Asianet Suvarna News Asianet Suvarna News

ತಂದೆ ನಿಧನದ ಬಳಿಕ ಪೊಲೀಸ್ ಕ್ಲರ್ಕ್ ಉದ್ಯೋಗ ಪಡೆದ ಯುವತಿಗೆ UPSCನಲ್ಲಿ 150ನೇ ರ‍್ಯಾಂಕ್!

  • ಕೇಂದ್ರ ಲೋಕಸೇವಾ ಆಯೋಗ ಪರೀಕ್ಷಾ ಫಲಿತಾಂಶ ಪ್ರಕಟ
  • ತಂದೆ ನಿಧನದಿಂದ ಕೆಲಸ ಪಡೆದ ಮಹಿಳೆಗೆ ರ‍್ಯಾಂಕ್
  • ಐಐಟಿ ಪದವೀದರನ UPSC ಪರೀಕ್ಷೆಯಲ್ಲಿ ಅಗ್ರಸ್ಥಾನ
     
Kerala Women to IIT Bombay graduate life story of UPSC exam toppers ckm
Author
Bengaluru, First Published Sep 25, 2021, 9:48 PM IST
  • Facebook
  • Twitter
  • Whatsapp

ನವದೆಹಲಿ(ಸೆ.25): ಕೇಂದ್ರ ಲೋಕಸೇವಾ ಆಯೋಗ ಪರೀಕ್ಷಾ(Union Public Service Commission) ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಹಲವು ವಿಶೇಷತೆಗಳು ಇವೆ. ಕೇರಳದ(Kerala) ಯುವತಿ 150ನೇ ರ‍್ಯಾಂಕ್ ಪಡೆಯುವ ಮೂಲಕ ಎಲ್ಲರ ಗಮನಸೆಳೆದಿದ್ದಾಳೆ. ತಂದೆ ನಿಧನದ ಬಳಿಕ ಪೊಲೀಸ್(police) ಇಲಾಖೆ ನೀಡಿದ ಕ್ಲರ್ಕ್ ಹುದ್ದೆ ಪಡೆದ ಮಿನ್ನು ಪಿಎಂ ಇದೀಗ UPSC ರ‍್ಯಾಂಕ್ ಮೂಲಕ ಉನ್ನತ ಹುದ್ದೆಗೆ ಭಡ್ತಿ ಪಡೆಯಲಿದ್ದಾರೆ.

ಮಲೆನಾಡ ಪ್ರತಿಭೆ ಐಎಎಸ್ ಪರೀಕ್ಷೆಯಲ್ಲಿ ರ‍್ಯಾಂಕ್

ತಂದೆ ನಿಧನದ ಬಳಿಕ 2012ರಲ್ಲಿ ಮಿನ್ನುಗೆ ಪೊಲೀಸ್ ಇಲಾಖೆ ಕ್ಲರ್ಕ್ ಹುದ್ದೆ ನೀಡಿತ್ತು. ಸಂಕಷ್ಟದಲ್ಲಿದ್ದ ಕುಟುಂಬದ ಜವಾಬ್ದಾರಿ ಹೊತ್ತುಕೊಂಡು ಯವತಿ ಮಿನ್ನು ಕ್ಲರ್ಕ್ ಹುದ್ದೆ ಆಹ್ವಾನ ಸ್ವೀಕರಿಸಿದರು. ಆದರೆ ಮಿನ್ನುಗೆ ಇದು ತಂದೆಯ ನಿಧನದಿಂದ ಸಿಕ್ಕಿದ ಕೆಲಸ. ನನ್ನ ಪ್ರತಿಭಯಿಂದ ಪಡೆದ ಕೆಲಸವಲ್ಲ. ಇಷ್ಟಕ್ಕೆ ನಾನು ಸೀಮಿತವಾಗಬಾರದು. ನನ್ನ ಸಾಮರ್ಥ್ಯ ಇರಲೇಬೇಕು ಎಂದು ಲೋಕಸೇವಾ ಆಯೋಗ ಪರೀಕ್ಷೆ(UPSC) ಅಭ್ಯಾಸದಲ್ಲಿ ತೊಡಗಿದ್ದಳು. 

UPSC ಪರೀಕ್ಷೆ ಬರೆದ ಮಿನ್ನುಗೆ 150ನೇ ಸ್ಥಾನ ಪಡೆದಿದ್ದಾರೆ.  2015ರಿಂದ  UPSC ಪರೀಕ್ಷೆ ಅಭ್ಯಾಸ ಆರಂಭಿಸಿದ ಮಿನ್ನು ಸತತ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾರೆ. ಮಿನ್ನು ಪಿಎಂ 2017ರಲ್ಲಿ ಪ್ರಮುಖ ಪರೀಕ್ಷೆ ಪಾಸ್ ಮಾಡಿದ್ದಾರೆ. ಆದರೆ ಸಂದರ್ಶದನಲ್ಲಿ 13 ಅಂಕಗಳಿಂದ ಅವಕಾಶ ಕಳೆದುಕೊಂಡರು. ಛಲಬಿಡದ ಮಿನ್ನು ಇದೀಗ ಅದ್ಭುತ ಸಾಧನೆ ಮೂಲಕ ಉತ್ತೀರ್ಣರಾಗಿದ್ದಾರೆ.

 

2015 UPSC ಟಾಪರ್ ತಂಗಿಗೂ ರ‍್ಯಾಂಕ್..! ದಲಿತ ಸಹೋದರಿಯರ ಸಾಧನೆ

30 ವರ್ಷದ ಮಿನ್ನು ಪೊಲೀಸ್ ಹೆಡ್‌ಕ್ವಾರ್ಟರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳು ನೀಡಿದ ಪ್ರೋತ್ಸಾಹ ಹಾಗೂ ಬೆಂಬಲದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಮಿನ್ನು ಹೇಳಿದ್ದಾರೆ.

ಶುಭಂ ಕುಮಾರ್(ಐಐಟಿ)
ಇದೇ ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆಯಲ್ಲಿ ಸಾಧಕರ ಪಟ್ಟಿ ದೊಡ್ಡದಿದೆ. ಕುತೂಹಲ ವಿಚಾರ ಅಂದರೆ ಬಾಂಬೆ ಐಐಟಿ ಪದವೀಧರ ಶುಭಂ ಕುಮಾರ್ ಅಗ್ರಸ್ಥಾನದ ಮೂಲಕ UPSC ಉತ್ತೀರ್ಣರಾಗಿದ್ದಾರೆ. 

ತಂದೆಯ ಕನಸು ನನಸು ಮಾಡಿದ ಪುತ್ರ: ಯುಪಿಎಸ್ಸಿಯಲ್ಲಿ ಹುಬ್ಳಿ ಹುಡುಗನ ಸಾಧನೆ..!

ಬಾಂಬೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಿವಿಲ್ ಎಂಜಿನೀಯರಿಂಗ್ ಪಡೆದಿರುವ ಶುಭಂ ಕುಮಾರ್ UPSC ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಮಾನಶಾಸ್ತ್ರ ವಿಷಯವನ್ನು ಐಚ್ಚಿಕ ವಿಷಯವಾಗಿ ತೆಗೆದುಕೊಂಡು ಅರ್ಹತೆ ಪಡೆದುಕೊಂಡಿದ್ದಾರೆ. 

Follow Us:
Download App:
  • android
  • ios