ಪ್ರತ್ಯೇಕ ಕಾಶ್ಮೀರ ಹೋರಾಟಕ್ಕೆ ಬೆಂಬಲ ನೀಡಿದ್ದ ಕೆಫ್‌ಸಿ, ಹ್ಯುಂಡೈ ಬಾಯ್‌ಕಾಟ್ ಅಭಿಯಾನದ ಬೆನ್ನಲ್ಲೇ ಕ್ಷಮೆ ಕೇಳಿದ KFC ಹ್ಯುಂಡೈ ಬೆನ್ನಲ್ಲೇ KFC ಯಿಂದ ಕ್ಷಮೆ ಯಾಚನೆ ಏನಿದು ಹ್ಯುಂಡೈ, ಕೆಎಫ್‌ಸಿ ಸ್ವತಂತ್ರಕ ಕಾಶ್ಮೀರ ವಿವಾದ ಪ್ರಕರಣ?

ನವದೆಹಲಿ(ಫೆ.07): ಪ್ರತ್ಯೇಕ ಕಾಶ್ಮೀರದ(Kashmir) ಕಿಡಿ ಹೊತ್ತಿಸಿದ ಹ್ಯುಂಡೈ, ಕೆಎಫ್‌ಸಿ ಇದೀಗ ದಂಡ ತೆತ್ತಿದೆ. ಭಾರತದಲ್ಲಿ ಬಾಯ್‌ಕಾಟ್ ಅಭಿಯಾನದಿಂದ ಬೆಚ್ಚಿ ಬಿದ್ದ ಹ್ಯುಂಡೈ ಕ್ಷಮೆ ಕೇಳಿ ಭಾರತದ ಸೌರ್ವಭೌಮಕ್ಕೆ ಧಕ್ಕೆಯಾಗಂತೆ ನೋಡಿಕೊಳ್ಳುವುದಾಗಿ ಹೇಳಿತ್ತು. ಇದರ ಬೆನ್ನಲ್ಲೇ ಇದೇ ಕಳೆದ ವರ್ಷ ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಿ ಟ್ವೀಟ್ ಮಾಡಿದ್ದ ಕೆಎಫ್‌ಸಿ(KFC) ವರ್ಷದ ಬಳಿಕ ಭಾರತೀಯರಲ್ಲಿ ಕ್ಷಮೆ ಯಾಚಿಸಿದೆ. ಪ್ರತ್ಯೇಕ ಕಾಶ್ಮೀರ ಹೋರಾಟ ಬೆಂಬಲಿಸಿ 202ರ ಫೆಬ್ರವರಿ 5 ರಂದು ಟ್ವೀಟ್ ಮಾಡಿದ್ದ KFC ಇದೀಗ ಬಾಯ್‌ಕಾಟ್ ಅಭಿಯಾನದಿಂದ ಎಚ್ಚೆತ್ತುಕೊಂಡು ಕ್ಷಮೆ(Apology) ಕೇಳಿದೆ.

ಟ್ವಿಟರ್ ಮೂಲಕ ಕೆಎಫ್‌ಸಿ ಭಾರತೀಯರಲ್ಲಿ(India) ಕ್ಷಮೆ ಯಾಚಿಸಿದೆ. ದೇಶದ ಹೊರಗಿನ KFC ಸಾಮಾಜಿಕ ಮಾಧ್ಯಮ ಖಾತೆ ಮಾಡಿರುವ ಪೋಸ್ಟ್‌ಗೆ ನಾವು ಕ್ಷಮೆ ಯಾಚಿಸುತ್ತಿದ್ದೇವೆ. ಭಾರತವನ್ನು ಅತ್ಯಂತ ಗೌರವಿಸುತ್ತೇವೆ. ಎಲ್ಲಾ ಭಾರತೀಯರಿಗೆ ಹೆಮ್ಮೆಯಿಂದೆ ಸೇವೆ ಸಲ್ಲಿಸಿರುವ ಬದ್ಧತೆ ಮುಂದುವರಿಯಲಿದೆ ಎಂದು ಭಾರತದ KFC ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕ್ಷಮೆ ಹೇಳಿದೆ.

Scroll to load tweet…

Hyundai India apology ಬಾಯ್‌ಕಾಟ್ ಟ್ರೆಂಡಿಂಗ್ ಬೆನ್ನಲ್ಲೇ ಕ್ಷಮೆ ಕೇಳಿದ ಹ್ಯುಂಡೈ ಇಂಡಿಯಾ!

