Asianet Suvarna News Asianet Suvarna News

ಪುಲ್ವಾಮಾ ದಾಳಿ ಸಂಚುಕೋರ ಸಮೀರ್‌ ದಾರ್‌ ಸತ್ತಿ​ಲ್ಲ!

* 40 ಸಿಆರ್‌ಪಿಎಫ್‌ ಯೋಧರನ್ನು ಬಲಿ ಪಡೆದ ಪುಲ್ವಾಮ ದಾಳಿ

* ಪುಲ್ವಾಮ ದಾಳಿ ಸಂಚುಕೋರ ಸಮೀರ್‌ ದಾರ್‌ ಸತ್ತಿ​ಲ್ಲ

* ಭದ್ರತಾ ಪಡೆ​ಗಳ ಮೂಲ​ಗಳ ಹೇಳಿ​ಕೆ

* ಜು.31ರಂದು ಸತ್ತಿ​ದ್ದಾನೆ ಎನ್ನ​ಲಾ​ಗಿ​ತ್ತು

Key Pulwama conspirator Sameer Dar thought to be killed, is alive: Fresh intel pod
Author
Bangalore, First Published Aug 26, 2021, 9:01 AM IST
  • Facebook
  • Twitter
  • Whatsapp

ನವದೆಹಲಿ(ಆ.26): 40 ಸಿಆರ್‌ಪಿಎಫ್‌ ಯೋಧರನ್ನು ಬಲಿ ಪಡೆದ ಪುಲ್ವಾಮ ದಾಳಿಯ ಸಂಚುಕೋರರಾದ ಲಂಬೂ ಹಾಗೂ ಸಮೀರ್‌ ದಾರ್‌ ಜುಲೈ 31ರಂದು ಯೋಧರ ಗುಂಡಿಗೆ ಬಲಿಯಾದರು ಎಂದು ಭಾವಿಸಲಾಗಿತ್ತು. ಆದರೆ ದಾಳಿಯ ಪ್ರಮುಖ ರುವಾರಿ ಸಮೀರ್‌ ದಾರ್‌ ಬದುಕಿರುವುದಾಗಿ ಭದ್ರತಾ ಪಡೆ ಮೂಲ​ಗ​ಳು ಹೇಳಿದೆ.

ಜುಲೈ 31ರಂದು ಯೋಧರ ಗುಂಡಿಗೆ ಬಲಿಯಾದ ಇಬ್ಬರನ್ನು ಜೈಶ್‌-ಎ-ಮೊಹಮದ್‌ ಭಯೋತ್ಪಾದನಾ ಗುಂಪಿಗೆ ಸೇರಿದ ಮಹಮದ್‌ ಇಸ್ಮಾಲ್‌ ಅಲ್ವಿ ಅಲಿಯಾಸ್‌ ಲಂಬೂ ಹಾಗೂ ಸಮೀರ್‌ ದಾರ್‌ ಎಂದು ಗುರುತಿಸಲಾಗಿತ್ತು. ಆದರೆ ಲಂಬೂವಿನ ಜೊತೆ ಸಾವೀಗೀಡಾದದ್ದು ಬೇರೆ ವ್ಯಕ್ತಿ ಎಂಬುದು ಈಗ ಗೊತ್ತಾ​ಗಿ​ದೆ.

\ದಾಳಿಯ ರುವಾರಿ ಸಮೀರ್‌ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿರುವುದಾಗಿ ತಿಳಿದುಬಂದಿದೆ. ಜೈಶ್‌ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವುದರಿಂದ ಸಮೀರ್‌ ದಾರ್‌ ಅತಿ ಅಪಾಯಕಾರಿ ವ್ಯಕ್ತಿ ಎಂದು ಸೈನ್ಯದ ಅಧಿಕಾರಿಗಳು ಹೇಳಿದ್ದಾರೆ.

Follow Us:
Download App:
  • android
  • ios