ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಇದೀಗ ಕೆನಾಡದಿಂದ ಮತ್ತೊಂದು ಎಚ್ಚರಿಕೆ ವಿಡಿಯೋ ಹರಿಬಿಟ್ಟಿದ್ದಾನೆ. ನ.19 ರಂದು ಏರ್ ಇಂಡಿಯಾ ವಿಮಾನ ಸ್ಫೋಟಿಸುವುದಾಗಿ ಎಚ್ಚರಿಸಿದ್ದಾನೆ. ಸಿಖ್ ಸಮುದಾಯ ಏರ್ ಇಂಡಿಯಾ ವಿಮಾನ ಹತ್ತದಂತೆ ಸೂಚಿಸಿದ್ದಾನೆ. ಇದೇ ವಿಡಿಯೋದಲ್ಲಿ ದೆಹಲಿ ಜನತೆಗೂ ಮತ್ತೊಂದು ಎಚ್ಚರಿಕೆ ನೀಡಿದ್ದಾನೆ. 

ನವದೆಹಲಿ(ನ.04) ಖಲಿಸ್ತಾನಿ ಉಗ್ರರು ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಒಂದೊಂದೆ ಬೆದರಿಕೆ ಹಾಕುತ್ತಿದ್ದಾರೆ. ಕೆನಾಡದಲ್ಲಿ ಕುಳಿತಿರುವ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಮತ್ತೊಂದು ಎಚ್ಚರಿಕೆ ವಿಡಿಯೋ ಪೋಸ್ಟ್ ಮಾಡಿದ್ದಾನೆ. ನವೆಂಬರ್ 19 ರಂದು ಏರ್ ಇಂಡಿಯಾ ವಿಮಾನ ಸ್ಫೋಟಿಸುವುದಾಗಿ ಗುರುಪತ್ವಂತ್ ಎಚ್ಚರಿಸಿದ್ದಾನೆ. ನವೆಂಬರ್ 19 ರಂದು ಸಿಖ್ ಸಮುದಾಯದ ಯಾರೂ ಕೂಡ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಡಿ. ಅದೇ ದಿನ ಏರ್ ಇಂಡಿಯಾ ವಿಮಾನದ ಮೇಲೆ ದಾಳಿ ನಡೆಯಲಿದೆ ಎಂದು ಎಚ್ಚರಿಸಿದ್ದಾನೆ.

ನವೆಂಬರ್ 19 ರಂದು ಏರ್ ಇಂಡಿಯಾ ವಿಮಾನದ ಮೇಲೆ ರೋಬೋಟ್ ರಾಕೆಟ್ ಮೂಲಕ ದಾಳಿ ನಡೆಸಲಾಗುತ್ತದೆ. ಏರ್ ಇಂಡಿಯಾ ವಿಮಾನವನ್ನು ಸ್ಪೋಟಿಸುತ್ತೇವೆ. ಹೀಗಾಗಿ ಸಿಖ್ ಸಮುದಾಯದವರು ಏರ್ ಇಂಡಿಯಾ ಪ್ರಯಾಣ ಮಾಡಬೇಡಿ. ನವೆಂಬರ್ 19 ರಂದು ಅತೀ ದೊಡ್ಡ ಅವಘಡ ನಡೆಯಲಿದೆ. ಇದೇ ದಿನ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಂದ್ ಆಗಿರುತ್ತದೆ. ಯಾವುದೇ ಸೇವೆ ನೀಡುವುದಿಲ್ಲ ಎಂದು ಗುರಪತ್ವಂತ್ ಸಿಗ್ ಪನ್ನುನ್ ವಿಡಿಯೋದಲ್ಲಿ ಹೇಳಿದ್ದಾನೆ.