2021ರ ಫೆಬ್ರವರಿ 5 ರಂದು ಪಾಕಿಸ್ತಾನ KFC ಕಾಶ್ಮೀರ ಪ್ರತ್ಯೇಕಿಸುವ ಕುರಿತು ಟ್ವೀಟ್ ಮಾಡಿತ್ತು. ಆದರೆ 2022ರ ಫೆೆಬ್ರವರಿ 5 ರಂದು ಪಾಕಿಸ್ತಾನ ಹ್ಯುಂಡೈ ಮಾಡಿದ ಕಾಶ್ಮೀರ ಸ್ವತಂತ್ರ ಟ್ವೀಟ್‌ನಿಂದ ಇದೀಗ KFCಗೆ ಸಂಕಷ್ಟ ಎದುರಾಗಿದೆ. ಕಳೆದೊಂದು ವರ್ಷ ಬಚಾವ್ ಆಗಿದ್ದ ಕೆಎಪ್‌ಸಿ ಇದೀಗ ಬಹಿಷ್ಕಾರ ಅಭಿಯಾನದ ಬೆಂಕಿಗೆ ತುತ್ತಾಗಿದೆ. ಹೀಗಾಗಿ ಒಂದು ವರ್ಷದ ಬಳಿಕ ಇದೀಗ KFC ಕ್ಷಮೆ ಯಾಚಿಸುವ ಪರಿಸ್ಥಿತಿ ಎದುರಾಗಿದೆ. ಈ ಮೂಲಕ ಭಾರತೀಯರ ಆಕ್ರೋಶವನ್ನು ತಣಿಸುವ ಯತ್ನ ಮಾಡಿದೆ.

ಏನಿದು ಪ್ರಕರಣ:
ಭಾರತದಲ್ಲಿ 2-3 ದಿನಗಳಿಂದ ಬಾಯ್‌ಕಾಟ್ ಅಭಿಯಾನ(Boycott Trend) ಭಾರಿ ಟ್ರೆಂಡ್ ಆಗಿದೆ. ಮೊದಲು ಹ್ಯುಂಡೈ(Boycott Hyundai), ಬಳಿಕ ಕಿಯಾ(Kia) ಹಾಗೂ ಇದೀಗ ಕೆಎಫ್‌ಸಿ(Boycott KFC) ಸರದಿ. ಪಾಕಿಸ್ತಾನದ ಹ್ಯುಂಡೈ ಕಾಶ್ಮೀರ(Free Kashmir) ಪ್ರತ್ಯೇಕ ಹೋರಾಟವನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ(Social Media) ಪೋಸ್ಟ್ ಮಾಡಿತ್ತು. ಇದು ಭಾರತದಲ್ಲಿ ಭಾರಿ ಕೋಲಾಹಲ ಸೃೃಷ್ಟಿಸಿತ್ತು. ಫೆಬ್ರವರಿ 5ನೇ ದಿವನ್ನು ಪಾಕಿಸ್ತಾನ ಕಾಶ್ಮೀರ ದಿನ(kashmir solidarity day) ಎಂದು ಆಚರಿಸುತ್ತಿದೆ. ಈ ಮೂಲಕ ಕಾಶ್ಮೀರ ಪ್ರತ್ಯೇಕತೆ ಹೋರಾಟವನ್ನು ಪಾಕಿಸ್ತಾನ ಪ್ರತಿ ವರ್ಷ ತುಪ್ಪ ಸುರಿಯುವ ಕೆಲಸ ಮಾಡುತ್ತದೆ. ಕಾಶ್ಮೀರ ದಿನ ಹಾಗೂ ಪಾಕಿಸ್ತಾನಿಗಳನ್ನು ಒಲೈಕೆ ಮಾಡಲು ಹ್ಯುಂಡೈ, ಕೆಎಫ್‌ಸಿ ಸ್ವತಂತ್ರ ಕಾಶ್ಮೀರ ಬೆಂಬಲಿಸಿ ಟ್ವೀಟ್ ಮಾಡಿತ್ತು. ಹ್ಯುಂಡೈ ಇದೆ ಫೆಬ್ರವರಿ 5 ರಂದು ಟ್ವೀಟ್ ಮಾಡಿದ್ದರೆ, ಕೆಎಪ್‌ಸಿ ಕಳೆದ ವರ್ಷ ಫೆಬ್ರವರಿ 5 ರಂದು ಟ್ವೀಟ್ ಮಾಡಿತ್ತು.

#BoycottHyundai ಕಾಶ್ಮೀರ ಪ್ರತ್ಯೇಕಿಸುವ ಕುರಿತು ಹ್ಯುಂಡೈ ಟ್ವೀಟ್, ಪ್ರಶ್ನಿಸಿದ ಭಾರತೀಯರ ಖಾತೆ ಬ್ಲಾಕ್!

