ್ಥಿತಿಯನ್ನು ನೋಡಿ. ಕೇಜ್ರಿವಾಲ್ ಉಚಿತ ಸೇವೆಗಳ ಹೆಸರಿನಲ್ಲಿ ನಾಗರಿಕರ ಜೀವನವನ್ನು ಹಾಳುಮಾಡಿದ್ದಾರೆ, ”ಎಂದು ಅವರು ಏಪ್ರಿಲ್ 28 ರಂದು ಟ್ವೀಟ್ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.

ವಿಡಿಯೋದಲ್ಲಿರುವ ವ್ಯಕ್ತಿ ತನ್ನ ತಾಯಿಯ ಸಾವಿಗೆ ರಾಜ್ಯ ಸರ್ಕಾರವೇ ಹೊಣೆ ಎಂದು ಆರೋಪಿಸಿದ್ದಾನೆ. ತಾಯಿ ತೀವ್ರ ಅಸ್ವಸ್ಥರಾಗಿದ್ದು, ಅವರು ರಕ್ತವಾಂತಿ ಮಾಡುತ್ತಿದ್ದಾರೆ ಎಂದರು. "ನಾನು ನಿನ್ನೆ ಸಂಜೆ 4:30 ಕ್ಕೆ ಮಂಗೋಲ್ಪುರಿಯ ಸಂಜಯ್ ಗಾಂಧಿ ಆಸ್ಪತ್ರೆಗೆ ನನ್ನ ತಾಯಿಯನ್ನು ಕರೆತಂದಿದ್ದೇನೆ ಆದರೆ ಇಲ್ಲಿ ವೈದ್ಯರು ಅವಳನ್ನು ಸೇರಿಸಿಕೊಳ್ಳಲು ನಿರಾಕರಿಸಿದರು. ಬದಲಿಗೆ ಕೆಲವು ಔಷಧಿಗಳನ್ನು ಬರೆದುಕೊಟ್ಟು, ಆಸ್ಪತ್ರೆಯಿಂದ ತೆರಳುವಂತೆ ಹೇಳಿದ್ದರು' ಎಂದಿದ್ದಾರೆ.


“ಇಂದು ಬೆಳಿಗ್ಗೆ, ನನ್ನ ತಾಯಿ ಮತ್ತೆ ರಕ್ತವಾಂತಿ ಮಾಡಿಕೊಂಡರು. ಅವಳು ನಿಶಕ್ತರಾಗಿದ್ದರು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆತಂದರೂ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ನನ್ನ ತಾಯಿಯ ಸಾವಿಗೆ ಯಾರು ಹೊಣೆ? ಈ ವೈದ್ಯರನ್ನು ಅಮಾನತುಗೊಳಿಸಬೇಕು” ಎಂದು ಅವರು ವೀಡಿಯೊದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ನಡೆಸುತ್ತಿರುವ ಆಸ್ಪತ್ರೆಯು ಸಂಜೆ 4:30 ರ ನಂತರ ರೋಗಿಯನ್ನು ದಾಖಲಿಸಲು ನಿರಾಕರಿಸಿದೆ ಎಂದು ಸಾಬೀತುಪಡಿಸುವ ದಾಖಲೆಯನ್ನು ಅವರು ವಿಡಿಯೋದಲ್ಲಿ ತೋರಿಸಿದ್ದಾರೆ. ಆಸ್ಪತ್ರೆಯ ವೈದ್ಯಕೀಯ ನಿರ್ಲಕ್ಷ್ಯವನ್ನು ಆರೋಪಿಸಿದ ಅವರು, ದೆಹಲಿ ಸರ್ಕಾರ ತನ್ನ ತಾಯಿಯನ್ನು ಕೊಂದಿದೆ ಎಂದು ಹೇಳಿದರು. 'ಈ ಆಸ್ಪತ್ರೆಯಲ್ಲಿ  ನಮಗೆ ಸರಿಯಾದ ವೈದ್ಯಕೀಯ ಚಿಕಿತ್ಸೆಯೂ ಸಿಗುತ್ತಿಲ್ಲ, ಉತ್ತಮ ಸೌಲಭ್ಯಗಳೂ ಇಲ್ಲ. ನನ್ನ ತಾಯಿಯ ಸಾವಿಗೆ ಯಾರು ಜವಾಬ್ದಾರರು, ವೈದ್ಯರೇ ಅಥವಾ ರಾಜ್ಯವೇ?' , ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಭಾರತವನ್ನ ಕೆಣಕುವವರ ಪಾಲಿಗೆ ಫಿಯರ್​ಲೆಸ್ ಫಾರಿನ್ ಮಿನಿಸ್ಟರ್ ಎಸ್‌ ಜೈ ಶಂಕರ್!