ರಾಜತಾಂತ್ರಿಕ ಬಿಕ್ಕಟ್ಟಿನ ನಂತರ ಕೆನಡಾ ಜನರಿಗೆ ವೀಸಾ ಸೇವೆ ಮರು ಆರಂಭಿಸಿದ ಭಾರತ

ಭಾರತದ ಅರ್ಥವ್ಯವಸ್ಥೆಯನ್ನು ಹಾಳುಮಾಡುತ್ತೇವೆ. ಭಾರತಕ್ಕೆ ಸರಿಯಾದ ಹಾಗೂ ಮೇಲೆಳಲು ಸಾಧ್ಯವಾಗದ ಪೆಟ್ಟು ನೀಡುತ್ತೇವೆ. ಭಾರತದ ಸೊಕ್ಕು ಮುರಿದು ಸಿಖ್ ಸಮುದಾಯದ ಅಧಿಪತ್ಯ ಸ್ಥಾಪನೆಯಾಗಲಿದೆ ಎಂದು ಗುರುಪತ್ವಂತ್ ಸಿಂಗ್ ಪನ್ನುನ್ ಹೇಳಿದ್ದಾನೆ. 

Scroll to load tweet…

ಇತ್ತೀಚೆಗೆ ಐಸಿಸಿ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯ ಆಯೋಜಿಸಲು ಬಿಡುವುದಿಲ್ಲ. ಕ್ರೀಡಾಂಗಣದ ಮೇಲೆ ಖಲಿಸ್ತಾನಿ ಸದಸ್ಯರು ದಾಳಿ ಮಾಡುತ್ತಾರೆ ಎಂದು ಬೆದರಿಕೆ ಹಾಕಿದ್ದ. ಅ.5ರಂದು ಅಹಮದಾಬಾದ್‌ನಲ್ಲಿ ಆರಂಭವಾಗುವುದು ವಿಶ್ವಕಪ್‌ ಕ್ರಿಕೆಟ್‌ ಅಲ್ಲ. ವಿಶ್ವ ಟೆರರ್‌ ಕಪ್‌. ಅಂದು ಸಿಖ್‌ ಫಾರ್‌ ಜಸ್ಟಿಸ್‌ನ ಕಾರ್ಯಕರ್ತರು ಅಹಮದಾಬಾದ್‌ ಸ್ಟೇಡಿಯಂಗೆ ಖಲಿಸ್ತಾನಿ ಧ್ವಜದೊಂದಿಗೆ ದಾಳಿ ಮಾಡಲಿದ್ದಾರೆ. ನಿಜ್ಜರ್‌ ಹತ್ಯೆಗೆ ನಾವು ಪ್ರತೀಕಾರ ತೆಗೆದುಕೊಳ್ಳಲಿದ್ದೇವೆ. ನಾವು ನಿಮ್ಮ ಬುಲೆಟ್‌ ಬದಲಾಗಿ ಬ್ಯಾಲೆಟ್‌ ಬಳಸಲಿದ್ದೇವೆ; ನಿಮ್ಮ ವಯಲೆನ್ಸ್‌ಗೆ ಪ್ರತಿಯಾಗಿ ವೋಟ್‌ ಬಳಸಲಿದ್ದೇವೆ. ನೆನಪಿಡಿ ಅ.5 ವಿಶ್ವಕಪ್‌ ಕ್ರಿಕೆಟ್‌ನ ಆರಂಭ ಅಲ್ಲ, ವಿಶ್ವ ಟೆರರ್‌ ಕಪ್‌ನ ಆರಂಭ’ ಎಂದು ಎಚ್ಚರಿಸಲಾಗಿತ್ತು.

ಹಮಾಸ್‌ ರೀತಿಯಲ್ಲೇ ಭಾರತದ ಮೇಲೆ ದಾಳಿ ಮಾಡ್ತೇವೆ, ಖಲಿಸ್ತಾನಿ ನಾಯಕ ಗುರುಪತ್ವಂತ್‌ ಪನ್ನು ಎಚ್ಚರಿಕೆ!

ಇದೀಗ ವಿಮಾನ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ನಿಜ್ಜರ್ ಸೇರಿದಂತೆ ಹಲವು ಖಲಿಸ್ತಾನಿ ಉಗ್ರರು ಕೆನಾಡದಲ್ಲಿ ಬಲಿಯಾಗಿದ್ದಾರೆ. ಇದಕ್ಕೆ ಪ್ರತೀಕಾರ ತೀರಿಸಲು ಖಲಿಸ್ತಾನಿ ಉಗ್ರ ಸಂಘಟನೆ ಹವಣಿಸುತ್ತಿದೆ.