ಪಾಕಿಸ್ತಾನ(Pakistan) ಕೆಫ್‌ಸಿ ಕಾಶ್ಮೀರ ದಿನ ಕುರಿತು, ನಾವು ಪಾಕಿಸ್ತಾನದ ಕಾಶ್ಮೀರ ದಿನದ ಜೊತೆ ನಿಲ್ಲುತ್ತೇವೆ. ಇಷ್ಟೇ ಅಲ್ಲ ಕಾಶ್ಮೀರಿಗರ ಸ್ವಾತಂತ್ರ ಅವಶ್ಯಕತೆ ಇದೆ ಎಂದು ಪ್ರತ್ಯೇಕ ಕಾಶ್ಮೀರ ಕಿಡಿ ಹೊತ್ತಿಸಿದೆ. ಈ ಮೂಲಕ ಪಾಕಿಸ್ತಾನ ಜನರಲ್ಲಿ ಅತ್ಯಂತ ದೇಶಭಕ್ತ ಸಂಸ್ಥೆ ಎಂದು ಬಿಂಬಿಸಲು ಹೊರಟಿತ್ತು. ಇತ್ತ ಹ್ಯುಂಡೈ ಪಾಕಿಸ್ತಾನ ಕೂಡ ಕಾಶ್ಮೀರದಲ್ಲಿ ಸಹೋದರರು ಕಾಶ್ಮೀರ ಸ್ವತಂತ್ರಕ್ಕಾಗಿ ನಡೆಸಿದ ಹೋರಾಟವನ್ನು ಸ್ಮರಿಸೋಣ, ಅವರ ತ್ಯಾಗ, ಬಲಿದಾನ ಹಾಗೂ ಮುಂದಿನ ಹೋರಾಟಕ್ಕೆ ಬೆಂಬಲವಾಗಿ ನಿಲ್ಲೋಣ ಎಂದು ಹ್ಯುಂಡೈ ಪಾಕಿಸ್ತಾನ ಟ್ವೀಟ್ ಮಾಡಿತ್ತು.

ಇದೇ ರೀತಿ ಕಾಶ್ಮೀರ ದಿನ ಹಾಗೂ ಕಾಶ್ಮೀರ ಪ್ರತ್ಯೇಕತೆಯನ್ನು ಬೆಂಬಲಿಸಿ ಕಿಯಾ, ಫಿಜ್ಜಾ ಹಟ್ ಕೂಡ ಟ್ವೀಟ್ ಮಾಡಿದೆ. ಈ ಪೋಸ್ಟ್ ಬೆನ್ನಲ್ಲೇ ಭಾರತೀಯರು ವಿಶ್ವದ ಹಾಗೂ ಭಾರತದಲ್ಲಿರುವ ಹ್ಯುಂಡೈ, ಕೆಎಫ್‌ಸಿ, ಕಿಯಾ ಗಮನಕ್ಕೆ ತಂದಿತ್ತು. ಆದರೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇಷ್ಟೇ ಅಲ್ಲ ಹ್ಯುಂಡೈ ಕೆಲ ಭಾರತೀಯರ ಖಾತೆಗಳನ್ನೇ ಬ್ಲಾಕ್ ಮಾಡಿತ್ತು. ಹೀಗಾಗಿ ಭಾರತದಲ್ಲಿ ಬಾಯ್‌ಕಾಟ್ ಅಭಿಯಾನ ಆರಂಭಿಸಲಾಗಿತ್ತು.

ಭಾರತದ ಅಂಗವಾಗಿ ಕಾಶ್ಮೀರವನ್ನು ಪ್ರತ್ಯೇಕಿಸುವ, ಕಾಶ್ಮೀರದಲ್ಲಿ ರಕ್ತ ಹರಿಸುವ ಕಾರ್ಯಕ್ಕೆ ಪ್ರಚೋದನೆ, ಬೆಂಬಲ ನೀಡುವ ಕಾರ್ಯಕ್ಕೆ ಈ ಸಂಸ್ಥೆಗಳು ಕುಮ್ಮುಕ್ಕು ನೀಡಿದೆ. ಹೀಗಾಗಿ ಭಾರತದಲ್ಲಿ ಈ ಸಂಸ್ಥೆಗಳ ಉತ್ಪನ್ನಗಳನ್ನು ಬಹಿಷ್ಕರಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಲಾಗಿತ್ತು. ಈ ಅಭಿಯಾನ ಭಾರಿ ಟ್ರೆಂಡಿಂಗ್ ಆಗಿತ್ತು.

ಇದರ ಬೆನ್ನಲ್ಲೈ ಹ್ಯುಂಡೈ ಕ್ಷಮೆ ಕೇಳಿ ಪರಿಸ್ಥಿತಿಯನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿತ್ತು. ಇದೀಗ ಕೆಎಫ್‌ಸಿ ಇಂಡಿಯಾ ಕೂಡ ಭಾರತೀಯರಲ್ಲಿ ಕ್ಷಮೆ ಕೇಳಿದೆ. ಆದರೆ ಪರಿಸ್ಥಿತಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಕಾರಣ ಇತರ ಕೆಲ ಕಂಪನಿಗಳು ಕಾಶ್ಮೀರ ಪ್ರತ್ಯೇಕತೆಗೆ ಬೆಂಬಲ ನೀಡಿದೆ. ಮೂಲ ಸಂಸ್ಥೆ ಇದರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಬಾಯ್‌ಕಾಟ್ ಅಭಿಯಾನ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ.