Asianet Suvarna News Asianet Suvarna News

Conversion Case: ನೂರಾರು ಹಿಂದೂ ಹೆಣ್ಮಕ್ಕಳ ಮತಾಂತರ, ದೂರು ದಾಖಲು ಬಯಲಾಯ್ತು ಶಾಕಿಂಗ್ ಮಾಹಿತಿ!

* ಮತ್ತೆ ಸದ್ದು ಮಾಡಿದೆ ಧಾರ್ಮಿಕ ಮತಾಂತರ ವಿಚಾರ

* ನೂರಾರು ಹಿಂದೂ ಹೆಣ್ಮಕ್ಕಳ ಮತಾಂತರ

* ಇಸ್ಲಾಂ ಟ್ರಸ್ಟ್‌ ವಿರುದ್ಧ ಕೇಸ್, ಬಯಲಾಯ್ತು ಶಾಕಿಂಗ್ ಮಾಹಿತಿ!

Key Accused in Gujarat Fund Diversion Case Converted100 to 200 Hindu Girls to Islam pod
Author
Bangalore, First Published Nov 25, 2021, 12:59 AM IST

ಗಾಂಧೀನಗರ(ನ.15): ಗುಜರಾತ್‌ನಲ್ಲಿ (Gujarat) ವಿದೇಶಿ ನಿಧಿಯ ಮೂಲಕ ಚಾರಿಟಬಲ್ ಟ್ರಸ್ಟ್‌ನಿಂದ ಧರ್ಮ ಪರಿವರ್ತನೆ (Religion Conversion) ಆರೋಪಕ್ಕೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಇದರಲ್ಲಿ ಪ್ರಮುಖ ಆರೋಪಿಯಾಗಿರುವ ವ್ಯಕ್ತಿ ವಡೋದರಾದಲ್ಲಿ 100 ರಿಂದ 200 ಹಿಂದೂ ಯುವತಿಯರನ್ನು ಇಸ್ಲಾಂಗೆ (Islam) ಮತಾಂತರ ಮಾಡಿ ಹಣ ಬಳಸಿ ಮದುವೆ ಮಾಡಿಸಿದ ಆರೋಪವಿ  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಡೋದರಾ ಪೊಲೀಸರು ಮಂಗಳವಾರ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಇದರಲ್ಲಿ ಧಾರ್ಮಿಕ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಮತ್ತು ಅವರ ಸಹಚರರು ವಿದೇಶಿ ನಿಧಿಯ ಮೂಲಕ ಜನರನ್ನು ಅಕ್ರಮವಾಗಿ ಇಸ್ಲಾಂಗೆ ಮತಾಂತರಿಸಿದ್ದಾರೆ, ಮಸೀದಿಗಳನ್ನು (Masjid) ನಿರ್ಮಿಸುತ್ತಿದ್ದಾರೆ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನಾಕಾರರಿಗೆ ಮತ್ತು ದೆಹಲಿ ಗಲಭೆಯ ಆರೋಪಿಗಳಿಗೆ ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ 1860 ಪುಟಗಳ ಚಾರ್ಜ್‌ಶೀಟ್‌ನಲ್ಲಿ, 5 ಮಂದಿ ಆರೋಪಿಗಳಿದ್ದಾರೆ.

ಈ ಪ್ರಕರಣದ ಪ್ರಮುಖ ಆರೋಪಿ ದೆಹಲಿಯ ನಿವಾಸಿ ಮೊಹಮ್ಮದ್ ಉಮರ್ ಗೌತಮ್ 100 ರಿಂದ 200 ಹುಡುಗಿಯರನ್ನು ಇಸ್ಲಾಂಗೆ ಮತಾಂತರಿಸಿ ಮದುವೆ ಮಾಡಿದ್ದಾನೆ ಎಂದು ಪೊಲೀಸರು ಚಾರ್ಜ್ ಶೀಟ್‌ನಲ್ಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದಲ್ಲದೆ, ವಡೋದರಾ ಮೂಲದ ಎಎಫ್‌ಎಂಐ ಚಾರಿಟೇಬಲ್‌ನ ಮ್ಯಾನೇಜಿಂಗ್ ಟ್ರಸ್ಟಿ ಸಲಾವುದ್ದೀನ್ ಶೇಖ್ ಅವರ ನಿಕಟ ಸಹವರ್ತಿ ಗೌತಮ್, ಟ್ರಸ್ಟ್ ನಿಧಿಯ ಸಹಾಯದಿಂದ ವಿವಿಧ ಸಮುದಾಯಗಳ ಸುಮಾರು 1,000 ಜನರನ್ನು ಮತಾಂತರ ಮಾಡಿದ ಆರೋಪವೂ ಇದೆ.

ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿರುವುದಾಗಿ ಘೋಷಣೆ

ಇಸ್ಲಾಂಗೆ ಮತಾಂತರಗೊಂಡವರಲ್ಲಿ ಸುಮಾರು 10 ಮಂದಿ ಕಿವುಡರಾಗಿದ್ದು, ಕಿವಿ ಕೇಳಿಸುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಶೇಖ್ ಬಳಿ ಕೆಲಸ ಮಾಡುತ್ತಿದ್ದ ಗೌತಮ್, ಶೇಖ್ ಹಾಗೂ ಮೊಹಮ್ಮದ್ ಮನ್ಸೂರಿ ಎಂಬುವವರನ್ನು ಈಗಾಗಲೇ ಈ ಪ್ರಕರಣದಲ್ಲಿ ಬಂಧಿಸಲಾಗಿದೆ. ಲಂಡನ್ ಮೂಲದ ಭರೂಚ್ ಜಿಲ್ಲೆಯ ನಿವಾಸಿ ಅಬ್ದುಲ್ಲಾ ಫಫ್ಡಾವಾಲಾ ಮತ್ತು ಯುಎಇ ನಿವಾಸಿ ಮುಸ್ತಫಾ ಥಾನವಾಲಾ ಅವರನ್ನು ವಡೋದರಾ ಪೊಲೀಸರು ಪರಾರಿಯಾಗಿದ್ದಾರೆ ಎಂದು ಘೋಷಿಸಿದ್ದಾರೆ.

ವಂಚನೆಯಿಂದ ಜನರನ್ನು ಇಸ್ಲಾಂಗೆ ಮತಾಂತರಿಸುತ್ತಿದ್ದ ಆರೋಪದಲ್ಲಿ ಗೌತಮ್ ಅವರನ್ನು ಯುಪಿ ಎಸ್‌ಟಿಎಫ್ ಈ ವರ್ಷದ ಜೂನ್‌ನಲ್ಲಿ ಬಂಧಿಸಿತ್ತು.

ಆಗಸ್ಟ್‌ನಲ್ಲಿ ವಡೋದರಾ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು ಶೇಖ್, ಗೌತಮ್ ಮತ್ತು ಇತರ ಆರೋಪಿಗಳ ವಿರುದ್ಧ ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಇದರಲ್ಲಿ ವಿವಿಧ ಸಮುದಾಯಗಳ ನಡುವೆ ಧಾರ್ಮಿಕ ದ್ವೇಷವನ್ನು ಉತ್ತೇಜಿಸುವುದು, ನಕಲಿ ಮತ್ತು ಕ್ರಿಮಿನಲ್ ಪಿತೂರಿಗೆ ಸಂಬಂಧಿಸಿದ ವಿವಿಧ ಸೆಕ್ಷನ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಾದ ಶೇಖ್ ಮತ್ತು ಗೌತಮ್ ಇಬ್ಬರ ಕಸ್ಟಡಿಯನ್ನು ಈ ತಿಂಗಳ ಆರಂಭದಲ್ಲಿ ಯುಪಿ ಎಟಿಎಸ್ ನಿಂದ ಪಡೆಯಲಾಗಿದ್ದು, ಅವರಿಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ವಡೋದರಾ ಪೊಲೀಸರು ಹೇಳಿದ್ದಾರೆ. 

Follow Us:
Download App:
  • android
  • ios