2020 ರ ದೆಹಲಿ ಚುನಾವಣೆಯ ಸಂದರ್ಭದಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ನಾಗರಿಕರಿಗೆ ಉತ್ತಮ ಆರೋಗ್ಯದ ಭರವಸೆ ನೀಡಿದ್ದರು ಮತ್ತು ದೆಹಲಿಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ ಮತ್ತು ಔಷಧಿಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಭರವಸೆ ನೀಡಿದ್ದರು ಎಂಬುದು ಗಮನಿಸಬೇಕಾದ ಸಂಗತಿ. ಎಂಆರ್ ಐ, ಸಿಟಿ ಸ್ಕ್ಯಾನ್, ಅಲ್ಟ್ರಾಸೌಂಡ್ ಸೇರಿದಂತೆ ವೈದ್ಯಕೀಯ ಪರೀಕ್ಷೆಗಳು ಮತ್ತು 25,000 ರೂ.ಗಿಂತ ಹೆಚ್ಚಿನ ವೆಚ್ಚದ ಪಿಇಟಿ ಸ್ಕ್ಯಾನ್ ಕೂಡ ಉಚಿತವಾಗಿರುತ್ತದೆ ಎಂದು ಅವರು ಘೋಷಿಸಿದ್ದರು. ಅಲ್ಲದೆ, ಇತ್ತೀಚೆಗೆ ಪಂಜಾಬ್ ಚುನಾವಣೆಯ ಸಂದರ್ಭದಲ್ಲಿ, ಪಂಜಾಬ್ ರಾಜ್ಯದಲ್ಲಿ ಎಎಪಿ ‘ದೆಹಲಿ ಮಾದರಿ’ ಆರೋಗ್ಯ ರಕ್ಷಣೆಯನ್ನು ಜಾರಿಗೆ ತರಲಿದೆ ಎಂದು ಅವರು ಹೇಳಿದ್ದರು.

ಮೋದಿ ಕೊರೊನಾ ವಾರ್ನಿಂಗ್: ಕೋವಿಡ್ 4ನೇ ಅಲೆ ತಡೆಯಲು ಪ್ರಧಾನಿ 3T ಸೂತ್ರ!

ಹಾಗಿದ್ದರೂ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾಡಿದ ಹೇಳಿಕೆಗಳು ಭಾಗಶಃ ನಿಜ ಎಂದು ಸತ್ಯ ಪರಿಶೀಲನಾ ವರದಿಗಳು ಉಲ್ಲೇಖಿಸಿವೆ. ದೆಹಲಿಯ ಎಲ್ಲಾ ರಾಜ್ಯ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗಿದ್ದರೂ, ಸರ್ಕಾರಿ ಆಸ್ಪತ್ರೆಗಳು ಹೆಚ್ಚಾಗಿ ಕಿಕ್ಕಿರಿದಿರುವುದರಿಂದ ನಾಗರಿಕರು ತೊಂದರೆ ಅನುಭವಿಸಬೇಕಾಗಿದೆ ಎಂದು ಹೇಳಲಾಗಿದೆ.

Follow Us:
Download App:
  • android
  • ios