Asianet Suvarna News Asianet Suvarna News

ಮಹಿಳಾ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ; ಕಾಂಗ್ರೆಸ್ ಯುವ ಮುಖಂಡ ಅರೆಸ್ಟ್

ಸಾರ್ವಜನಿಕ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಫೋನ್ ಇರಿಸಿ ವಿಡಿಯೋ ರೆಕಾರ್ಡ್ ಮಾಡಿದ ಆರೋಪದಡಿಯಲ್ಲಿ ಯುವ ಕಾಂಗ್ರೆಸ್ ಮುಖಂಡನ ಬಂಧನವಾಗಿದೆ.

kerala youth congress leader arrested
Author
First Published May 21, 2024, 11:12 AM IST

ತಿರುವನಂತಪುರ: ಸಾರ್ವಜನಿಕ ಮಹಿಳೆಯ ವಾಶ್‌ ರೂಮ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ ಆರೋಪದಡಿಯಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡನನ್ನು ಬಂಧಿಸಲಾಗಿದೆ. 30 ವರ್ಷದ ಆಶಿಕ್ ಬದರುದ್ದೀನ್ ಬಂಧಿತ ಆರೋಪಿ. ತಿರುವನಂತಪುರದ ಬಾಲಕಿಯರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿ ಆಶಿಕ್ ಬದರುದ್ದೀನ್ ಯೂತ್ ಕಾಂಗ್ರೆಸ್‌ ಪುನಲೂರ ಬ್ಲಾಕ್‌ನ ಪ್ರಧಾನ ಕಾರ್ಯದರ್ಶಿ ಎಂದು ವರದಿಯಾಗಿದೆ. ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಎಂಬ ಆರೋಪ ಆಶಿಕ್ ಬದರುದ್ದಿನ್ ವಿರುದ್ಧ ಕೇಳಿ ಬಂದಿದೆ.

Rave party: ರೇವ್ ಪಾರ್ಟಿಗೂ ಕಾಮನ್ ಪಾರ್ಟಿಗೂ ಇರುವ ವ್ಯತ್ಯಾಸವೇನು? ನಟಿ ಹೇಮಾ ವಿಡಿಯೋದಲ್ಲಿ ಹೇಳಿದ್ದೇನು..?

ಆರೋಪಿಯನ್ನು ಬಂಧಿಸಿ ನ್ಯಾಯಾಲಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ. ಪೊಲೀಸರು ಆರೋಪಿಯ ಮೊಬೈಲ್ ವಶಕ್ಕೆ ಪಡೆದು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.

Latest Videos
Follow Us:
Download App:
  • android
  • ios